Subscribe to Gizbot

ಮಾರುಕಟ್ಟೆಗೆ ಬರಲಿದೆ ಮೋದಿ ಸ್ಮಾರ್ಟ್‌ಫೋನ್‌

Posted By:

ನರೇಂದ್ರ ಮೋದಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌. ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ನರೇಂದ್ರ ಮೋದಿ ಹೆಸರಿನಲ್ಲಿ ಹೊಸ ಸ್ಮಾರ್ಟ್‌ಫೋನ್‌ ಬರಲಿದೆ.ನರೇಂದ್ರ ಮೋದಿ ಅಭಿಮಾನಿಗಳು ನಮೋ ಹೆಸರಿನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ತರಲು ಮಂದಾಗಿದ್ದಾರೆ.

ಗುಜರಾತ್‌ನಲ್ಲಿರುವ ನರೇಂದ್ರ ಮೋದಿಯ ಅಭಿಮಾನಿ ಉದ್ಯಮಿಗಳು ಈ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗಿದ್ದು,ಈಗಾಗಲೇ ಸಂಬಂಧ ನಮೋ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬಗ್ಗೆ ಅಧಿಕೃತವಾಗಿ ಮಾಹಿತಿ ಪ್ರಕಟಿಸಿದೆ. ಮಾಹಿತಿಗಳ ಪ್ರಕಾರ ಇದೇ ಅಗಸ್ಟ್‌ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಈ NAMO(Narendra Modi and Next Generation Android Mobile Odyssey)ಸ್ಮಾರ್ಟ್‌‌ಫೋನ್‌ ಮಾರುಕಟ್ಟೆ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾರುಕಟ್ಟೆಗೆ ಬರಲಿದೆ ಮೋದಿ ಸ್ಮಾರ್ಟ್‌ಫೋನ್‌

ನಮೋ ಸ್ಮಾರ್ಟ್‌ಫೋನ್‌
ವಿಶೇಷತೆಗಳು:
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
1.5 Ghz ಕ್ವಾಡ್‌ ಕೋರ್‌ ಪ್ರೊಸೆಸರ್‍
13 ಎಂಪಿ ಹಿಂದುಗಡೆ ಕ್ಯಾಮೆರಾ

ನಾಲ್ಕು ಸ್ಮಾರ್ಟ್‌ಫೋನ್‌ಗಳು ಬರಲಿದ್ದು, ಈ ಸ್ಮಾರ್ಟ್‌ಫೋನ್‌ಗಳ ರ್‍ಯಾಮ್‌ ಮತ್ತು ಆಂತರಿಕ ಮೆಮೋರಿ ಸಾಮರ್ಥ್ಯ ಈ ರೀತಿ ಇದೆ

1 GB RAM + 16 GB ಆಂತರಿಕ ಮಮೋರಿ
2 GB RAM + 16 GB ಆಂತರಿಕ ಮೆಮೋರಿ
2 GB RAM + 32 GB ಆಂತರಿಕ ಮೆಮೋರಿ
2 GB RAM + 64 GB ಆಂತರಿಕ ಮೆಮೋರಿ

ನಾಲ್ಕು ವಿಧದಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುತ್ತಿದ್ದರೂ, ಯಾವ ಆವೃತ್ತಿಯ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಮತ್ತು ಎಷ್ಟು ಬೆಲೆಯಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಇನ್ನೂ ಪ್ರಕಟಗೊಂಡಿಲ್ಲ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ ಭೇಟಿ ನೀಡಬಹುದು: www.smartnamo.com

 ಇದನ್ನೂ ಓದಿ: ಟ್ವೀಟರ್‌ನಲ್ಲಿ ರಾಹುಲ್‌ ಗಾಂಧಿಗೆ ಎಷ್ಟು ಜನ ಅಭಿಮಾನಿಗಳಿದ್ದಾರೆ? ಮೋದಿಗೆ ಎಷ್ಟು ಜನ ಅಭಿಮಾನಿಗಳಿದ್ದಾರೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot