ಫೆಬ್ರವರಿಯಲ್ಲಿ ಗೆಲಾಕ್ಸಿ ಎಸ್5 ಬಿಡುಗಡೆ!
ಕಳೆದ ಹಲವಾರು ತಿಂಗಳಿನಿಂದ ಸುದ್ದಿಯಾಗುತ್ತಿದ್ದ ಗೆಲಾಕ್ಸಿ ಎಸ್5 ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸ್ಯಾಮ್‌ಸಂಗ್ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎಂದು ಕೋರಿಯದ ಕೆಲ ಮಾಧ್ಯಮಗಳು ಪ್ರಕಟಿಸಿವೆ.
ಈ ಸ್ಮಾರ್ಟ್‌ಫೋನ್ ಎರಡು ರೀತಿಯ ದೇಹದಲ್ಲಿ ಬಿಡುಗಡೆ ಮಾಡಲು ಸ್ಯಾಮ್‌ಸಂಗ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ ದೇಹದಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದ್ದು,ಪ್ಲಾಸ್ಟಿಕ್ ದೇಹದ ಸ್ಮಾರ್ಟ್‌ಫೋನ್ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಬಿಡುಗಡೆ ಮಾಡಿದ ಬಳಿಕ ಅಲ್ಯೂಮಿನಿಯಂ ದೇಹವಿರುವ ಸ್ಮಾರ್ಟ್‌ಫೋನನ್ನು ಕೆಲ ದಿನಗಳಲ್ಲಿ ಸ್ಯಾಮ್‌ಸಂಗ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಈ ಸ್ಮಾರ್ಟ್‌ಫೋನಿನ ವಿಶೇಷತೆಗೆ ಸಂಬಂಧಿಸಿದಂತೆ ಹಲವಾರು ವದಂತಿಗಳು ಹರಿದಾಡುತ್ತಿದೆ. ಐಫೋನ್ 5 ಎಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ನ ಗೆಲಾಕ್ಸಿ ಎಸ್ 5ಯಲ್ಲಿ ಕಣ್ಣನ್ನು ಸ್ಕ್ಯಾನ್ ಮಾಡುವ ಸೆನ್ಸರ್ ಇರಲಿದೆ ಎನ್ನುವ ಸುದ್ದಿಗಳು ಟೆಕ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಫೋನ್ 1440x2560 ಪಿಕ್ಸೆಲ್ ರೆಸೂಲೂಶನ್(2ಕೆ) 587 ಪಿಪಿಐ(ಪಿಕ್ಸೆಲ್ ಪರ್ ಇಂಚ್) ಇರುವ ಸ್ಕ್ರೀನ್ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.
ಸ್ಯಾಮ್‌ಸಂಗ್ ಇದುವರೆಗೂ ಗೆಲಾಕ್ಸಿ ಎಸ್ 5ಯ ವಿಶೇಷತೆಯನ್ನು ಎಲ್ಲಿಯೂ ಹೇಳಿಲ್ಲ.ಒಂದು ವೇಳೆ ಈ ಎರಡು ವಿಶೇಷತೆಗಳು ನಿಜವಾದಲ್ಲಿ ಕಣ್ಣಿನ ಸ್ಕ್ಯಾನರ್ ಮತ್ತು 2ಕೆ ವಿಶೇಷತೆಯೊಂದಿಗೆ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಸ್ಯಾಮ್‌ಸಂಗ್ ಪಡೆದುಕೊಳ್ಳಲಿದೆ.


Click it and Unblock the Notifications








