Realme: ಇಂದು Realme GT 6 ಫಸ್ಟ್ ಸೇಲ್.. ಭರ್ಜರಿ ಫೀಚರ್ಸ್, ಭರಪೂರ ಡಿಸ್ಕೌಂಟ್
ರಿಯಲ್‌ಮಿ (Realme) ಕಂಪನಿಯ Realme GT 6 ಮೊಬೈಲ್ ಇತ್ತೀಚೆಗೆ ತನ್ನ ಸ್ಟೈಲಿಶ್ ಲುಕ್ ಮತ್ತು ಅತ್ಯಾಕರ್ಷಕ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು. ರಿಯಲ್‌ಮಿ ಸಂಸ್ಥೆಯ ಈ ಫೋನ್ ಬೆಲೆ, ಡಿಸೈನ್ ಹಾಗೂ ಅದ್ಭುತ ಫೀಚರ್ಸ್‌ಗಳು ಮೊಬೈಲ್ ಪ್ರಿಯರ ಗಮನ ಸೆಳೆದಿತ್ತು. ಈ ಮೊಬೈಲ್ ಇಂದು (ಜೂನ್ 25) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿಯ ಇ-ಸ್ಟೋರ್‌ನಲ್ಲಿ ಅಧಿಕೃತವಾಗಿ ಮಾರಾಟ ಆರಂಭಿಸಲಿದೆ. ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಿದ್ದವಾಗಿರುವ ಈ ಫೋನ್ ಖರೀದಿಸಲು ಮೊಬೈಲ್ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ ಮತ್ತು ಆಫರ್‌ಗಳ ಬಗ್ಗೆ ತಿಳಿಯೋಣ ಬನ್ನಿ.
ರಿಯಲ್‌ಮಿ ಜಿಟಿ 6 ಕಳೆದ ವಾರ ಭಾರತದಲ್ಲಿ ಮೊದಲ AI ಫೋನ್ ಆಗಿ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಯಿತು. ಇದು Snapdragon 8s Gen 3 ಪ್ರೊಸೆಸರ್ ಹೊಂದಿದೆ. ಜೊತೆಗೆ, ಅಸಂಖ್ಯಾತ AI ವೈಶಿಷ್ಟ್ಯಗಳೊಂದಿಗೆ ಲಾಂಚ್ ಆಗಿತ್ತು. ಪ್ರೊಸೆಸರ್ ಹೊರತಾಗಿ, Realme GT ಅತ್ಯಾಕರ್ಷಕ ಡಿಸ್ಪ್ಲೇ, ದೊಡ್ಡ ಬ್ಯಾಟರಿ, ಸೂಪರ್-ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು ಅತ್ಯಾಧುನಿಕ ಕ್ಯಾಮೆರಾಗಳನ್ನು ಸಹ ಹೊಂದಿದೆ. ರಿಯಲ್‌ಮಿ GT 6 ಇಂದು ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಭಾರತದಲ್ಲಿ Realme GT 6 ಮಾರಾಟ, ಬೆಲೆ, ಆಫರ್‌ಗಳು
ಭಾರತದಲ್ಲಿ Realme GT 6 ಮಾರಾಟವು ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿಯ ಇ-ಸ್ಟೋರ್ ಮೂಲಕ ನಡೆಯಲಿದೆ. ಭಾರತದಲ್ಲಿ ರಿಯಲ್‌ಮಿ ಜಿಟಿ ಬೆಲೆಯು ಮೂಲ 8GB/256GB ಮಾದರಿಗೆ ರೂ 40,999 ರಿಂದ ಪ್ರಾರಂಭವಾಗುತ್ತದೆ. ಇದು ವಿಶೇಷ ಬೆಲೆ ಮತ್ತು ಕೊಡುಗೆಗಳಲ್ಲಿ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಫೋನ್ ಎರಡು ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ. Fluid Silver and Razor Green ಕಲರ್‌ನಲ್ಲಿ ಖರೀದಿಸಬಹುದು.
- 8GB + 256GB ಸ್ಟೋರೇಜ್ ವೇರಿಯಂಟ್ ಬೆಲೆಯು 40,999 ರೂ. ಇದೆ. ಮತ್ತು 4,000 ರೂ. ಬ್ಯಾಂಕ್ ಆಫರ್ (ICICI ಬ್ಯಾಂಕ್, HDFC ಬ್ಯಾಂಕ್ ಮತ್ತು SBI ಕಾರ್ಡ್‌ಗಳ ಮೇಲೆ) ಮತ್ತು 1,000 ರೂ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ 35,999 ರೂ. ನಲ್ಲಿ ಖರೀದಿಗೆ ಲಭ್ಯವಿರುತ್ತದೆ.
- 12GB + 256GB ಸ್ಟೋರೇಜ್ ವೇರಿಯಂಟ್ ಬೆಲೆಯು 42,999 ರೂ.ನಲ್ಲಿ ಲಭ್ಯವಿದೆ. 3,000 ರೂ. ಬ್ಯಾಂಕ್ ಆಫರ್ ಮತ್ತು 1,000 ರೂ. ಎಕ್ಸ್‌ಚೇಂಜ್ ಕೊಡುಗೆಯೊಂದಿಗೆ 38,999 ರೂ.ಗೆ ಖರೀದಿಸಬಹುದು.
- 16GB + 512GB ಸ್ಟೋರೇಜ್ ವೇರಿಯಂಟ್ ಬೆಲೆಯು 44,999 ರೂ. ಇದೆ. 4,000 ರೂ. ಬ್ಯಾಂಕ್ ಆಫರ್ ಮತ್ತು 1,000 ರೂ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ 39,999 ರೂ.ನಲ್ಲಿ ನೀವು ಕೊಂಡೊಕೊಳ್ಳಬಹುದು.
ರಿಯಲ್‌ಮಿ ಜಿಟಿ 6 ವಿಶೇಷತೆಗಳು
ರಿಯಲ್‌ಮಿ ಜಿಟಿ 6 ಆಂಡ್ರಾಯ್ಡ್ 14 ಆಧಾರಿತ Realme UI 5.0ನಲ್ಲಿ ಕಾರ್ಯನಿರ್ವಹಿಸುತ್ತದೆ. 6.78 ಇಂಚಿನ ಫುಲ್ HD+ (1,264x2,780 ಪಿಕ್ಸೆಲ್‌ಗಳ) 8T LTPO ಅಮೋಲ್ಡ್ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್‌ನೊಂದಿಗೆ HDR 10+ ಬೆಂಬಲ ಮತ್ತು ಡಾಲ್ಬಿ ವಿಷನ್ ಬೆಂಬಲ ಪಡೆದಿದೆ. ಡಿಸ್‌ಪ್ಲೇ 6,000 nitsಗಳ ಗರಿಷ್ಟ ಬ್ರೈಟ್‌ನೆಸ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಒಳಗೊಂಡಿದೆ.

Next AI ಫೀಚರ್: ಇದರಿಂದ ಲಾಭವೇನು?
ರಿಯಲ್‌ಮಿ ಜಿಟಿ 6 ಫೋನ್‌ನ ಮತ್ತೊಂದು ವಿಶಿಷ್ಟ ಫೀಚರ್ ಎಂದರೆ Next AI. ಕಾರ್ಯಕ್ಷಮತೆ ಮತ್ತು ಉಪಯುಕ್ತತೆಯನ್ನು ಹೆಚ್ಚಿಸಲು ಈ ಫೋನ್ Realme NEXT AI ಅನ್ನು ಸಹ ಒಳಗೊಂಡಿದೆ. ಈ ತಂತ್ರಜ್ಞಾನವು ಹ್ಯಾಂಡ್‌ಸೆಟ್‌ನೊಂದಿಗೆ ಉತ್ತಮವಾದ ಸಂವಹನ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ವೈಯಕ್ತೀಕರಿಸಿದ ಅಪ್ಲಿಕೇಶನ್ ಸಲಹೆಗಳಿಂದ ಆಪ್ಟಿಮೈಸ್ ಮಾಡಿದ ಕಾರ್ಯಕ್ಷಮತೆಯವರೆಗೆ, ಅರ್ಥಗರ್ಭಿತ ಅನುಭವವನ್ನು ಒದಗಿಸುವ ಮೂಲಕ ಹೊಸ GT 6 ಗ್ರಾಹಕರ ಅಗತ್ಯಗಳಿಗೆ ಹೊಂದಿಕೊಳ್ಳುತ್ತದೆ.
ಈ ಫೋನ್‌ನ ಪ್ರೊಸೆಸರ್ ಏನು?
ಈ ರಿಯಲ್‌ಮಿ ಜಿಟಿ 6 ಫೋನ್ 4nm ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s Gen 3 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 16GB RAM ಮತ್ತು 512B ವರೆಗಿನ ಗರಿಷ್ಠ ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಇದು ಕೂಲಿಂಗ್ ದಕ್ಷತೆಯನ್ನು ಹೆಚ್ಚಿಸಲು 10,014mm ಚದರ 3D ಟೆಂಪರ್ಡ್ ಡ್ಯುಯಲ್ VC ವ್ಯವಸ್ಥೆಯನ್ನು ಹೊಂದಿದೆ.
ವಾವ್ ಎನಿಸುವ ಕ್ಯಾಮೆರಾ ಸೆಟಪ್
ಈ ಸ್ಮಾರ್ಟ್‌ಫೋನ್ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಘಟಕ ಹೊಂದಿದೆ. 50MP Sony LYT 808 ಸೆನ್ಸಾರ್, f/1.69 ಅಪರ್ಚರ್ ಮತ್ತು OIS ಬೆಂಬಲ ಹೊಂದಿದೆ. ಕ್ಯಾಮೆರಾ ಸೆಟಪ್ 50MP ಸ್ಯಾಮ್‌ಸಂಗ್ JN5 ಟೆಲಿಫೋಟೋ ಸೆನ್ಸಾರ್ ಮತ್ತು 8MP ಸೋನಿ IMX355 ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಇದು ಮುಂಭಾಗದಲ್ಲಿ f/2.45 ದ್ಯುತಿರಂಧ್ರದೊಂದಿಗೆ 32MP ಕ್ಯಾಮೆರಾ ಹೊಂದಿದೆ. ಕ್ಯಾಮೆರಾ ಸೆಟಪ್ ಡಾಲ್ಬಿ ವಿಷನ್ ಬೆಂಬಲದೊಂದಿಗೆ 30fps ನಲ್ಲಿ 4K ವಿಡಿಯೋ ಸೆರೆ ಹಿಡಿಯಬಹುದು.


Click it and Unblock the Notifications








