Home
ಮೊಬೈಲ್

ರೂ. 9,890 ಬೆಲೆಯಲ್ಲಿ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಮ್ಯೂಸಿಕ್‌ ಬಿಡುಗಡೆ

By Vijeth Kumar Dn

ರೂ. 9,890 ಬೆಲೆಯಲ್ಲಿ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಮ್ಯೂಸಿಕ್‌ ಬಿಡುಗಡೆ

ದಕ್ಷಿಣ ಕೊರಿಯಾ ಮೂಲದ ತಾಂತ್ರಿಕ ಉಪಕರಣಗಳ ತಯಾರಿಕಾ ಸಂಸ್ಥೆಯಾದಂತಹ ಸ್ಯಾಮ್ಸಂಗ್‌ ಮಾರುಕಟ್ಟೆಗೆ ಸಾಲು ಸಾಲು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಇದೆ. ಅಂದಹಾಗೆ ಇದೀಗ ಸ್ಯಾಮ್ಸಂಗ್‌ ಸಂಸ್ಥೆಯು ತನ್ನಯ ನೂತನ ಗ್ಯಾಲಾಕ್ಸಿ ಮ್ಯೂಸಿಕ್‌ ಸ್ಮಾರ್ಟ್‌ಫೋನ್‌ಬಿಡುಗಡೆ ಬಿಡುಗಡೆ ಮಾಡಿದ್ದು, ಉತ್ತಮ ಸೌಂಡ್‌ ಹಾಗೂ ಮ್ಯೂಸಿಕ್‌ ಪ್ಲೇಯರ್‌ ಫೀಚರ್ಸ್‌ ಹೊಂದಿದ್ದು ಮ್ಯೂಸಿಕ್‌ ಪ್ರಿಯರಿಗೆಂದೇ ವಿಶೇಷವಾಗಿ ಮಾಡಲಾಗಿದೆ.

ಇದಲ್ಲದೆ ಡ್ಯುಯೆಲ್‌ ಸಿಮ್‌ ಹೊಂದಿರುವುದರಿಂದ ಗ್ಯಾಲಾಕ್ಸಿ ಮ್ಯೂಸಿಕ್‌ ಡ್ಯುಯೋಸ್‌ ಎಂದು ಹೆಸರಿಡಲಾಗಿದೆ. ಹಿಂದಿನ ವರದಿಗಳ ಪ್ರಕಾರ ಸ್ಯಾಮ್ಸಂಗ್‌ ಅಕ್ಟೋಬರ್‌ 11ರಂದು ಗ್ಯಾಲಾಕ್ಸಿ ಎಸ್‌3 ಮಿನಿ ಯ ಅನಾವರಣ ಸಮಾರಂಭದಂದು ನೂತನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಅಲ್ಲದೆ ನೂತನ ಗ್ಯಾಲಾಕ್ಸಿ ಮ್ಯೂಸಿಕ್‌ ಬಜೆಟ್‌ ಸ್ಮಾರ್ಟ್‌ಫೋನ್‌ 12,000 ರೂ. ದರದಲ್ಲಿ ಮಾರುಕಟ್ಟೆ ಬರುವುದಾಗಿ ಅಂದಾಜಿಸಲಾಗಿತ್ತು ಆದರೆ ಸಂಸ್ಥೆಯು ತನ್ನಯ ನೂತನ ಮ್ಯೂಸಿಕ್‌ ಸ್ಮಾರ್ಟ್‌ಫೋನ್‌ ಅನ್ನು 9,890 ರೂ. ದರದಲ್ಲಿ ಬಿಡುಗಡೆ ಮಾಡುವ ಮೂಲಕ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ.

ಅಂದಹಾಗೆ ಇದೀಗತಾನೆ ಮಾರುಕಟ್ಟೆ ಪ್ರವೇಶಿಸಿರುವ ನೂನ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ನೀಡಲಾಗಿದೆ ಎಂಬುದನ್ನು ನೋಡಿ ಬರೋಣ.

