Subscribe to Gizbot

ಅಕ್ಟಾಕೋರ್‌ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಲಿದೆ ಗೆಲಾಕ್ಸಿ ಎಸ್‌5

Posted By:

ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಎಸ್‌ ಸರಣಿಯಲ್ಲಿ ಐದನೇ ತಲೆಮಾರಿನ ಸ್ಮಾರ್ಟ್‌ಫೋನ್‌ನ್ನು ಮೊಬೈಲ್‌‌ ವರ್ಲ್ಡ್ ಕಾಂಗ್ರೆಸ್‌‌ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಕೆಲವೊಂದು ವಿಶೇಷತೆಗಳನ್ನು ಸುಧಾರಿಸಿ ಈ ಸ್ಮಾರ್ಟ್‌ಫೋನ್‌ನ್ನು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದೆ.

ಹೊಸದಾಗಿ ಬಿಡುಗಡೆಯಾದ ಗೆಲಾಕ್ಸಿ ಎಸ್‌5 ಸ್ಮಾರ್ಟ್‌‌ಫೋನ್‌ಗೆ ಸ್ಯಾಮ್‌ಸಂಗ್‌‌‌ ಕ್ವಾಡ್‌ ಕೋರ್‌‌ ಪ್ರೊಸೆಸರ್‌‌ ನೀಡಿದೆ.ಆದರೆ ಕಳೆದ ವರ್ಷ‌ ಬಿಡುಗಡೆಯಾದ ಗೆಲಾಕ್ಸಿ ಎಸ್‌4 ಸ್ಮಾರ್ಟ್‌ಫೋನ್‌‌ ಅಕ್ಟಾಕೋರ್‍ ಪ್ರೊಸೆಸರ್‌‌‌ನೊಂದಿಗೆ ಬಿಡುಗಡೆಯಾಗಿತ್ತು.ಆದರೆ ಹೊಸ ಸ್ಮಾರ್ಟ್‌‌ಫೋನ್‌ಗೆ ಆಕ್ಟಾ ಕೋರ್‌ ಪ್ರೊಸೆಸರ್‌ ನೀಡದೇ ಕ್ವಾಡ್‌ಕೋರ್‌ ಪ್ರೊಸೆಸೆರ್‌‌‌ ನೀಡಿದ್ದು ಹಲವು ಗೊಂದಲಗಳಿಗೆ ಕಾರಣವಾಗಿತ್ತು.

ಈ ಗೊಂದಲಗಳಿಗೆ ಸ್ಯಾಮ್‌ಸಂಗ್‌ ತೆರೆ ಎಳೆದಿದ್ದು ಗೆಲಾಕ್ಸಿ ಎಸ್‌5 ಎರಡು ಪ್ರೊಸೆಸರ್‌‌ನಲ್ಲಿ(ಕ್ವಾಡ್‌ ಕೋರ್‌ ಮತ್ತು ಅಕ್ಟಾಕೋರ್‌ ಪ್ರೊಸೆಸರ್‌‌) ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಸ್ಯಾಮ್‌ಸಂಗ್‌ ತಿಳಿಸಿದೆ.ಈ ಸಂಬಂಧ ಗೆಲಾಕ್ಸಿ ಎಸ್‌ ಸರಣಿಯ ಸ್ಮಾರ್ಟ್‌‌ಫೋನ್‌ಗಳ ಇನ್‌‌ಫೋಗ್ರಾಫಿಕ್‌ನ್ನು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದ್ದು ಈ ಇನ್‌ಫೋಗ್ರಾಫಿಕ್‌ನಲ್ಲಿ ಗೆಲಾಕ್ಸಿ ಎಸ್‌5 ಎರಡು ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ಈ ಹಿಂದೆ ಬಿಡುಗಡೆಯಾದ ಗೆಲಾಕ್ಸಿ ಎಸ್‌4, ನೋಟ್‌3 ಫ್ಯಾಬ್ಲೆಟ್‌‌ಗಳು ಆಕ್ಟಾ ಕೋರ್‌ ಪ್ರೊಸೆಸರ್‌ನ್ನು ಒಳಗೊಂಡಿತ್ತು.ಜೊತೆಗೆ ಕಳೆದ ವಾರ ಬಿಡುಗಡೆಯಾದ ನೋಟ್‌3 ನಿಯೋ ಹೆಕ್ಸಾ ಕೋರ್‌ ಪ್ರೊಸೆಸರ್‌‌ನೊಂದಿಗೆ ಬಿಡುಗಡೆಯಾಗಿತ್ತು.

 ಅಕ್ಟಾಕೋರ್‌ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಲಿದೆ ಗೆಲಾಕ್ಸಿ ಎಸ್‌5

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5
ವಿಶೇಷತೆ:
ಸಿಂಗಲ್‌ ಸಿಮ್‌
5.1 ಇಂಚಿನ ಸುಪರ್‌ ಅಮೊಲೆಡ್‌‌ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4.2 ಕಿಟ್‌ಕ್ಯಾಟ್‌ ಓಎಸ್‌
2.5GHz ಕ್ವಾಡ್‌ ಕೋರ್‌ ಅಪ್ಲಿಕೇಶನ್‌ ಪ್ರೊಸೆಸರ್‌
2ಜಿಬಿ ರ್‍ಯಾಮ್‌
16/32ಜಿಬಿ ಆಂತರಿಕ ಮೆಮೊರಿ
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
128ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4ಜಿ,ವೈಫೈ,ಎಲ್‌ಟಿಇ,ಬ್ಲೂಟೂತ್‌,ಎನ್‌ಎಫ್‌ಸಿ
2800mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot