Subscribe to Gizbot

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಮಾ.27ಕ್ಕೆ ಬಿಡುಗಡೆ

Posted By:

ಸ್ಯಾಮ್‌ಸಂಗ್‌ನ ಈ ವರ್ಷದ ನಿರೀಕ್ಷೆಯ ಗೆಲಾಕ್ಸಿ ಎಸ್‌5 ಸ್ಮಾರ್ಟ್‌ಫೋನ್‌ ಮಾರ್ಚ್‌ 27ಕ್ಕೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಗೆಲಾಕ್ಸಿ ಎಸ್‌5 ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್ ಸಮ್ಮೇಳನದಲ್ಲಿ ಬಿಡುಗಡೆಯಾಗಿದ್ದು ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌,ಹಾರ್ಟ್‌‌ರೇಟ್‌ ಮಾನಿಟರ್‌ ಸ್ಕ್ಯಾನರ್‌, ಎಕ್ಸಲರೋಮೀಟರ್‌, ಗೈರೋ, ಪ್ರಾಕ್ಸಿಮಿಟಿ, ಕಂಪಾಸ್‌, ಬ್ಯಾರೋಮೀಟರ್‌, ಲ್‌ ಆರ್‌ಜಿಬಿ ಲೈಟ್‌‌, ಗೆಶ್ಚರ್‌‌‌, ಸೆನ್ಸರ್‌ಗಳನ್ನು ಈ ಸ್ಮಾರ್ಟ್‌‌ಫೋನ್‌ ಒಳಗೊಂಡಿದೆ.

ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಒಳಗೊಂಡಿರುವ ಸ್ಮಾರ್ಟ್‌‌ಫೋನ್‌ 16 ಎಂಪಿ ಹಿಂದುಗಡೆ ಕ್ಯಾಮೆರಾ,2 ಎಂಪಿ ಮುಂದುಗಡೆ ಕ್ಯಾಮೆರಾವನ್ನು ಒಳಗೊಂಡಿದೆ.ಧೂಳು ಮತ್ತು ಜಲ ನಿರೋಧಕ ವಿಶೇಷತೆ ಹೊಂದಿರುವ ಸ್ಮಾರ್ಟ್‌‌‌ಫೋನ್‌ಗೆ ವಿಶ್ವದ ವೇಗದ ಆಟೋಫೋಕಸ್‌ ಸೆನ್ಸರ್‌‌ ಈ ಸ್ಮಾರ್ಟ್‌‌ಫೋನ್‌ಗೆ ನೀಡಲಾಗಿದೆ ಎಂದು ಸ್ಯಾಮ್‌ಸಂಗ್‌‌ ತಿಳಿಸಿದೆ.

ಈ ಸ್ಮಾರ್ಟ್‌ಫೋನ್‌ಗೆ ಭಾರತದಲ್ಲಿ ಎಷ್ಟು ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ ಎಂಬುದನ್ನು ಸ್ಯಾಮ್‌ಸಂಗ್‌ ತಿಳಿಸಿಲ್ಲ. ಗೆಲಾಕ್ಸಿ ಎಸ್‌5ನೊಂದಿಗೆ ಗೆಲಾಕ್ಸಿ ಗೇರ್‌2 ಸ್ಮಾರ್ಟ್‌ಫೋನ್‌‌ ಬಿಡುಗಡೆಯಾಗಲಿದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಮಾ.27ಕ್ಕೆ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5
ವಿಶೇಷತೆ:
ಸಿಂಗಲ್‌ ಸಿಮ್‌
5.1 ಇಂಚಿನ ಸೂಪರ್‌ ಅಮೊಲೆಡ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,432 ಪಿಪಿಐ)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್‌ ಓಎಸ್‌
2.5 GHz ಕ್ವಾಲಕಂ ಸ್ನಾಪ್‌‌‌‌ಡ್ರಾಗನ್‌ ಪ್ರೊಸೆಸರ್‍
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16/32 ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್‌
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌‌‌,ಎನ್‌ಎಫ್‌ಸಿ
2800 mAh ಬ್ಯಾಟರಿ


ಇದನ್ನೂ ಓದಿ: ಗೆಲಾಕ್ಸಿ ಎಸ್‌5 vs ಐಫೋನ್‌ 5ಎಸ್‌ vs ನೆಕ್ಸಸ್‌5...
ಇದನ್ನೂ ಓದಿ: ಗೆಲಾಕ್ಸಿ ಎಸ್‌5ಯಲ್ಲಿ ಹೃದಯ ಬಡಿತವನ್ನು ಪರೀಕ್ಷಿಸುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot