ಯಾರಿಗೂ ತಿಳಿಯದ ಆಪಲ್‌ನ 6 ಪ್ರಾಡಕ್ಟ್‌ಗಳು ಯಾವುವು ಗೊತ್ತೇ?

By Suneel
|

ಆಪಲ್‌ ಅಂದ್ರೆ ನೆನಪಾಗೋದು ಐಫೋನ್‌. ಐಫೋನ್‌ ಅಂದ್ರೆ ನೆನಪಾಗೋದು ಆಪಲ್‌. ಈ ರೀತಿಯಿಂದಾಗಿ ಬಹುಸಂಖ್ಯಾತರು ಅಮೆರಿಕದ ಆಪಲ್‌ ಕಂಪನಿ ಕೇವಲ ಐಫೋನ್‌ ಅನ್ನು ಮಾತ್ರ ತಯಾರಿಸುತ್ತದೆ ಎಂದು ತಿಳಿದಿದ್ದಾರೆ. ಸ್ವಲ್ಪ ಜನರಿಗೆ ಆಪಲ್‌ನ ಐಪಾಡ್‌, ಐಪ್ಯಾಡ್‌, ಆಪಲ್‌ ವಾಚ್‌, ಆಪಲ್‌ ಟಿವಿ, ಐಪ್ಯಾಡ್‌ ಮಿನಿ ತಿಳಿದಿರಬಹುದು. ಆದ್ರೆ ಆಪಲ್ ಉತ್ಪಾದಿಸಿದ 6 ಪ್ರಾಡಕ್ಟ್‌ ಯಾರಿಗೂ ತಿಳಿದಿಲ್ಲ.

ಹಲವು ದಶಕಗಳಿಂದಲೂ ಸಹ ಆಪಲ್‌ ಹೊಸ ಹೊಸ ವಿಭಾಗಗಳಲ್ಲಿ ಗ್ರಾಹಕ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಆಪಲ್‌ ಈ ಹಿಂದೆ ತನ್ನ ಉತ್ಪನ್ನಗಳ ಮಾರಾಟದಲ್ಲಿ ಹಲವು ಉತ್ಪನ್ನಗಳಿಗೆ ಸಂಬಂಧಿಸಿದಂತೆ ಹಿನ್ನೆಡೆಯನ್ನು ಅನುಭವಿಸಿದೆ. ಆಪಲ್‌ ತಯಾರಿಸಿದ ಕೆಲವು ಉತ್ಪನ್ನಗಳು ಉತ್ತಮ ಮಾರಾಟ ಪಡೆಯದೇ ಪ್ರಪಂಚವೇ ಆ ಪ್ರಾಡಕ್ಟ್‌ಗಳನ್ನು ಮರೆತಿದೆ. ಆಪಲ್‌ ತಯಾರಿಸಿ ಜಗತ್ತಿನ ಟೆಕ್‌ ಪ್ರಿಯರು ಮರೆತಿರುವ ಆ ಪ್ರಾಡಕ್ಟ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಅಬ್ದುಲ್‌ ಕಲಾಂ'ರವರ ಪುಣ್ಯತಿಥಿ: ಭಾರತದಾದ್ಯಂತ ನೆನಪಿಸಿಕೊಂಡಿದ್ದು ಹೀಗೆ!

ಕ್ವಿಕ್‌ಟೇಕ್‌ 100

ಕ್ವಿಕ್‌ಟೇಕ್‌ 100

20 ವರ್ಷಗಳ ಹಿಂದೆ ಸ್ಟೀವ್‌ ಜಾಬ್‌'ರವರ ಸಮಯದಲ್ಲಿ ಆಪಲ್‌ ಪ್ರಪಂಚದ ಮೊಟ್ಟ ಮೊದಲ ಗ್ರಾಹಕ ಸ್ನೇಹಿ ಡಿಜಿಟಲ್‌ ಕ್ಯಾಮೆರಾವನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆ ಅಂದು $749 ಆಗಿತ್ತು. ಆದರೆ ಇದು ಕೇವಲ 640*480 ಪಿಕ್ಸೆಲ್‌ನ ಕಲರ್‌ ಫೋಟೋಗಳನ್ನು ಮಾತ್ರ ಸ್ಟೋರ್‌ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರಿಂದ ಮಾರಾಟದಲ್ಲಿ ಹಿನ್ನೆಡೆ ಅನುಭವಿಸಿತು.

3 ವರ್ಷಗಳ ನಂತರ ಪ್ರಾಡಕ್ಟ್‌ ತಯಾರಿ ನಿಂತುಹೋಯಿತು.

