ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8, ಗ್ಯಾಲೆಕ್ಸಿ S8+ ಲಾಂಚ್: 4 GB RAM, 12 MP ಡ್ಯುಯಲ್ ಕ್ಯಾಮೆರಾ..!
ಗ್ಯಾಲೆಕ್ಸಿ ಎಸ್8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಲಾಂಚ್ ಆಗಿದೆ. ಗ್ಯಾಲೆಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ವಿಫಲತೆಯ ನಡುವೆಯೂ ಸ್ಯಾಮ್‌ಸಂಗ್ ನೂತನ ಸ್ಮಾರ್ಟ್‌ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಧೈರ್ಯ ತೋರಿದೆ.
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಹೆಜ್ಜೆ ಗುರುತ್ತನ್ನು ಉಳಿಸಿರುವ ಸ್ಯಾಮ್‌ಸಂಗ್ ನಿಂದ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಗ್ಯಾಲೆಕ್ಸಿ ಸರಣಿಯ ಗ್ಯಾಲೆಕ್ಸಿ ಎಸ್8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಲಾಂಚ್ ಆಗಿದೆ. ಗ್ಯಾಲೆಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ವಿಫಲತೆಯ ನಡುವೆಯೂ ಸ್ಯಾಮ್‌ಸಂಗ್ ನೂತನ ಸ್ಮಾರ್ಟ್‌ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಧೈರ್ಯ ತೋರಿದೆ.
ಓದಿರಿ: ಏರ್‌ಟೆಲ್, ವೊಡೋಪೋನ್, ಐಡಿಯಾ ಗಿಂತ ಜಿಯೋ ಪ್ರೈಮ್ ಬೆಸ್ಟ್ ಎನ್ನುವದಕ್ಕೆ ಇಲ್ಲಿದೇ ಸಾಕ್ಷಿ..!!!!
ಆಪಲ್ ಮತ್ತು ಗೂಗಲ್ ಬಿಡುಗಡೆ ಮಾಡಿರುವ ಮತ್ತು ಮಾಡಲಿರುವ ಟಾಪ್ ಎಂಡ್ ಫೋನುಗಳಿಗೆ ಸ್ಪರ್ಧಿಯಾಗಿ ಗ್ಯಾಲೆಕ್ಸಿ ಎಸ್8 ಸ್ಮಾರ್ಟ್‌ಪೋನನ್ನು ಸ್ಯಾಮ್‌ಸಂಗ್ ಬಿಡುಗಡೆ ಮಾಡಿದ್ದು, ನೋಕಿಯಾ ಸಹ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಪಡೆಯುವ ಸಾಧ್ಯತೆ ಇದೆ, ಇದೆನ್ನೆಲ್ಲ ನೆನಪಿನಲ್ಲಿ ಇಟ್ಟುಕೊಂಡು ಈ ಹೊಸ ಸ್ಮಾರ್ಟ್‌ಫೋನು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಏಪ್ರಿಲ್ 21 ರಿಂದ ಮಾರುಕಟ್ಟೆಯಲ್ಲಿ ಈ ಫೋನ್ ದೊರೆಯಲಿದೆ.
ಓದಿರಿ: ಪ್ರೈಮ್ ಸದಸ್ಯತ್ವಕ್ಕೆ ನಾಳೆ ಕೊನೆದಿನ: ಯಾಕೆ ಪ್ರೈಮ್ ಸದಸ್ಯತ್ವ ಬೇಕು...? ಜಿಯೋ ಯಾಕೆ ಬೆಸ್ಟ್..?

5.8 ಇಂಚಿನ QHD ಡಿಸ್‌ಪ್ಲೇ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್ 8 ಸ್ಮಾರ್ಟ್‌ಫೋನಿನಲ್ಲಿ 5.8 ಇಂಚಿನ QHD ರೆಸಲ್ಯೂಷನ್ ಹೊಂದಿರುವ ಸೂಪರ್ ಆಮೋಲೈಡ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 6.2 ಇಂಚಿನ QHD ರೆಸಲ್ಯೂಷನ್ ಹೊಂದಿರುವ ಸುಪರ್ ಆಮೋಲೈಡ್ ಡಿಸ್‌ಪ್ಲೇ ಕಾಣಬಹುದಾಗಿದೆ. ಎರಡು ಪೋನಿನ ಡಿಸ್‌ಪ್ಲೇ ರಕ್ಷಣೆಗಾಗಿ ಗೂರಿಲ್ಲ ಗ್ಲಾಸ್ 5 ಅನ್ನು ನೀಡಲಾಗಿದೆ.

ಕ್ವಾಲ್ಕಮ್ 835 ಪ್ರೋಸೆಸರ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್ 8 ಮತ್ತು ಗ್ಯಾಲೆಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನುಗಳಲ್ಲಿ ವೇಗದ ಕಾರ್ಯನಿರ್ವಹಣೆಗಾಗಿ ಸದ್ಯದ ಟಾಪ್ ಎಂಡ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಆಂಡ್ರಾಯ್ಡ್ ನ್ಯಾಗಾ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಸ್ಮಾರ್ಟ್‌ಫೋನುಗಳು ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿವೆ, ಅಲ್ಲದೇ ಗ್ಯಾಲೆಕ್ಸಿ ಎಸ್8 ನಲ್ಲಿ 3,000mAh ಬ್ಯಾಟರಿ ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ನಲ್ಲಿ 3,500mAh ಯನ್ನು ಅಳವಡಿಸಲಾಗಿದೆ.

ಕ್ಯಾಮೆರಾ:
ಉತ್ತಮ ಪೋಟೋಗ್ರಫಿಗಾಗಿಯೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಫೋನಿನಲ್ಲಿ ಗುಣಮಟ್ಟದ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ ಸೆಲ್ಫಿ ತೆಗೆಯುವ ಸಲುವಾಗಿ ಆಟೋ ಪೋಕಸ್ ಹೊಂದಿರುವ 8 MP ಕ್ಯಾಮೆರಾವನ್ನು ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಒಳ್ಳೆಯ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ.

ವಾಟರ್‌ಪ್ರೂಫ್-ಡಸ್ಟ್ ಫ್ರೂಪ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಫೋನುಗಳು IP68 ವಾಟರ್‌ಪ್ರೂಫ್ ಮತ್ತು ಡಸ್ಟ್ ಫ್ರೂಪ್ ಆಗಿದ್ದು, ನೀರಿನಲ್ಲಿ ಬಿದ್ದರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಧೂಳಿನಲ್ಲಿ ಓಡಾಡಿದರು ಫೋನು ಏನು ಆಗುವುದಿಲ್ಲ. ಈ ಪೋನುಗಳು ಮಿಡ್‌ನೈಟ್ ಬ್ಲಾಕ್, ಆರ್ಕಿಡ್ ಗ್ರೇ, ಆರ್ಕ್ಟಿಕ್ ಸಿಲ್ವರ್, ಕೋರಲ್ ನೀಲಿ ಮತ್ತು ಮ್ಯಾಪಲ್ ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ.


Click it and Unblock the Notifications








