ಬಂದೇ ಬಿಡ್ತು TECNO POVA 6 Neo 5G ಫೋನ್: 108MP ಕ್ಯಾಮೆರಾ.. ಕೇವಲ 12,999 ರೂ.!
ಭಾರತಕ್ಕೆ ಬಂದೇ ಬಿಡ್ತು ಹೊಸ ಟೆಕ್ನೋ ಫೋನ್. ಅದೂ ಸಹ ಅತೀ ಕಡಿಮೆ ಬೆಲೆಗೆ! ಇದರಲ್ಲಿದೆ 108 ಮೆಗಾಪಿಕ್ಸೆಲ್ ಕ್ಯಾಮೆರಾ. ಹೌದು, ಟೆಕ್ನೋ (Tecno) ಕಂಪನಿಯು ತನ್ನ Pova ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಹೊಸ ಮೊಬೈಲ್ ಟೆಕ್ನೋ ಪೋವಾ 6 ನಿಯೋ 5G (TTECNO POVA 6 Neo 5G) ಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಹಲವು ಎಐ (ಕೃತಕ ಬುದ್ಧಿಮತ್ತೆ) ವೈಶಿಷ್ಟ್ಯಗಳನ್ನು ಹೊಂದಿದೆ. ಬನ್ನಿ, ಇದರ ಬೆಲೆ ಮತ್ತು ವೈಶಿಷ್ಷ್ಯಗಳನ್ನು ತಿಳಿಯೋಣ.
ಟೆಕ್ನೋ ಪೋವಾ 6 ನಿಯೋ 5G ಫೋನ್ ಈ ಹಿಂದೆ ಬಿಡುಗಡೆಯಾಗಿದ್ದ Tecno Pova 6 Neo 4Gನ ಉತ್ತರಾಧಿಕಾರಿಯಾಗಿದೆ. ಇದು 108 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. MediaTek ಡೈಮೆನ್ಸಿಟಿ 6300 ಚಿಪ್‌ಸೆಟ್ ಅನ್ನು ಪಡೆದಿದೆ. ಈ ಫೋನ್ 6.67 ಇಂಚಿನ HD ಪ್ಲಸ್ ಡಿಸ್ಪ್ಲೇ, ವಿಸ್ತೃತ ತಂತ್ರಜ್ಞಾನದ ಸಹಾಯದಿಂದ 16GB RAM, 18W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಸೇರಿದಂತೆ ಹಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಟೆಕ್ನೋ ಪೋವಾ 6 ನಿಯೋ 5G ಫೋನಿನ ಬೆಲೆ ಲಭ್ಯತೆ
6GB + 128GB ಸ್ಟೋರೇಜ್ ಬೆಲೆ = 13,999 ರೂ.
8GB + 256GB ಸ್ಟೋರೇಜ್ ಬೆಲೆ = 14,999 ರೂ.
ಟೆಕ್ನೋ ಪೋವಾ 6 ನಿಯೋ 5G ಅನ್ನು ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 13,999 ರೂಪಾಯಿ ಇದೆ. 8GB + 256GB ಸ್ಟೋರೇಜ್ ಬೆಲೆ 14,999 ರೂ. ಆಗಿದೆ. ಸೆಪ್ಟೆಂಬರ್ 14 ರಿಂದ ಅಮೆಜಾನ್ ಸೈಟ್‌ನಲ್ಲಿ ಈ ಫೋನ್ ಮಾರಾಟ ಪ್ರಾರಂಭಿಸಲಿದೆ. ನೀವು ಮಿಡ್‌ನೈಟ್ ಶಾಡೋ, ಅಜುರೆ ಸ್ಕೈ ಮತ್ತು ಅರೋರಾ ಕ್ಲೌಡ್ ಬಣ್ಣಗಳಲ್ಲಿ ಖರೀದಿಸಬಹುದು.
ಕಂಪನಿಯು ಟೆಕ್ನೋ ಪೋವಾ 6 ನಿಯೋ 5G ಲಾಂಚ್ ಆಫರ್ ಭಾಗವಾಗಿ ಆಫರ್‌ಗಳನ್ನು ಘೋಷಿಸಿದೆ. ಈ ಫೋನಿನ ಖರೀದಿ ಮೇಲೆ 1,000 ರೂ.ಗಳ ಬ್ಯಾಂಕ್ ಡಿಸ್ಕೌಂಟ್ ಲಭ್ಯವಿದೆ. ಜೊತೆಗೆ, 1,000 ರೂ.ಗಳ ಎಕ್ಸ್‌ಚೇಂಜ್ ಆಫರ್ ಕೂಡ ಸಿಗುತ್ತದೆ. ರಿಯಾಯಿತಿಯೊಂದಿಗೆ ನೀವು 12,999 ರೂ.ಗಳ ಆರಂಭಿಕ ಬೆಲೆಯಲ್ಲಿ ಈ ಫೋನನ್ನು ಖರೀದಿಸಬಹುದು.
ಟೆಕ್ನೋ ಪೋವಾ 6 ನಿಯೋ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಟೆಕ್ನೋ ಪೋವಾ 6 ನಿಯೋ 5G ಮೊಬೈಲ್ 6.67 ಇಂಚಿನ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಒಳಗೊಂಡಿದೆ. 90 ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತ, 240Hz ಸ್ಪರ್ಶ ಮಾದರಿ ದರ, 480 ನಿಟ್ಸ್ ವರೆಗಿನ ಬ್ರೈಟ್‌ನೆಸ್ ಮತ್ತು 20:09 ಆಕಾರ ಅನುಪಾತವನ್ನು ಒಳಗೊಂಡಿದೆ.
ಪ್ರೊಸೆಸರ್: ಹೊಸ ಟೆಕ್ನೋ ಫೋನ್ 6 ನ್ಯಾನೋಮೀಟರ್ ಪ್ರಕ್ರಿಯೆಯಲ್ಲಿ ನಿರ್ಮಿಸಲಾದ MediaTek ಡೈಮೆನ್ಶನ್ 6300 5G ಚಿಪ್‌ಸೆಟ್ ಅನ್ನು ಹೊಂದಿದೆ. ಇದರ ಗಡಿಯಾರದ ವೇಗ 2.4GHz ಆಗಿದೆ. ಈ ಫೋನ್ ಗ್ರಾಫಿಕ್ಸ್‌ಗಾಗಿ Mali G57 MC2 GPU ಅನ್ನು ಒಳಗೊಂಡಿದೆ. ಇದು ಬಹುಕಾರ್ಯಕ ಮತ್ತು ಸಾಮಾನ್ಯ ಕಾರ್ಯಾಚರಣೆಗೆ ಉತ್ತಮ ಆಯ್ಕೆಯಾಗಿದೆ. ಈ ಹೊಸ ಫೋನ್ ಇತ್ತೀಚಿನ Android 14 ಆಧಾರಿತ HiOS 14.5 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್: ಈ ಮೊಬೈಲ್ 8GB RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದರೊಂದಿಗೆ, 8GB ವಿಸ್ತೃತ ಮೆಮೊರಿಗೆ ಬೆಂಬಲವಿದೆ. ಇದರ ಸಹಾಯದಿಂದ ಒಟ್ಟು 16GB RAM ಅನ್ನು ಬಳಸಬಹುದು. ಇದಲ್ಲದೆ, ಇಂಟರ್ನಲ್ ಸ್ಟೋರೇಜ್ ಹೆಚ್ಚಿಸಲು, ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ನೀಡಲಾಗಿದೆ. ಇದರ ಸಹಾಯದಿಂದ 1 TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದು.

ಕ್ಯಾಮೆರಾ: ಟೆಕ್ನೋ ಪೋವಾ 6 ನಿಯೋ 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ಎರಡನೇ ಲೆನ್ಸ್ ಲಭ್ಯವಿದೆ. ಈ ಕ್ಯಾಮೆರಾವು ಸೆನ್ಸಾರ್ ಜೂಮ್ ನಲ್ಲಿ 3X ಲಾಸ್ ಲೆಸ್ ಸೌಲಭ್ಯವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ?: ಕೇವಲ 2,799 ರೂ.! JioPhone Prima 2 4G ಬಿಡುಗಡೆ.. ಹೇಗಿದೆ?
ಬ್ಯಾಟರಿ: ಬಜೆಟ್ ಬೆಲೆಯ ಹೊಸ ಟೆಕ್ನೋ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 19.7 ಗಂಟೆಗಳ ಸಾಂಗ್ ಮತ್ತು 31.25 ಗಂಟೆಗಳ ಕರೆ ಸಮಯವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.
ಇತರೆ ವೈಶಿಷ್ಟ್ಯಗಳು: ಟೆಕ್ನೋ ಪೋವಾ 6 ನಿಯೋ 5G ಮೊಬೈಲ್ 165.4 x 76.8 x 7.8 ಎಂಎಂ ದಪ್ಪ ಮತ್ತು 192.3 ಗ್ರಾಂ ತೂಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಡ್ಯುಯಲ್ ಸಿಮ್ 5G, Wi-Fi, ಬ್ಲೂಟೂತ್, ಇನ್ಫ್ರಾರೆಡ್ ಸೆನ್ಸರ್, NFC, ಲೈಟ್ ಸೆನ್ಸರ್, ಎಐ ಸೂಟ್, AIGC, ಎಐ ಮ್ಯಾಜಿಕ್ ಎರೇಸರ್, ಎಐ ಕಟೌಟ್, ಎಐ ವಾಲ್‌ಪೇಪರ್, ಎಐ ಆರ್ಟ್‌ಬೋರ್ಡ್, Ask AI ಫೀಚರ್ಸ್ ಹೊಂದಿದೆ.


Click it and Unblock the Notifications