ಆಪಲ್‌ ಗ್ರಾಫಿಕ್‌ ಟ್ಯಾಬ್ಲೆಟ್

ಆಪಲ್‌ ಗ್ರಾಫಿಕ್‌ ಟ್ಯಾಬ್ಲೆಟ್

1979 ರಲ್ಲಿ ಆಪಲ್‌ ತನ್ನ ಎರಡನೇ ಪ್ರಾಡಕ್ಟ್‌ ಆತ್ಯಾಧುನಿಕ ಮತ್ತು ಪ್ರಖ್ಯಾತವಾದ ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಅನ್ನು ಆಫರ್‌ ಮಾಡಿತ್ತು. ಡ್ರಾಯಿಂಗ್ ಮಾಡುವುದು ಮತ್ತು ಡಿಜಿಟಲ್‌ ರೇಖಾಚಿತ್ರ ಬಿಡಿಸುವ ಸಮಸ್ಯೆ ಹೋಗಲಾಡಿಸಲು ಆಪಲ್‌ 'ಗ್ರಾಫಿಕ್‌ ಟ್ಯಾಬ್ಲೆಟ್‌[' ಅನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆ $650 ಆಗಿತ್ತು. ಆದರೆ ರೇಡಿಯೋ ಫ್ರಿಕ್ವೆನ್ಸಿ ಪ್ರವೇಶದಿಂದ ಸಮಸ್ಯೆಗಳು ಎದುರಾದವು. ಆದ್ದರಿಂದ ಆಪಲ್‌ ಈ ಉತ್ಪನ್ನದ ತಯಾರಿ ನಿಲ್ಲಿಸಿತು.

ಐಪಾಡ್‌ ಸಾಕ್ಸ್‌

ಐಪಾಡ್‌ ಸಾಕ್ಸ್‌

ಚಳಿಗಾಲ ಅನ್ನೋದು ಸಕಲಚರ ಜೀವಿಗಳಿರು ಇರುತ್ತದೆ. ವಿಶೇಷ ಅಂದ್ರೆ ಚಳಿ ಇಲೆಕ್ಟ್ರಾನಿಕ್‌ ಡಿವೈಸ್‌ಗಳಿಗೂ ಸಹ ಇರುತ್ತದೆ. ಆದ್ದರಿಂದ ಆಪಲ್‌ ಚಳಿಗಾಲದಲ್ಲಿ ಕೂಲ್‌ ಆಗಿರುವ ಐಪಾಡ್‌ ಅನ್ನು ಬೆಚ್ಚಗೆ ಮಾಡಲು ಐಪಾಡ್‌ ಸಾಕ್ಸ್ ಅನ್ನು ಹೊರತಂದಿತ್ತು. ಆದರೆ ಮೂಲ ಉದ್ದೇಶ ಐಪಾಡ್‌ ಯಾವುದೇ ಸ್ಕ್ರಾಚ್‌ಗೆ ಒಳಗಾಗದಿರಲಿ ಎಂಬುದು. ರೂ $29 ಇದ್ದ ಐಪಾಡ್‌ ಸಾಕ್ಸ್ ಆನ್ನು ಆಪಲ್‌ 2004-2012 ರವರೆಗೂ ಸಹ ಮಾರಾಟ ಮಾಡಿತ್ತು.

 ಆಪಲ್‌ ಪಿಪ್ಪಿನ್‌

ಆಪಲ್‌ ಪಿಪ್ಪಿನ್‌

ಆಪಲ್‌ ಮೈಕ್ರೋಸಾಫ್ಟ್‌ನ ಎಕ್ಸ್‌ಬಾಕ್ಸ್‌ ನಂತರ ಗೇಮ್‌ ಕ್ಷೇತ್ರಕ್ಕೆ 'ಆಪಲ್‌ ಪಿಪ್ಪಿನ್‌' ಬಿಡುಗಡೆ ಮಾಡುವ ಮೂಲಕ ದಾಪುಗಾಲಿರಿಸಿತ್ತು. ಮ್ಯಾಕ್‌ ಓಎಸ್‌ ಚಾಲಿತ ಮನೆಯಲ್ಲಿ ಮನರಂಜನೆಗೆ ಬಿಡುಗಡೆ ಮಾಡಿದ್ದ ಆಪಲ್‌ ಪಿಪ್ಪಿನ್‌ ಬೆಲೆ $599 ಇತ್ತು. 1996ರಲ್ಲಿ ಜಪಾನ್‌ ವೀಡಿಯೊಗೇಮ್‌ ಕಂಪನಿ ಸಹಯೋಗದೊಂದಿಗೆ ತಯಾರಿಸಿದ್ದ ಪಿಪ್ಪಿನ್ 100,000 ಪ್ರಾಡಕ್ಟ್‌ಗಳಲ್ಲಿ ಕೇವಲ 42,000 ಪ್ರಾಡಕ್ಟ್‌ಗಳು ಮಾರಾಟವಾಗಿದ್ದವು.

