Home
ಮೊಬೈಲ್

ಸದ್ದಿಲ್ಲದೆ Redmi 14R 5G ಬಿಡುಗಡೆ; ಅದೂ ಕಡಿಮೆ ಬೆಲೆಗೆ, ಹೇಗಿದೆ?

ರೆಡ್ಮಿ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸಿಹಿ ಸುದ್ದಿ ಇದು. ಸದ್ದಿಲ್ಲದೇ ಹೊಸ 5G ಫೋನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೌದು, ಶಿಯೋಮಿಯ (Xiaomi) ಉಪ-ಬ್ರಾಂಡ್ ರೆಡ್ಮಿ (Redmi) ಇದೇ ತಿಂಗಳು ಚೀನಾದಲ್ಲಿ ರೆಡ್ಮಿ ನೋಟ್ 14 (Redmi Note 14) ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಫೋನಿನ ಬಿಡುಗಡೆಗೆ ಸಂಬಂಧಿಸಿದಂತೆ ಕಂಪನಿಯು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಈ ಮಧ್ಯೆಯೇ, ಶಿಯೋಮಿ ತನ್ನ ದೇಶೀಯ ಮಾರುಕಟ್ಟೆಯಲ್ಲಿ ರೆಡ್ಮಿ ಶ್ರೇಣಿಯೊಳಗೆ ನೂತನ ರೆಡ್ಮಿ 14R 5G (Redmi 14R 5G) ಫೋನನ್ನು ಲಾಂಚ್ ಮಾಡಿದೆ.

ರೆಡ್ಮಿ 14R 5G ಫೋನನ್ನು ಭಾರತದಲ್ಲಿ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ರೆಡ್ಮಿ 13 ಸರಣಿಯ ಅಪ್ಡೇಟ್‌ ಆವೃತ್ತಿಯನ್ನು ಇನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ರೆಡ್ಮಿ 14 ಸರಣಿಯ ಬಿಡುಗಡೆಯೊಂದಿಗೆ, ಈ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಬನ್ನಿ, ಈ ಹೊಸ ರೆಡ್ಮಿ 14R 5G ಫೋನಿನ ಬೆಲೆ ಮತ್ತಯ ವೈಶಿಷ್ಟ್ಯಗಳನ್ನು ತಿಳಿಯೋಣ.

ಸದ್ದಿಲ್ಲದೆ Redmi 14R 5G ಬಿಡುಗಡೆ; ಅದೂ ಕಡಿಮೆ ಬೆಲೆಗೆ, ಹೇಗಿದೆ?

ರೆಡ್ಮಿ 14R 5G ಫೋನಿನ ಬೆಲೆ ಮತ್ತು ಲಭ್ಯತೆ

4GB + 128GB ಸ್ಟೋರೇಜ್‌ ಬೆಲೆ = 12,960 ರೂ.
6GB + 128GB ಸ್ಟೋರೇಜ್‌ ಬೆಲೆ = 17,680 ರೂ.
8GB + 128GB ಸ್ಟೋರೇಜ್‌ ಬೆಲೆ = 20,040 ರೂ.
8GB + 256GB ಸ್ಟೋರೇಜ್‌ ಬೆಲೆ = 22,400 ರೂ.

ಕಂಪನಿಯು ರೆಡ್ಮಿ 14R 5G ಫೋನನ್ನು ನಾಲ್ಕು RAM ಮತ್ತು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ನೀವು, ಕಂಪನಿಯ ಸೈಟ್‌ನಿಂದ ಈ ಫೋನನ್ನು ಖರೀದಿಸಬಹುದು. ಈ ಫೋನ್ ಶಾಡೋ ಬ್ಲ್ಯಾಕ್, ಡೀಪ್ ಸೀ ಬ್ಲೂ, ಲ್ಯಾವೆಂಡರ್ ಮತ್ತು ಆಲಿವ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ರೆಡ್ಮಿ 14R 5G ಫೋನಿನ ವಿನ್ಯಾಸ

ರೆಡ್ಮಿ 14R ಫೋನಿನ ತೂಕವು 205.39 ಗ್ರಾಂ ನಿಂದ 212.35 ಗ್ರಾಂ ವರೆಗೆ ಇದೆ. ಇದರ ಗಾತ್ರ 171.88 x 77.8 x 8.22 ಮಿಮೀ. ಫೋನಿನ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಇದೆ. ಇದು ಸ್ವಲ್ಪ ಎತ್ತರದಲ್ಲಿದೆ. ಕಂಪನಿಯ ಬ್ರ್ಯಾಂಡಿಂಗ್ ಅನ್ನು ಕೆಳಭಾಗದಲ್ಲಿ ಕಾಣಬಹುದು. ಮುಂಭಾಗದಲ್ಲಿ ಪಂಚ್-ಹೋಲ್ ಡಿಸ್ಪ್ಲೇ ಇದೆ. ಬಲಭಾಗದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳನ್ನು ನೀಡಲಾಗಿದೆ. ಫೋನಿನ ಕೆಳಭಾಗದಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು ಸ್ಪೀಕರ್ ಗ್ರಿಲ್ ಇದೆ.

ರೆಡ್ಮಿ 14R 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ರೆಡ್ಮಿ 14R 5G ಫೋನ್ 6.88 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 1640 x 720p ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದಲ್ಲದೆ, 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಪಡೆದಿದೆ.

ಪ್ರೊಸೆಸರ್: ಕಂಪನಿಯು ರೆಡ್ಮಿ 14R 5G ಫೋನಿನಲ್ಲಿ Snapdragon 4 Gen 2 ಪ್ರೊಸೆಸರ್ ಅನ್ನು ಅಳವಡಿಸಿದೆ. ಇದು ರೆಡ್ಮಿ 13R ಫೋನಿನಲ್ಲಿ ಬಳಸಲಾದ ಡೈಮೆನ್ಸಿಟಿ 6100+ ಗಿಂತ ಉತ್ತಮವಾಗಿದೆ. ಈ ಫೋನ್ Android 14 ಆಧಾರಿತ HyperOS ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಈ ಸುದ್ದಿ ಓದಿದ್ದೀರಾ?: Tecno: ನಾಳೆ ಹೊಸ 5G ಫೋನ್ ಮಾರಾಟ: ಕಡಿಮೆ ಬೆಲೆ.. ಜೊತೆಗೆ 2,000 ಆಫರ್‌!

ಕ್ಯಾಮೆರಾ: ರೆಡ್ಮಿ 14R 5G ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋಟೋಗಳನ್ನು ತೆಗೆದುಕೊಳ್ಳಲು ಮತ್ತು ವಿಡಿಯೋ ಕರೆಗಳನ್ನು ಮಾಡಲು ಈ ಕ್ಯಾಮೆರಾ ಸಾಕಷ್ಟು ಉತ್ತಮವಾಗಿದೆ.

ಬ್ಯಾಟರಿ: ರೆಡ್ಮಿ 14R 5G ಮೊಬೈಲ್ 5160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಕಂಪನಿಯು ಬಾಕ್ಸ್‌ನಲ್ಲಿ 10W ಚಾರ್ಜರ್ ಅನ್ನು ಸಹ ಒದಗಿಸಿದೆ. ಈ ಫೋನ್ 18W ವೇಗದ ಚಾರ್ಜಿಂಗ್ ಅನ್ನು ಹೊಂದಿದೆ. ನೀವು ಒಂದೇ ಬಾರಿಗೆ ಸಾಧನವನ್ನು ಚಾರ್ಜ್ ಮಾಡಬಹುದು ಮತ್ತು ಇಡೀ ದಿನ ಬಳಸಬಹುದು.

ಇತರೆ ವೈಶಿಷ್ಟ್ಯಗಳು: ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಡ್ಯುಯಲ್ ಸಿಮ್ ಸಾಮರ್ಥ್ಯ, ಮೈಕ್ರೊ ಎಸ್‌ಡಿ ಕಾರ್ಡ್ ಬೆಂಬಲ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಸಿಂಗಲ್ ಸ್ಪೀಕರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Redmi 14R 5G with Snapdragon 4 Gen 2 SoC launched in China: price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+