ಲಿನೊವೊ ಸ್ಮಾರ್ಟ್‍ಫೋನ್ 2017 ರಲ್ಲಿ ಬಿಡುಗಡೆಯಾಗುವ ಗಾಳಿಸುದ್ದಿ

  ಸ್ಮಾರ್ಟ್‍ಫೋನ್‍ಗಳ ಮೇಲೆ ಅವಲಂಬಿತರಾಗಿದ್ದೇವೆ ಎನ್ನುವುದನ್ನು ಯಾರು ಇಲ್ಲವೆನ್ನಲಾಗದು. ಹಾಗಿರುವಾಗ ನಾವು ಬಹಳಷ್ಟು ಸಮಯವನ್ನು ಆಪ್ ಡೌನ್‍ಲೋಡ್ ಮಾಡುವುದರಲ್ಲಿ ಮತ್ತು ಬ್ಯಾಟರಿ ಜೀವನ ಹೇಗೆ ಹೆಚ್ಚಿಸಿಕೊಳ್ಳುವುದು ಮತ್ತು ಸಂಗ್ರಹಣಾ ಸಾಮಥ್ರ್ಯ ಹೇಗೆ ಸಮರ್ಪಕವಾಗಿ ಬಳಸುವುದು ಎನ್ನುವುದನ್ನು ತಿಳಿದುಕೊಳ್ಳಲು ನೋಡುತ್ತಿರುತ್ತೇವೆ.

  ಲಿನೊವೊ ಸ್ಮಾರ್ಟ್‍ಫೋನ್ 2017 ರಲ್ಲಿ ಬಿಡುಗಡೆಯಾಗುವ ಗಾಳಿಸುದ್ದಿ

  ನಾವು ವಿವಿಧ ಕಾರಣಗಳಿಗೆ ಫೋನ್ ನಲ್ಲಿ ಕಾಲ ಹರಣ ಮಾಡುತ್ತಿದ್ದರೂ ಕೂಡ ನಮ್ಮಲ್ಲಿ ಬಹಳಷ್ಟು ಜನ ತಂತ್ರಜ್ಞಾನ ಮತ್ತು ಫೀಚರ್ಸ್ ನಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ ಫೋನ್ ಅನ್ನು ಮೇಲ್ಮಟ್ಟಕ್ಕೆ ಒಯ್ಯುವಾಗ.

  ಇನ್ನೊಂದೆಡೆ ನೋಡಿದಾಗ, 2016 ರಲ್ಲಿ ಹೊಸ ಫೋನ್ ಕೊಳ್ಳದಿದ್ದರೆ ಬಹುಶಃ 2017 ರಲ್ಲಿ ಎಂತಹ ಫೋನ್ ಬರಬಹುದು ಎಂತಹ ಫೀಚರ್ಸ್ ಇರಬಹುದು ನಮ್ಮ ಇಷ್ಟದ ಉತ್ಪಾದಕರ ಫೋನಿನಲ್ಲಿ ಎನ್ನುವ ಕುತೂಹಲ ಇರಬಹುದು.

  ಹೌದು, 2017 ರಲ್ಲಿ ಮೆಚ್ಚುವಂತಹ ಸ್ಮಾರ್ಟ್‍ಫೋನ್ ಗಳು ಬರಲಿವೆ. ಆದರೆ, ನಾವಿಂದು ಲಿನೊವೊ ದ ಹೊಸ ಸ್ಮಾರ್ಟ್‍ಫೋನ್ ಬಗ್ಗೆ ನೋಡೊಣ.

  ಲಿನೊವೊ ಸ್ಮಾರ್ಟ್‍ಫೋನ್ 2017 ರಲ್ಲಿ ಬಿಡುಗಡೆಯಾಗುವ ಗಾಳಿಸುದ್ದಿ

  ಹೇಳಬೇಕೆಂದರೆ, ಸುದ್ದಿಯಲ್ಲಿರುವ ಸ್ಮಾರ್ಟ್‍ಫೋನ್ ಅದುವೇ ಲಿನೊವೊ ಜುಕ್ ಎಡ್ಜ್ ಸ್ಮಾರ್ಟ್‍ಫೋನ್. ಈ ಫೋನ್ ¨ಗ್ಗೆ ಬಂದ ಸುದ್ದಿಯ ಪ್ರಕಾರ ಈ ಫೋನ್ ಚೈನಾದಲ್ಲಿ ಮಾತ್ರ ಬಿಡುಗಡೆಗೊಂಡಿದೆ, ಪ್ರಪಂಚದಾದ್ಯಂತ ಬಿಡುಗಡೆಯಾಗುವುದು ಒಗಟಾಗಿ ಉಳಿದಿದೆ.

  ಫೋನಿನ ಫೀಚರ್ಸ್ ಹೇಳುವುದಾದರೆ, ಜುಕ್ ಎಡ್ಜ್ ನ ಮೂಖ್ಯಾಂಶ 2.35 ಗಿಗಾ ಹಡ್ಜ್ ಕ್ವಾಲ್‍ಕೊಮ್ ಸ್ನಾಪ್‍ಡ್ರಾಗನ್ 821 ಎಸ್‍ಒಸಿ, ಇದನ್ನು ಬಿಟ್ಟರೆ 5.5 ಇಂಚ್ ಸಂಪೂರ್ಣ ಎಚ್‍ಡಿ ಟಿಡಿಡಿಐ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ ಹೊಂದಿದ್ದು 86.4 ಶೇಕಡಾ ಪರದೆ ಯಿಂದ ಫೋನಿನ ಅಂಗದ ಅನುಪಾತವಾಗಿದೆ.

  ಓದಿರಿ: ಡೇಟಾ ಖಾಲಿ ಆಯ್ತಾ, ವೈ-ಫೈ ಕೂಡ ಇಲ್ವಾ..? ಆದ್ರೂ ಇಂಟರ್ನೆಟ್ ಬೇಕಾ..?

  ಈ ಫೋನ್ ಯುಎಸ್‍ಬಿ ಟೈಪ್-ಸಿ(ವಿ3.1) ಪೊರ್ಟ್ ಮತ್ತು ಅಂಡರ್‍ಗ್ಲಾಸ್ ಯು ಟಚ್ ಫಿಂಗರ್‍ಪ್ರಿಂಟ್ ಸೆನ್ಸರ್ ನೊಂದಿಗೆ ಬರಲಿದ್ದು 0.09 ಸೆಕೆಂಡಿನಲ್ಲಿ ಫೋನ್ ತೆರೆಯುವಂತೆ ಮಾಡುತ್ತದೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ರಕ್ತ ಆಮ್ಲಜನಕ ಹೃದಯ ಬಡಿತ ಮಾಪನದ ಸೆನ್ಸರ್ ಫೋನಿನೊಂದಿಗೆ ಬರಲಿದೆ ಜೊತೆಗೆ ನ್ಯುಮ್ಯಾಟಿಕ್ ಅಲ್ಟಿಮೀಟರ್ ಮತ್ತು ಕ್ಷ ಕಿರಣ ಸೆನ್ಸರ್ ಕೂಡ ಇವೆ.

  ಡುಯಲ್ ಸಿಮ್ ಇದ್ದು, ಇದು ಆಂಡ್ರೊಯಿಡ್ 7.0 ನೌಗಟ್-ಬೇಸ್ಡ್ ಜೆಡ್‍ಯುಐ 2.5 ಮೇಲೆ ನಡೆಯಲಿದೆ.

  ಓದಿರಿ: ಸಂಗಾತಿ ಹುಡುಕಲು ಇರುವ 4 ಬೆಸ್ಟ್‌ ಆಪ್‌ಗಳು!..ಈಗಲೇ ಫ್ರೊಫೈಲ್ ಕ್ರಿಯೇಟ್ ಮಾಡಿ!!

  ಇದರಲ್ಲಿ 13 ಮೆಗಾಪಿಕ್ಸೆಲ್ ರೇರ್ ಕ್ಯಾಮೆರಾ 1.34 ಮೈಕ್ರೊನ್ ಪಿಕ್ಸೆಲ್ ಸ್ಯಾಮ್ಸಂಗ್ ಐಎಸ್‍ಒಸೆಲ್ ಸೆನ್ಸರ್, ಎಫ್/2.2 ಅಪೆರ್ಚರ್, ಪಿಡಿಎಎಫ್+ಸಿಎಎಫ್ ಹೈಬ್ರಿಡ್ ಆಟೊಫೋಕಸ್ ಮತ್ತು ಹೆಚ್ಚು ಪ್ರಕಾಶದ ಫ್ಲಾಷ್ ಇದೆ. ಫ್ರಂಟ್ ನಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ 1.12 ಮೈಕ್ರೊನ್ ಪಿಕ್ಸಲ್ ಸೆನ್ಸರ್ ಮತ್ತು ಎಫ್/2.2 ಅಪೆರ್ಚರ್ ಇರಲಿದೆ. ಇದರ ಮೂಲ ಸಂಗ್ರಹಣಾ ಶಕ್ತಿ 64ಜಿಬಿ ಅಥವಾ 128ಜಿಬಿ ಯದು ಇರಬಹುದು.

  ಕನೆಕ್ಟಿವಿಟಿಯ ಬಗ್ಗೆ ಹೇಳುವುದಾದರೆ ಇದರಲ್ಲಿ 4ಜಿ ಎಲ್‍ಟಿಇ ಇದ್ದು ಭಾರತದ ಎಲ್‍ಟಿಇ ಬ್ಯಾಂಡ್ಸ್ ಸಮರ್ಥಿಸುತ್ತದೆ, ವೈ-ಫೈ 802.11ಎಸಿ, ಬ್ಲೂಟೂತ್ ವಿ4.1 ಮತ್ತು ಜಿಪಿಎಸ್/ ಎ-ಜಿಪಿಎಸ್. 3100 ಎಮ್‍ಎಎಚ್ ಬ್ಯಾಟರಿ ಇರಲಿದೆ. ಇದರ ಜೊತೆಗೆ ಫೋನಿನಲ್ಲಿ ಬೇರೆ ಸೆನ್ಸರ್‍ಗಳು ಕೂಡ ಬರಲಿದೆ. ಅವುಗಳೆಂದರೆ ಆಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೊಪ್, ಮ್ಯಾಗ್ನೆಟೊಮೀಟರ್ ಮತ್ತು ಪ್ರೊಕ್ಸಿಮಿಟಿ ಸೆನ್ಸರ್.

  ಈ ಹೊಸ ಜುಕ್ ಎಡ್ಜ್ ಸ್ಮಾರ್ಟ್‍ಫೋನ್ ನ ಬೆಲೆ ಸಿಎನ್‍ವೈ 2,299 ಆಗಿದ್ದು ಸರಿಸುಮಾರು ರೂ. 22,500 ಆಗುವುದು 4ಜಿಬಿ ಎಲ್‍ಪಿಡಿಡಿಆರ್4 ರಾಮ್ ನದಕ್ಕೆ ಮತ್ತು ಸಿಎನ್‍ವೈ 2,499 ಅಂದರೆ ಸುಮಾರು ರೂ. 24,500 ಆಗುವುದು 6ಜಿಬಿ ಎಲ್‍ಪಿಡಿಡಿಆರ್4 ರಾಮ್ ಫೋನ್ ಗೆ. ಹೊಸ ಸ್ಮಾರ್ಟ್‍ಫೋನ್ ಬಿಳಿ ಮಣ್ಣಿನ ಬಣ್ಣ ಮತ್ತು ಕಪ್ಪು ಟೈಟಾನಿಯಮ್ ಕ್ರಿಸ್ಟಲ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  English summary
  Rumored Lenovo smartphone to arrive in 2017.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more