ಮ್ಯಾಕಿಂತೋಷ್ ಟಿವಿ

ಮ್ಯಾಕಿಂತೋಷ್ ಟಿವಿ

ಆಪಲ್‌ ಮ್ಯಾಕಿಂತೋಷ್ ಹೆಸರಿನ ಟಿವಿಯನ್ನು 1993 ರಲ್ಲಿ 5MB RAM, 160MB ಹಾರ್ಡ್‌ ಡ್ರೈವ್‌, 14 ಇಂಚಿನ ಡಿಸ್‌ಪ್ಲೇ ಯೊಂದಿಗೆ ಬೆಲೆ $2,099ಗೆ ಬಿಡುಗಡೆ ಮಾಡಿತ್ತು. ಮಾರುಕಟ್ಟೆಯಲ್ಲಿ ಹೆಚ್ಚು ಹಿನ್ನೆಡೆಯಲ್ಲಿ ಮಾರಾಟವಾದ್ದರಿಂದ ಉತ್ಪನ್ನ ಬಿಡುಗಡೆಯಾದ 4 ತಿಂಗಳಲ್ಲೇ ಉತ್ಪಾದನೆಯನ್ನು ನಿಲ್ಲಿಸಿತು.

ಆಪಲ್‌ ನ್ಯೂಟನ್ ಮೆಸೇಜ್‌ಪ್ಯಾಡ್‌

ಆಪಲ್‌ ನ್ಯೂಟನ್ ಮೆಸೇಜ್‌ಪ್ಯಾಡ್‌

ಸ್ಟೀವ್‌ ಜಾಬ್‌'ರವರ ನಂತರ ಆಪಲ್ ಸಿಇಓ ಆಗಿ ಬಂದ ಜಾನ್‌ ಸ್ಕಲ್ಲಿ'ರವರ ಸಂದರ್ಭದಲ್ಲಿ 'ಆಪಲ್‌ ನ್ಯೂಟನ್‌ ಮೆಸೇಜ್‌ಪ್ಯಾಡ್‌' ಅನ್ನು ಲಾಂಚ್‌ ಮಾಡಲಾಗಿತ್ತು. ಇದು ಐಫೋನ್‌ ಮತ್ತು ಐಪಾಡ್‌ ಉತ್ಪನ್ನಗಳು ಬರುವ ಮುಂಚೆಯೇ ಅಭಿವೃದ್ದಿಪಡಿಸಿದ್ದ 'ಪರ್ಸನಲ್ ಡಿಜಿಟಲ್ ಅಸಿಸ್ಟಂಟ್‌(ಪಿಡಿಎ) ಅನ್ನು ಲಾಂಚ್‌ ಮಾಡಲಾಗಿತ್ತು. ಇದು ಮೊಟ್ಟ ಮೊದಲ ಟಚ್‌ ಆಧಾರಿತ ಮೊಬೈಲ್‌ ಆಗಿದ್ದು, ಬಳಕೆದಾರರು ತಮ್ಮ ಸ್ಟೈಲ್‌ನಲ್ಲಿ ಬರೆದ ಅಕ್ಷರಗಳು ನಂತರ ಡಿಜಿಟಲ್‌ ಅಕ್ಷರಗಳಾಗಿ ಬದಲಾಗುತ್ತಿದ್ದವು. ಆದರೆ ಹಲವು ಸಮಸ್ಯೆಗಳಿಂದ ಈ ಪ್ರಾಡಕ್ಟ್‌ ಅನ್ನು 5 ವರ್ಷಗಳ ನಂತರ 1998 ರಲ್ಲಿ ನಿಲ್ಲಿಸಲಾಯಿತು.

ಗಿಜ್‌ಬಾಟ್‌

ಗಿಜ್‌ಬಾಟ್‌

ಕೊಲಂಬಸ್‌ಗಿಂತ 2,800 ವರ್ಷಗಳ ಹಿಂದೆಯೇ ಚೀನಿಯರಿಂದ ಅಮೆರಿಕ ಅನ್ವೇಷಣೆಅಬ್ದುಲ್‌ ಕಲಾಂ'ರವರ ಪುಣ್ಯತಿಥಿ: ಭಾರತದಾದ್ಯಂತ ನೆನಪಿಸಿಕೊಂಡಿದ್ದು ಹೀಗೆ!

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌ ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

Read more about:
English summary
Here are some obscure products that Apple has launched over the years, that failed to live up to the company's reputation:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more