ವಿಶೇಷತೆ

ಸುತ್ತಳತೆ ಹಾಗೂ ಗಾತ್ರ: ನೂತನ ಗ್ಯಾಲಾಕ್ಸಿ ಮ್ಯೂಸಿಕ್‌ 110.1 x 59.0 x 12.25 mm ಸುತ್ತಳತೆಯೊಂದಿಗೆ 106.9 ಗ್ರಾಂ ತೂಕವಿದೆ.

ದರ್ಶಕ: ಗ್ಯಾಲಾಕ್ಸಿ ಮ್ಯೂಸಿಕ್‌ನಲ್ಲಿ 3 ಇಂಚಿನ QVGA ಟಚ್‌ ಸ್ಕ್ರೀನ್‌ ದರ್ಶಕ ಹಾಗೂ 320 x 240 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಸ್ಯಾಮ್ಸಂಗ್‌ ಸಂಸ್ಥೆ ತಿಳಿಸಿರುವಂತೆ ನೂತನ ಸ್ಮಾರ್ಟ್‌ಫೋನ್‌ನಲ್ಲಿ ಸ್ಮೂತ್ ಪ್ರೊಸೆಸರ್‌ ಹೊಂದಿದೆ, ಅಂದಹಾಗೆ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ.

ಆಪರೇಟಿಂಗ್‌ ಸಿಸ್ಟಂ: ಆಂಡ್ರಾಯ್ಡ್‌ 4.0ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ OS ಹೊಂದಿದೆ.

ಕ್ಯಾಮೆರಾ: ಹಿಂಬದಿಯ 3MP ಕ್ಯಾಮೆರಾ ದೊಂದಿಗೆ ಆಟೋ ಫ್ಲಾಷ್‌ ಹೊಂದಿದೆ..

ಸ್ಟೋರೇಜ್: 4GB ಆಂತರಿಕ ಮೆಮೊರಿ, 512MB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗು ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ..

ಕನೆಕ್ಟಿವಿಟಿ: ಗ್ಯಾಲಾಕ್ಸಿ ಮ್ಯೂಸಿಕ್‌ನಲ್ಲಿ ಬ್ಲೂಟೂತ್‌ v3.0, USB 2.0, Wi-Fi b/g/n, Wi-Fi ಡೈರೆಕ್ಟ್‌ ಹಾಗೂ GPS ಹೊಂದಿದೆ.

ಬ್ಯಾಟರಿ: 1,300 mAh Li-ion ಬ್ಯಾಟರಿ ಹೊಂದಿದೆ.

ಇತರೆ ಫೀಚರ್ಸ್‌ಗಳು

ಗ್ಯಾಲಾಕ್ಸಿ ಮ್ಯೂಸಿಕ್‌ನಲ್ಲಿ ಬಿಲ್ಟ್‌-ಇನ್‌ 9-ಲುಮೆನ್‌ WVGA ಪ್ರೊಜೆಕ್ಟರ್‌, ಮುಂಬದಿಯ ಸ್ಪೀಕರ್ಸ್‌ ಹಾಗೂ FM ರೇಡಿಯೋ ಹೊಂದಿದೆ. ಇದಲ್ಲದೆ ಸೌಂಡ್‌ ಅಲೈವ್‌ ಹಾಗೂ SRS ತಂತ್ರಜ್ಞಾನ ಹೊಂದಿದೆ.

ಬೆಲೆ : ಖರೀದಿಸುವುದಾರೆ ನೂತನ ಗ್ಯಾಲಾಕ್ಸಿ ಮ್ಯೂಸಿಕ್‌ ಸ್ಮಾರ್ಟ್‌ಫೋನ್‌ ರೂ. 9,890 ದರದಲ್ಲಿ ರೀಟೇಲ್‌ ಮಳಿಗೆಗಳಲ್ಲಿ ಲಭ್ಯವಿದೆ.

Read In English...

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+