ಅಬ್ದುಲ್‌ ಕಲಾಂ'ರವರ ಪುಣ್ಯತಿಥಿ: ಭಾರತದಾದ್ಯಂತ ನೆನಪಿಸಿಕೊಂಡಿದ್ದು ಹೀಗೆ!

  By Suneel
  |

  ಭಾರತ ಇಂದಿಗೆ (ಬುಧವಾರ 27) ತನ್ನ ಮಿಷೆಲ್‌ ಮ್ಯಾನ್‌ ಅವರನ್ನು ಕಳೆದುಕೊಂಡು ಒಂದು ವರ್ಷ ಕಳೆದಿದೆ. 'ಅವುಲ್‌ ಪಕೀರ್‌ ಜೈನುಲಬ್ದೀನ್‌ ಅಬ್ದುಲ್‌ ಕಲಾಂ' ರವರನ್ನು ಇಂದು ಇಡೀ ಭಾರತ ನೆನೆಯುವ ದಿನ. ಭಾರತದ ಮಾಜಿ ರಾಷ್ಟ್ರಪತಿ, ಪ್ರಜೆಗಳ ಅಧ್ಯಕ್ಷ ಎಂದೇ ಪ್ರಖ್ಯಾತರಾದ ಅಬ್ದುಲ್‌ ಕಲಾಂ'ರವರು ಕಳೆದ ವರ್ಷ ಜುಲೈ 27 ರಂದು ಶಿಲಾಂಗ್‌ನಲ್ಲಿ ಕೊನೆಯುಸಿರೆಳೆದಿದ್ದರು.

  ಜೀವನ ಪಥವನ್ನೇ ಬದಲಾಯಿಸಬಲ್ಲ ಅಬ್ದುಲ್ ಕಲಾಂ ಅಪ್ಲಿಕೇಶನ್‌ಗಳು

  83ನೇ ವಯಸ್ಸಿಗೆ ತೀರಿಕೊಂಡ ಅಬ್ದುಲ್‌ ಕಲಾಂ'ರವರನ್ನು ಕಳೆದಕೊಂಡ ಇಡೀ ಭಾರತದ ಯುವಜನತೆ, ಹಿರಿಯರು, ಮಕ್ಕಳು ಸೇರಿದಂತೆ ಎಲ್ಲರೂ ಕಳೆದ ವರ್ಷ ಜುಲೈ 27 ರಂದು ದುಃಖದ ಮಡುವಿನಲ್ಲಿದ್ದರು. ಆದರೆ ಅವರ ಹೆಸರು ಮಾತ್ರ ಎಂದೆಂಗಿಗೂ ಅಜರಾಮರ. ಕಲಾಂ'ರವರನ್ನು ಕಳೆದುಕೊಂಡ ದುಃಖದಿಂದ ಮತ್ತು ಅವರ ಕೊಡುಗೆಯಿಂದ ಇಂದು ಅವರನ್ನು ಮತ್ತೊಮ್ಮೆ ಪುಣ್ಯತಿಥಿಯ ಸ್ಮಾರಣಾರ್ಥವಾಗಿ ನೆನೆಯುವ ದಿನ.

  ಭಾರತದ ಕ್ಷಿಪಣಿ ರಕ್ಷಣಾ ಕಾರ್ಯಕ್ರಮದ ಪಿತಾಮಹರಾದ ಅಬ್ದುಲ್‌ ಕಲಾಂ'ರವರು ಮಕ್ಕಳ ನೆಚ್ಚಿನ ರಾಷ್ಟ್ರಪತಿಯು ಆಗಿದ್ದು, ಅವರ ಪುಣ್ಯತಿಥಿಯ ಸ್ಮಾರಣಾರ್ಥವಾಗಿ ಇಂದು ಭಾರತದಾದ್ಯಂತ ಅವರನ್ನು ನಾವು ತೋರಿಸುತ್ತಿರುವ ಫೋಟೋಗಳೊಂದಿಗೆ ನೆನಪಿಸಿಕೊಳ್ಳಲಾಗುತ್ತಿದೆ.

