'ಸೋನಿ ಎಕ್ಸ್‌ಪೇರಿಯಾ ‍‍‍‍‍XZ' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಖರೀದಿಗೆ ಆರಂಭ: ವಿಶೇಷತೆಗಳು!

Written By:

ಸೋನಿ(Sony) ಇಂಡಿಯಾ ಗುರುವಾರ(ಅಕ್ಟೋಬರ್ 13) ತನ್ನ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ 'ಎಕ್ಸ್‌ಪೇರಿಯಾ ‍‍‍‍‍XZ' ಮಾರಾಟವನ್ನು ಭಾರತದಲ್ಲಿ ಆರಂಭಿಸಿದೆ. ಅಂದಹಾಗೆ ರೂ.49,990 ರ 'ಎಕ್ಸ್‌ಪೇರಿಯಾ ‍‍‍‍‍XZ' ಅನ್ನು ಅಮೆಜಾನ್‌ ಇಂಡಿಯಾದಲ್ಲಿ ಮತ್ತು ಇತರೆ ರೀಟೇಲ್‌ ಸ್ಟೋರ್‌ಗಳಲ್ಲಿ ಭಾರತದಾದ್ಯಂತ ಖರೀದಿಸಬಹುದು.

'ಸೋನಿ ಎಕ್ಸ್‌ಪೇರಿಯಾ ‍‍‍‍‍XZ' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಖರೀದಿಗೆǃ

ಹೊಸ ಸೋನಿ ಫ್ಲಾಗ್‌ಶಿಪ್‌ ಕಳೆದ ತಿಂಗಳು ಅನಾವರಣಗೊಂಡಿದ್ದು, MRP,51,990 ಕ್ಕೆ ಬಂದಿದೆ. ಸ್ಮಾರ್ಟ್‌ಫೋನ್ ಅನ್ನು ಯಾರು ಮುಂಗಡವಾಗಿ ಬುಕ್‌ ಮಾಡುತ್ತಾರೋ, ಅವರು ರೂ.8,990 ಬೆಲೆಯ SWR30 ಸ್ಮಾರ್ಟ್‌ಬ್ಯಾಂಡ್ ಅನ್ನು ಉಚಿತವಾಗಿ 'ಎಕ್ಸ್‌ಪೇರಿಯಾ ‍‍‍‍‍XZ' ಡಿವೈಸ್‌ ಜೊತೆ ಪಡೆಯಬಹುದಾಗಿದೆ.

ಹುವಾವೆ 'ಹೋನರ್ 8' ಸ್ಮಾರ್ಟ್‌ಫೋನ್‌: ಟಾಪ್‌ 5 ಫೀಚರ್‌ಗಳು

'ಎಕ್ಸ್‌ಪೇರಿಯಾ ‍‍‍‍‍XZ'ನ ಅತ್ಯಂತ ವಿಶೇಷತೆ ಎಂದರೆ, ಡಿವೈಸ್ 3 ಹಿಂಭಾಗ ಕ್ಯಾಮೆರಾ ಸೆನ್ಸಾರ್ ಅನ್ನು ಹೊಂದಿದೆ. ಸೋನಿ ಹೇಳಿರುವ ಪ್ರಕಾರ CMOS ಸೆನ್ಸಾರ್ ಫ್ರೇಮ್‌ನಲ್ಲಿ ಬರುವ ವಸ್ತುವನ್ನು ಟ್ರ್ಯಾಕ್‌ ಮಾಡಿ ಅದರ ಚಲನೆಯನ್ನು ಪ್ರೆಡಿಕ್ಟ್ ಮಾಡುತ್ತದೆ. ಅಲ್ಲದೇ ಬ್ಲರ್‌ ಆಗುವ ಶಾಟ್‌ಗಳನ್ನು ಕಡಿಮೆ ಮಾಡುತ್ತದೆ. ಡಿವೈಸ್ ಲೇಸರ್ ಆಟೋಫೋಕಸ್ ಸೆನ್ಸಾರ್‌ ಅನ್ನು ಕ್ಯಾಮೆರಾದ ಗುಣಮಟ್ಟಕ್ಕಾಗಿ ಹೊಂದಿದೆ.

'ಸೋನಿ ಎಕ್ಸ್‌ಪೇರಿಯಾ ‍‍‍‍‍XZ' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಖರೀದಿಗೆǃ

ಡಿವೈಸ್‌ನ ಇತರೆ ವಿಶೇಷತೆಗಳು
* 5.20 ಇಂಚಿನ ಡಿಸ್‌ಪ್ಲೇ
* ಕ್ವಾಡ್‌ ಕೋರ್ ಪ್ರೊಸೆಸರ್
* ಕ್ಯಾಮೆರಾ : 23MP ಹಿಂಭಾಗ ಕ್ಯಾಮೆರಾ, 13MP ಸೆಲ್ಫಿ ಕ್ಯಾಮೆರಾ
* 3GB RAM
* ಆಂಡ್ರಾಯ್ಡ್ 6.0 ಓಎಸ್
* 64GB ಆಂತರಿಕ ಸ್ಟೋರೇಜ್ ಮತ್ತು 2900mAh ಬ್ಯಾಟರಿ ಸಾಮರ್ಥ್ಯ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿEnglish summary
Sony Xperia XZ Goes on Sale in India at Rs. 49,990. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot