ಮಾರುಕಟ್ಟೆಗೆ ವಿಶ್ವದ ಮೊದಲ ತಿರುಗಬಲ್ಲ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath
|

ಚೀನಾ ಮೂಲದ ಒಪ್ಪೋ ಕಂಪೆನಿಯ ವಿಶ್ವದ ಮೊದಲ ತಿರುಗುವ ಕ್ಯಾಮೆರಾವಿರುವ ಒಪ್ಪೋ ಎನ್‌1 ಸಿಂಗಲ್‌ ಸಿಮ್ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 16 ಜಿಬಿ ಆಂತರಿಕ ಮೆಮೊರಿ ಸ್ಮಾರ್ಟ್‌‌ಫೋನಿಗೆ ಒಪ್ಪೋ 39,999 ರೂಪಾಯಿ ನಿಗದಿ ಮಾಡಿದೆ.

ಅಲ್ಯೂಮಿನಿಯಂ ದೇಹವಿರುವ ಸ್ಮಾರ್ಟ್‌ಫೋನ್‌ ವಿಶ್ವದ ಮಾರುಕಟ್ಟೆ ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಸ್ಮಾರ್ಟ್‌‌ಫೋನ್‌ಆಂಡ್ರಾಯ್ಡ್‌ ಓಪನ್‌ ಸೋರ್ಸ್‌ CyanogenMod 4.2 ಜೆಲ್ಲಿ ಬೀನ್‌ ಓಎಸ್‌ ಮತ್ತು ಶಕ್ತಿಶಾಲಿಯಾದ 3610 mAh ಬ್ಯಾಟರಿಯನ್ನು ಹೊಂದಿದೆ.

ಬಹುತೇಕ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಹಿಂದೆ ಮತ್ತು ಮುಂದೆ ಕ್ಯಾಮೆರಾ ಇರುತ್ತದೆ.ಆದರೆ ಈ ಸ್ಮಾರ್ಟ್‌ಫೋನಿಗೆ ಒಂದೇ ಕ್ಯಾಮೆರಾವಿದ್ದು ಈ ಕ್ಯಾಮೆರಾವನ್ನು206 ಡಿಗ್ರಿಯವರೆಗೆ ತಿರುಗಿಸಬಹುದಾಗಿದೆ.ಹೀಗಾಗಿ ಕ್ಯಾಮೆರಾವನ್ನು ಗ್ರಾಹಕರು ಕೈಯಲ್ಲಿ ತಿರುಗಿಸುವ ಮೂಲಕ ಹಿಂದೆ ಮತ್ತು ಮುಂದುಗಡೆಯ ದೃಶ್ಯವನ್ನು ಕ್ಲಿಕ್ಕಿಸಬಹುದು.ಅಷ್ಟೇ ಅಲ್ಲದೇ ಒಪ್ಪೊ ಸ್ಮಾರ್ಟ್‌‌ಫೋನ್‌ ಆರು ಲೆನ್ಸ್‌ ಜೊತೆಗೆ ಸಿಮೊಸ್‌ ಸೆನ್ಸರ್‌‌ಗಳನ್ನು ಹೊಂದಿದೆ. f/2.0 ಅಪರ್ಚರ್‌ ಮೂಲಕ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋಗಳನ್ನು ತೆಗೆಯಬಹುದಾಗಿದೆ.

ಹಾರ್ಡ್‌ವೇರ್‌ ಕ್ಷೇತ್ರದಲ್ಲಿ ಹೆಚ್ಚು ಪರಿಣಿತಿ ಪಡೆದಿರುವ ಚೈನಾ ಕಂಪೆನಿಗಳು ಹೊಸ ವಿಶೇಷತೆಗಳಿರುವ ಸ್ಮಾರ್ಟ್‌ಫೋನ್‌ಗಳನ್ನು ಕೆಲವೊಮ್ಮೆ ತಯಾರಿಸಿ ಬಿಡುಗಡೆ ಮಾಡುತ್ತಿರುತ್ತವೆ. ಕ್ಯಾಮೆರಾ ವಿಶೇಷತೆಗೆ ಸಂಬಂಧಿಸಿದಂತೆ ಈ ಹಿಂದೆ ಮುಂದುಗಡೆ 8 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನನ್ನು ಜಿಯೋನೀ ಮತ್ತು ಝೆನ್‌ ಕಂಪೆನಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಮತ್ತು ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಬಳಸಲಾಗಿರುವ ತಂತ್ರಜ್ಞಾನವನ್ನು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಸ್ಮಾರ್ಟ್‌‌‌ಫೋನ್‌ಗಳ ಆಕರ್ಷಕ ಚಿತ್ರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

1

1


1.7 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ 600 ಕ್ವಾಡ್‌ ಕೋರ್‌ ಪ್ರೊಸೆಸರ್‌,Adreno 320 ಗ್ರಾಫಿಕ್‌ ಪ್ರೊಸೆಸರ್‍,2 GB RAM,16/32 GB ಆಂತರಿಕ ಮೆಮೊರಿಯನ್ನು ಹೊಂದಿದೆ.

2

2


1920 x 1080 ಪಿಕ್ಸೆಲ್‌ ರೆಸೂಲೂಶನ್‌,377 ಪಿಪಿಐ ,ಗೊರಿಲ್ಲಾ ಗ್ಲಾಸ್‌ ಹೊಂದಿರುವ 5.9 ಇಂಚಿನ ಐಪಿಎಸ್‌ ಕೆಪಾಸಿಟಿ‌ವ್‌ ಟಚ್‌ಸ್ಕ್ರೀನ್‌ನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

3

3


ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13 ಎಂಪಿ ಕ್ಯಾಮೆರಾ,f/2.0 ಅಪರ್ಚರ್‌ನ್ನು ಕ್ಯಾಮೆರಾ ಹೊಂದಿದೆ.ಜೊತೆಗೆ ನಾರ್ಮಲ್‌,ಪನೋರಮಾ,ಹೈಸ್ಪೀಡ್‌,ರಿವಿಂಡ್‌‌, ಬ್ಯೂಟಿಫೈ,ಮತ್ತು ಸ್ಲೋ ಶಟರ್‌ ಮೊಡ್‌ಗಳ ಮೂಲಕ ಫೋಟೋ ಕ್ಲಿಕ್‌ ಮಾಡಬಹುದಾಗಿದೆ.

4

4


ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ವಿಶೇಷತೆಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

5

5


ಲೈಟ್‌ ಸೆನ್ಸರ್‌,ಜಿ ಸೆನ್ಸರ್‌,4 ಡಿ ಗೈರೋಸ್ಕೋಪ್ ಸೆನ್ಸರ್‌ ಮತ್ತು 3610 mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

6

6


170.7x82.6x9 ಮಿ.ಮೀ ಗಾತ್ರ,213 ಗ್ರಾಂ ತೂಕವನ್ನು ಸ್ಮಾರ್ಟ್‌‌ಫೋನ್‌ ಹೊಂದಿದೆ.

7

ವಿಡಿಯೋ ವೀಕ್ಷಿಸಿ

8

ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X