  ತಂತ್ರಜ್ಞಾನ ಲೋಕಕ್ಕೆ ಅಬ್ದುಲ್ ಕಲಾಂ ಕೊಡುಗೆ ಏನು?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಅಬ್ದುಲ್ ಕಲಾಂ

  ಕಲಾಂ'ರವರು ತಮಿಳು ನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಭೌತಶಾಸ್ತ್ರ ಮತ್ತು ಏರಿಯೋಸ್ಪೇಸ್‌ ಇಂಜಿನಿಯರಿಂಗ್‌ ಅಧ್ಯಯನ ಮಾಡಿದ್ದರು. ಕಲಾಂ'ರವರ ಈ ಫೋಟೋವನ್ನು 1989 ರ ಮೇ 26 ರಂದು 'ಅಗ್ನಿ ಸೈನ್‌ಟಿಸ್ಟ್ ಪ್ರೆಸ್‌ ಕಾನ್ಫರೆನ್ಸ್‌'ನಲ್ಲಿ ಸೆರೆಹಿಡಿಯಲಾಗಿದೆ.

  ಪದ್ಮ ಭೂಷಣ ಪ್ರಶಸ್ತಿ

  ಅಬ್ದುಲ್ ಕಲಾಂ'ರವರು 'ಸಂಶೋಧನೆ ಮತ್ತು ಅಭಿವೃದ್ಧಿ ಎಂಜಿನಿಯರ್ ವಿಜ್ಞಾನಿ' ಆಗಿ 'ಪದ್ಮ ಭೂಷಣ ಪ್ರಶಸ್ತಿ'ಯನ್ನು ಸ್ವೀಕರಿಸುತ್ತಿರುವ ಸಂದರ್ಭದಲ್ಲಿ 28/03/1981 ರಲ್ಲಿ ತೆಗೆದ ಫೋಟೋ ಇದು.

  ಭಾರತ ರತ್ನ ಪ್ರಶಸ್ತಿ

  ಈ ಫೋಟೋವನ್ನು 17/05/1998 ಸೆರೆಹಿಡಿಯಲಾಗಿದ್ದು, ಫೋಟೋದಲ್ಲಿ ಎಪಿಜೆ ಅಬ್ದುಲ್ ಕಲಾಂ ಮತ್ತು ಅಣುಶಕ್ತಿ ಇಲಾಖೆ ಕಾರ್ಯದರ್ಶಿ ಡಾ|| ಚಿದಂಬರಂ ರವರು ನವದೆಹಲಿಯಲ್ಲಿ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿರುವುದು. ಕಲಾಂ'ರವರು 'ಭಾರತ ರತ್ನ' ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

  ಜಿ ಎಂ ಮೋದಿ ಪ್ರಶಸ್ತಿ

  ಎಪಿಜೆ ಅಬ್ದುಲ್‌ ಕಲಾಂ'ರವರು ತಮ್ಮ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ 'ಜಿ ಎಂ ಮೋದಿ ಪ್ರಶಸ್ತಿ' ಸ್ವೀಕರಿಸಿ ಹಿಂದಿರುಗುವ ಸಂದರ್ಭದಲ್ಲಿ (09/08/1996) ಸೆರೆಹಿಡಿದ ಫೋಟೋ ಇದು.

  ಇಂದಿರಾ ಗಾಂಧಿ 13ನೇ ಪ್ರಶಸ್ತಿ

  ರಾಷ್ಟ್ರೀಯ ಭಾವೈಕ್ಯತೆಗಾಗಿ ಅಬ್ದುಲ್‌ ಕಲಾಂ'ರವರು 13ನೇ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ದೃಶ್ಯ.

  ಮಿಷೆಲ್‌ ಮ್ಯಾನ್‌

  ಎಪಿಜೆ ಅಬ್ದುಲ್ ಕಲಾಂ'ರವರು 'ಭಾರತದ ಕ್ಷಿಪಣಿ ಪಿತಾಮಹ'ರಾದ ದಿನ.

  ಥಾರ್ ಮರುಭೂಮಿಯಲ್ಲಿ ಪೋಖ್ರಾನ್ ಪರಮಾಣು ವಿದಳನ ಬ್ಲಾಸ್ಟ್‌

  ಈ ಚಿತ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಅಬ್ದುಲ್‌ ಕಲಾಂ, ಮತ್ತು ಆರ್‌ ಚಿದಂಬರಂ ರವರು ಇದ್ದು, ಥಾರ್‌ ಮರುಭೂಮಿಯಲ್ಲಿ ಪೋಖ್ರಾನ್‌ ಪರಮಾಣು ವಿದಳನ ಬ್ಲಾಸ್ಟ್‌ ಆಗಿದ್ದ ಬಗ್ಗೆ ಪರಿಶೀಲನೆ ನಡೆಸುತ್ತಿರುವ ದೃಶ್ಯವಿದು.

  ಡಾ|| ಮನಮೋಹನ್‌ ಸಿಂಗ್‌ ಜೊತೆಯಲ್ಲಿ ಕಲಾಂ'ರವರು

  ಡಾ|| ಅಬ್ದುಲ್‌ ಕಲಾಂ, ಡಾ|| ಮನಮೋಹನ್‌ ಸಿಂಗ್‌ ಮತ್ತು ಸೊಮನಾಥ್‌ ಚಟರ್ಜಿ'ರವರು ನವದೆಹಲಿಯಲ್ಲಿನ ಸಮಾರಂಭವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ಫೋಟೋ.

  ಕ್ಷಿಪಣಿ ಬಗ್ಗೆ ವಿವರಣೆ

  ಅಬ್ದುಲ್‌ ಕಲಾಂ'ರವರು ನೌಕಾ ದಿನ ಅಂಗವಾಗಿ 04/12/1997 ರಲ್ಲಿ ರಾಷ್ಟ್ರಪತಿ ಕೆ ಆರ್‌ ನಾರಾಯಣನ್‌ ಮತ್ತು ಪ್ರಧಾನ ಮಂತ್ರಿ ಐ ಕೆ ಗುಜ್ರಾಲ್‌ ರವರಿಗೆ ಕ್ಷಿಪಣಿ ಬಗ್ಗೆ ವಿವರಣೆ ನೀಡುತ್ತಿದ್ದ ಸಂದರ್ಭದಲ್ಲಿ ಸೆರೆಹಿಡಿಯಲಾದ ಫೋಟೋ ಇದು.

  ಜವಹರಲಾಲ್‌ ನೆಹರೂ ಸಮಾಧಿ

  ಡಾ|| ಅಬ್ದುಲ್‌ ಕಲಾಂ'ರವರು 'ಜವಹರಲಾಲ್‌ ನೆಹರೂ ಸಮಾಧಿ'ಗೆ ಭೇಟಿ ನೀಡಿದಾಗ ಸೆರೆಹಿಡಿದ ಫೋಟೋ.

  ರಾಷ್ಟ್ರಪತಿ ಅಬ್ದುಲ್‌ ಕಲಾಂ

  ರಾಷ್ಟ್ರಪತಿ ಅಬ್ದುಲ್‌ ಕಲಾಂ'ರವರು ನವದೆಹಲಿಯಲ್ಇಲ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಷ್ಟ್ರಪತಿ ಭವನದ ಫೋರ್‌ಕೋರ್ಟ್‌ನಲ್ಲಿ ಕುದುರೆ ಗಾಡಿಯಲ್ಲಿ ಪ್ರವಾಸ ಮಾಡುವಾಗ ಸೆರೆಹಿಡಿದ ಫೋಟೋ.

  ವರ್ಲ್ಡ್‌ ಸ್ಟೂಡೆಂಟ್‌ ಡೇ

  ಎಪಿಜೆ ಅಬ್ದುಲ್ ಕಲಾಂ'ರವರ 79ನೇ ಜನ್ಮದಿನ ವಿಶ್ವಸಂಸ್ಥೆಯಿಂದ 'ವರ್ಲ್ಡ್‌ ಸ್ಟೂಡೆಂಡ್‌ ಡೇ' ಎಂದು ಗುರುತಿಸಲ್ಪಟ್ಟಿತು.

  ಅರ್ಧಕಂಬದಲ್ಲಿ ತ್ರಿವರ್ಣ ಧ್ವಜ

  ಜುಲೈ 28, 2015 ರಲ್ಲಿ ಸಂಸತ್ತು ಭವನದಲ್ಲಿ ಕಲಾಂ'ರವರ ನಿಧನದ ಸ್ಮರಣಾರ್ಥವಾಗಿ ತ್ರಿವರ್ಣ ಧ್ವಜವನ್ನು ಅರ್ಧಕಂಬದಲ್ಲಿ ಹಾರಿಸಲಾದ ಸಂದರ್ಭದ ಫೋಟೋ ಇದು.

  ಪ್ರಧಾನ ಮಂತ್ರಿ ನರೇಂದ್ರ ಮೋದಿ

  ಜುಲೈ 28, 2015 ರಲ್ಲಿ ನವದೆಹಲಿಯ ಪಾಲಂ ಏರ್‌ಫೋರ್ಸ್‌ ಸ್ಟೇಷನ್‌'ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ'ರವರು 'ಅಬ್ದುಲ್‌ ಕಲಾಂ'ರವರ ಮೃತದೇಹಕ್ಕೆ ಗೌರವ ಸಲ್ಲಿಸುತ್ತಿರುವುದು.

  ಶಾಲಾ ಮಕ್ಕಳು

  ಶಾಲಾ ಮಕ್ಕಳು ಕಲಾಂ'ರವರ ಮೃತದೇಹಕ್ಕೆ ತಮ್ಮ ಕೊನೆಯ ಗೌರವವನ್ನು ತೋರಿಸುತ್ತಿರುವ ಸಂದರ್ಭದ ಫೋಟೋ. ಈ ಫೋಟೋವನ್ನು ಅವರ ಮೃತದೇಹವನ್ನು ಏರ್‌ಪೋರ್ಟ್‌ನಿಂದ ಮನೆಗೆ ಸಾಗಿಸುವಾಗ ಸೆರೆಹಿಡಿಯಲಾಗಿದೆ.

  ವಿದ್ಯಾರ್ಥಿಗಳಿಂದ ಅಂತಿಮ ನಮನ

  ಜುಲೈ 29, 2015 ರಲ್ಲಿ ಅಗರ್ತಲದಲ್ಲಿ ವಿದ್ಯಾರ್ಥಿಗಳು ಕಲಾಂ'ರವರ ನಿಧನದ ಸ್ಮರಣಾರ್ಥ ಅಂತಿಮ ನಮನ ಸಲ್ಲಿಸಿದ ಸಂದರ್ಭದ ಫೋಟೋ.

  ಸುದರ್ಶನ್‌ ಪಟ್ನಾಯಕ್‌

  ಅಂತರರಾಷ್ಟ್ರೀಯ ಮರಳು ಶಿಲ್ಪ ಕಲಾವಿದ 'ಸುದರ್ಶನ್‌ ಪಟ್ಯಾಯಕ್'ರವರು ಕಲಾಂ'ರವರ ಮರಳು ಪ್ರತಿಮೆಯನ್ನು ರಚಿಸಿದ್ದ ಫೋಟೋ.

  ಕರ್ನಾಟಕ

  ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಮಗುವೊಂದು ಕಲಾಂ'ರವರ ಫೋಟೋಗೆ ಮುತ್ತು ಕೊಟ್ಟ ಫೋಟೋವನ್ನು ಸೆರೆಹಿಡಿದಿದ್ದು ಹೀಗೆ.

  ರಾಮೇಶ್ವರಂ

  ರಾಮೇಶ್ವರಂನ ಸಾರ್ವಜನಿಕ ಸ್ಥಳದಲ್ಲಿ ಕಲಾಂ'ರವರಿಗೆ ಅಂತಿಮ ನಮನ ಸಲ್ಲಿಸಲು ಜನರು ಸಾಲಿನಲ್ಲಿ ನಿಂತಿದ್ದ ಸಂದರ್ಭದ ಫೋಟೋ.

  ಮರೈಕರ್‌

  ಎಪಿಜೆ ಅಬ್ದುಲ್ ಕಲಾಂ'ರವರ ಹಿರಿಯ ಅಣ್ಣ ಮರೈಕರ್‌'ರವರು ಕಲಾಂ'ರವರಿಗೆ ರಾಮೇಶ್ವರಂನಲ್ಲಿ ಗೌರವ ಸಲ್ಲಿಸಿದ ಸಂದರ್ಭದಲ್ಲಿ ಸೆರೆಹಿಡಿಯಲಾದ ಫೋಟೋ.

  11 ನೇ ರಾಷ್ಟ್ರಪತಿ

  ಕೆ ಆರ್‌ ನಾರಾಯಣನ್‌'ರವರ ನಂತರ 11ನೇ ರಾಷ್ಟ್ರಪತಿಯಾಗಿ ಡಾ|| ಎಪಿಜೆ ಅಬ್ದುಲ್‌ ಕಲಾಂ'ರವರು ಸೇವೆಸಲ್ಲಿಸಿದ್ದರು.

  ಅಬ್ದುಲ್‌ ಕಲಾಂ

  ಅಬ್ದುಲ್‌ ಕಲಾಂ'ರವರು ಎಂದಿಗೂ ನಮ್ಮ ಹೃದಯದಲ್ಲಿ ಎಂದು, ಅವರಿಗೆ ಗೌರವ ಸಲ್ಲಿಸಿದ ಎವರ್‌ವಿನ್‌ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿಗಳು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

   

   

  Read more about:
  English summary
  In pics: Remembering India’s missile man APJ Abdul Kalam. To Know more visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more