Subscribe to Gizbot

4,590 ರುಪಾಯಿಯ ಸ್ಯಾಮ್ಸಂಗ್ Z2 ಫೋನ್ ಜಿಯೋ 4ಜಿ ಪ್ರಿವೀವ್ ಕೊಡುಗೆಯೊಂದಿಗೆ ಮಾರುಕಟ್ಟೆಗೆ.

Written By:

ಮಾತು ಕೊಟ್ಟಂತೆ, ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಟೈಜನ್ ಒಎಸ್ ಇರುವ ಸ್ಮಾರ್ಟ್ ಫೋನ್ Z2 ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

4,590 ರುಪಾಯಿಯ ಸ್ಯಾಮ್ಸಂಗ್ Z2 ಫೋನ್ ಜಿಯೋ 4ಜಿ ಪ್ರಿವೀವ್ ಕೊಡುಗೆ

ಗ್ಯಾಲಕ್ಸಿ ಜೆ ಫೋನುಗಳಂತೆಯೇ, ಈ ಸ್ಮಾರ್ಟ್ ಫೋನಿನಲ್ಲಿ ಎಸ್ ಬೈಕ್ ಮತ್ತು ಅಲ್ಟ್ರಾ ಡಾಟಾ ಸೇವಿಂಗ್ ಆಯ್ಕೆಗಳಿವೆ, ಒಪೆರಾ ಮ್ಯಾಕ್ಸ್ ಸೌಲಭ್ಯವಿದೆ. ಕಪ್ಪು, ಗೋಲ್ಡ್ ಮತ್ತು ವೈನ್ ರೆಡ್ ಬಣ್ಣಗಳಲ್ಲಿ ಲಭ್ಯವಿರುವ ಸ್ಯಾಮ್ಸಂಗ್ Z2 ಫೋನಿನ ಬೆಲೆ 4,590 ರುಪಾಯಿ.

4,590 ರುಪಾಯಿಯ ಸ್ಯಾಮ್ಸಂಗ್ Z2 ಫೋನ್ ಜಿಯೋ 4ಜಿ ಪ್ರಿವೀವ್ ಕೊಡುಗೆ

ಕಡಿಮೆ ಮೊತ್ತದ ಈ ಫೋನು ಪೇಟಿಎಮ್ ಆನ್ ಲೈನಿನಲ್ಲಿ ಮಾತ್ರ ಮೊದಲಿಗೆ ಲಭ್ಯವಾಗುತ್ತದೆ, ನಂತರ ಆಗಷ್ಟ್ 29ರಿಂದ ರೀಟೇಲರುಗಳ ಬಳಿಯೂ ಲಭ್ಯವಾಗುತ್ತದೆ. ಜೊತೆಗೆ ಉಡುಗೊರೆ ರೂಪದಲ್ಲಿ, ಕಂಪನಿಯು ಜಿಯೋ ಪ್ರಿವೀವ್ ಕೊಡುಗೆಯನ್ನೂ ಇದರೊಂದಿಗೆ ನೀಡುತ್ತಿದೆ. 90 ದಿನಗಳವರೆಗೆ ಅನಿಯಮಿತ ಕರೆ ಮತ್ತು ಡಾಟಾ ಸೇವೆಯನ್ನು ಬಳಸಿಕೊಳ್ಳಬಹುದು.

ಓದಿರಿ: ವಿಶ್ವ ಮಾನ್ಯತೆ ಗಳಿಸಿಕೊಂಡ ಭಾರತೀಯ ಟೆಕ್ ಸಾಧಕರು

4,590 ರುಪಾಯಿಯ ಸ್ಯಾಮ್ಸಂಗ್ Z2 ಫೋನ್ ಜಿಯೋ 4ಜಿ ಪ್ರಿವೀವ್ ಕೊಡುಗೆ

ಫೋನಿನ ಗುಣ ವೈಶಿಷ್ಟ್ಯಗಳ ಕಡೆಗೆ ಗಮನ ಹರಿಸಿದರೆ, Z2 ಫೋನಿನಲ್ಲಿ 800x480 ಪಿಕ್ಸೆಲ್ಸ್ ಹೊಂದಿರುವ 4 ಇಂಚಿನ WVGA ಟಿ.ಎಫ್.ಟಿ ಪರದೆಯಿದೆ. 1.5GHz ಸಾಮರ್ಥ್ಯದ ಕ್ವಾಡ್ ಕೋರ್ ಪ್ರೊಸೆಸರ್, 1ಜಿಬಿ ರ್ಯಾಮ್ ಈ ಫೋನಿನಲ್ಲಿದೆ.

4,590 ರುಪಾಯಿಯ ಸ್ಯಾಮ್ಸಂಗ್ Z2 ಫೋನ್ ಜಿಯೋ 4ಜಿ ಪ್ರಿವೀವ್ ಕೊಡುಗೆ

8ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಫೋನಿನಲ್ಲಿ ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು 128ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯವಿದೆ. ಜೊತೆಗೆ ಈ ಸ್ಮಾರ್ಟ್ ಫೋನಿನಲ್ಲಿ ಟೈಜನ್ ಒ.ಎಸ್ 2.4 ಇದೆ.

ಓದಿರಿ: ಈಗ, ಮೊಬೈಲ್ ಆಪ್ ಸ್ತನ/ಬ್ರಾ ಅಳತೆ ಕಂಡುಹಿಡಿಯುವಲ್ಲಿ ಸಹಾಯ ಮಾಡಲಿದೆ

4,590 ರುಪಾಯಿಯ ಸ್ಯಾಮ್ಸಂಗ್ Z2 ಫೋನ್ ಜಿಯೋ 4ಜಿ ಪ್ರಿವೀವ್ ಕೊಡುಗೆ

ಸ್ಯಾಮ್ಸಂಗ್ Z2 ಫೋನಿನಲ್ಲಿ ಎಲ್.ಇ.ಡಿ ಫ್ಲಾಷ್ ಇರುವ 5ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಮತ್ತು ಮುಂಬದಿಯಲ್ಲಿ ವಿಜಿಎ ಕ್ಯಾಮೆರ ಇದೆ. 4ಜಿ ವೋಲ್ಟೆ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್ ಸೌಕರ್ಯಗಳಿವೆ. 1,500 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿಯಿದೆ.

English summary
As promised, the South Korean tech giant Samsung has launched its TizenOS powered smartphone -- Z2 in the Indian market at an event in New Delhi.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot