Home
ಮೊಬೈಲ್

4,999 ಬೆಲೆಯ ಸ್ವೈಪ್ ಕನೆಕ್ಟ್ ಪ್ಲಸ್ ಮಾರುಕಟ್ಟೆಗೆ ಬಿಡುಗಡೆ.

By Ashok

ಸ್ವೈಪ್ ಕಂಪನಿಯು ಮತ್ತೊಂದು ಕೈಗೆಟಕುವ ದರದ ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸಿದೆ. ಸ್ವೈಪ್ ಕಂಪನಿಯು ಕಡಿಮೆ ವೆಚ್ಚದ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳಗೆ ಭಾರತದಲ್ಲೀಗಾಗಲೇ ಖ್ಯಾತಿ ಪಡೆದಿದೆ. ಸ್ವೈಪ್ ಕಂಪನಿಯ ಹೊಸ ಫೋನ್ ಕನೆಕ್ಟ್ ಪ್ಲಸ್ ಇದೇ ವಿಭಾಗದ ಸ್ಮಾರ್ಟ್ ಫೋನ್.

4,999 ಬೆಲೆಯ ಸ್ವೈಪ್ ಕನೆಕ್ಟ್ ಪ್ಲಸ್ ಮಾರುಕಟ್ಟೆಗೆ ಬಿಡುಗಡೆ.

2016ರ ಶುರುವಿನಲ್ಲಿ, ಸ್ವೈಪ್ ಕಂಪನಿಯು 3,999 ರುಪಾಯಿ ಬೆಲೆಯ ಕನೆಕ್ಟ್ 5.1 ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿತ್ತು. ಈಗ ಬಿಡುಗಡೆಗೊಂಡಿರುವ ಕನೆಕ್ಟ್ ಪ್ಲಸ್ ಕನೆಕ್ಟ್ 5.1 ಫೋನಿನ ಉತ್ತಮಗೊಂಡ ಆವೃತ್ತಿಯ ಸ್ಮಾರ್ಟ್ಫೋನ್. ಕನೆಕ್ಟ್ ಪ್ಲಸ್ ಫೋನಿನಲ್ಲಿ 5 ಇಂಚಿನ 720 ಪಿಕ್ಸೆಲ್ಲಿನ ಪರದೆಯಿದೆ, ಮತ್ತು ಈ ಪರದೆಯನ್ನು ರಕ್ಷಿಸಲು ಡ್ರಾಗನ್ ಟ್ರೇಲ್ ತಂತ್ರಜ್ಞಾನವಿದೆ.

1.2 ಗಿಗಾಹರ್ಟ್ಜಿನ ನಾಲ್ಕು ಹೃದಯಗಳ ಮೀಡಿಯಾ ಟೆಕ್ ಪ್ರೊಸೆಸರ್ ಹೊಂದಿರುವ ಕನೆಕ್ಟ್ ಪ್ಲಸ್ನಲ್ಲಿ 2ಜಿಬಿಯಷ್ಟು ರ್ಯಾಮ್ ಸೌಲಭ್ಯವಿದೆ. ಆದರೆ ಸ್ವೈಪ್ನವರು ಈ ಮೊಬೈಲಿನಲ್ಲಿ ಉಪಯೋಗಿಸಲಾಗಿರುವ ಮೀಡಿಯಾಟೆಕ್ ಪ್ರೊಸೆಸರ್ರಿನ ಆವೃತ್ತಿಯ ಬಗ್ಗೆ ಪೂರ್ತಿ ವಿವರಗಳನ್ನು ಕೊಟ್ಟಿಲ್ಲ. 16ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ, ಮೆಮೊರಿ ಕಾರ್ಡ್ ಸೌಲಭ್ಯವನ್ನು ಉಪಯೋಗಿಸಿಕೊಂಡು ಸಂಗ್ರಹ ಸಾಮರ್ಥ್ಯವನ್ನು 64ಜಿಬಿವರೆಗೆ ವಿಸ್ತರಿಸಕೊಳ್ಳಬಹುದು.

ಓದಿರಿ: ಯಾರಿಗೂ ತಿಳಿಯದ ಆಪಲ್‌ನ 6 ಪ್ರಾಡಕ್ಟ್‌ಗಳು ಯಾವುವು ಗೊತ್ತೇ?

ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸಲ್ಲಿನ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ ಸ್ವೈಪ್ ಕನೆಕ್ಟ್ ಪ್ಲಸ್ನಲ್ಲಿದೆ. ಜೊತೆಗೆ, ಸ್ವಂತಿ ಪ್ರಿಯರಿಗಾಗಿ ಮುಂಬದಿಯಲ್ಲಿ 5 ಮೆಗಾಪಿಕ್ಸಲ್ಲಿನ ಕ್ಯಾಮೆರಾ ಇದೆ. ಸ್ಮಾರ್ಟ್ಫೋನ್ ಆ್ಯಂಡ್ರಾಯ್ಡ್ 5.1 ಲಾಲಿಪಪ್ ಓಎಸ್ ಮೇಲೆ ಅವಲಂಬಿತವಾಗಿದೆ. ಆ್ಯಂಡ್ರಾಯ್ಡ್ ಎನ್ ಬಿಡುಗಡೆಗೊಳಿಸುವ ದಿನಾಂಕ ಹತ್ತಿರವಾಗುತ್ತಿರುವಾಗ ಲಾಲಿಪಪ್ ಓಎಸ್ ಪುರಾತನ ಕಾಲದ್ದು ಎಂದನ್ನಿಸದೇ ಇರದು.

ಓದಿರಿ: ಅಬ್ದುಲ್‌ ಕಲಾಂ'ರವರ ಪುಣ್ಯತಿಥಿ: ಭಾರತದಾದ್ಯಂತ ನೆನಪಿಸಿಕೊಂಡಿದ್ದು ಹೀಗೆ!


ಬ್ಯಾಟರಿ ವಿಷಯಕ್ಕೆ ಬಂದರೆ 3,000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ. ಸ್ಮಾರ್ಟ್ಫೋನ್ ಎರಡು ಸಿಮ್ಗಳನ್ನು ಬೆಂಬಲಿಸುತ್ತದೆ ಮತ್ತು 3ಜಿ, ವೈಫೈ, ಬ್ಲೂಟೂಥ್ ಹಾಗೂ ಜಿಪಿಎಸ್ ಸೌಕರ್ಯವಿದೆ. ಸ್ವೈಪ್ 4ಜಿ ಎಲ್.ಟಿ.ಇ ಸೌಲಭ್ಯವನ್ನು ನೀಡಿದ್ದರೆ ಉತ್ತಮವಿತ್ತು. ಯೋಗ್ಯ ವಿಶೇಷಣಗಳಿರುವ ಸ್ವೈಪ್ ಕನೆಕ್ಟ್ ಪ್ಲಸ್ 4,999 ರುಪಾಯಿಗಳ ಆಕರ್ಷಕ ಬೆಲೆಗೆ ಲಭ್ಯವಿದೆ.

ಕೈಗೆಟುಕುವ ಸ್ಮಾರ್ಟ್ ಫೋನ್ ಸ್ವೈಪ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗೆ ಕಮೆಂಟಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

Best Mobiles in India

English summary
Swipe has launched yet another affordable smartphone under their belt. The company is already well-known for their low-cost Android smartphones in India, and the Konnect Plus dubs into the same segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+