ವಿಶ್ವ ಮಾನ್ಯತೆ ಗಳಿಸಿಕೊಂಡ ಭಾರತೀಯ ಟೆಕ್ ಸಾಧಕರು

By Shwetha
|

ಸುಂದರ್ ಪಿಚ್ಚೈ ಗೂಗಲ್‌ನ ಅತಿ ಮೇರು ದರ್ಜೆಯ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದು, ಅಮೇರಿಕನ್ನರು ಭಾರತದವರೂ ಒಂದಾಗಿ ಸೇರಿ ಹೆಮ್ಮೆಯ ಭಾರತ ಪುತ್ರನಿಗೆ ಹಿರಿಮೆಯ ಗರಿಯನ್ನು ತೊಡಿಸಿದ್ದಾರೆ.

ಓದಿರಿ: ಇಂಟರ್ನೆಟ್‌ನಲ್ಲಿ ಪ್ರಚಾರ ಗಿಟ್ಟಿಸಿಕೊಂಡ ಫೇಕ್ ಸುದ್ದಿಗಳು

ಲ್ಯಾರಿ ಪೇಜ್‌ಗೆ ಪಿಚ್ಚೈ ರಿಪೋರ್ಟ್ ಮಾಡಬೇಕಾಗಿದ್ದು, ಆಲ್ಫಾಬೆಟ್ ಇಂಕ್‌ನ ಸಿಇಒ ಆಗಿ ಇವರು ನೇಮಕಗೊಂಡಿದ್ದಾರೆ. ಆಲ್ಭಾಬೆಟ್ ಇಂಕ್ ಗೂಗಲ್‌ನ ಹೊಸ ಪೇರೆಂಟ್ ಕಂಪೆನಿಯಾಗಿದೆ. ಅಮೇರಿಕದಲ್ಲಿ ನೆಲೆಸಿರುವ ಭಾರತೀಯರ ಈ ಸಾಧನೆ ಭಾರತದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದೇ ಹೇಳಬಹುದು.

ಸತ್ಯ ನಡೇಲ್ಲಾ

ಸತ್ಯ ನಡೇಲ್ಲಾ

47 ವಯಸ್ಸಿನ ನಡೇಲ್ಲಾ, 2014 ರಲ್ಲಿ ಮೈಕ್ರೋಸಾಫ್ಟ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಇವರು ಹೈದ್ರಾಬಾದ್‌ನಲ್ಲಿ ಜನಿಸಿದ್ದು ಐಎಎಸ್ ಅಧಿಕಾರಿಯ ಪುತ್ರನಾಗಿದ್ದಾರೆ.

ಶಂತನು ನಾರಾಯಣ್

ಶಂತನು ನಾರಾಯಣ್

52 ವರ್ಷ ವಯಸ್ಸಿನ ಶಂತನು ನಾರಾಯಣ್ 2005 ರಲ್ಲಿ ಅಡೋಬ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಪಿಕ್ಟ್ರಾದ ಸಹಸ್ಥಾಪಕರು ಆಗಿರುವ ಶಂತನು ಇಂಟರ್ನೆಟ್‌ನಾದ್ಯಂತ ಫೋಟೋ ಹಂಚಿಕೆಯ ಹರಿಕಾರರು ಎಂದೆನಿಸಿದ್ದಾರೆ.

ಪದ್ಮಶ್ರೀ ವಾರಿಯರ್

ಪದ್ಮಶ್ರೀ ವಾರಿಯರ್

ಸಿಸ್ಕೊ ಸಿಸ್ಟಮ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಪದ್ಮಶ್ರೀ ವಾರಿಯರ್ 1961 ರಲ್ಲಿ ವಿಜಯವಾಡಾದಲ್ಲಿ ಜನಿಸಿದ್ದರು.

ವಿನೋಸ್ ಕೋಸ್ಲಾ

ವಿನೋಸ್ ಕೋಸ್ಲಾ

ವಿನೋದ್ ಕೋಸ್ಲಾ, ಸನ್ ಮೈಕ್ರೋಸಿಸ್ಟಮ್‌ನ ಸಹಸ್ಥಾಪಕರಾಗಿದ್ದು ಸಿಲಿಕಾನ್ ವಾಲ್ಲಿಗೆ ಪ್ರತಿಭಾವಂತ ಇಂಜಿನಿಯರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಅಮಿತ್ ಸಿಂಗಲ್

ಅಮಿತ್ ಸಿಂಗಲ್

ಗೂಗಲ್ ಸರ್ಚ್ ಎಂಜಿನ್‌ ಅನ್ನು ನಿರ್ವಹಿಸುವ ಅಮಿತ್ ಸಿಂಗಲ್ ಬುದ್ಧಿವಂತ ಅಂತೆಯೇ ಗೂಗಲ್ ಸರ್ಚ್ ನಿರ್ವಹಿಸುವ ಅಲ್ಗಾರಿದಮ್‌ಗೆ ಜವಬ್ದಾರರಾಗಿದ್ದಾರೆ.

ರುಚಿ ಸಾಂಘವಿ

ರುಚಿ ಸಾಂಘವಿ

33 ವರ್ಷ ವಯಸ್ಸಿನ ರುಚಿ ಸಾಂಘವಿ ಫೇಸ್‌ಬುಕ್ ಉತ್ಪನ್ನ ಮ್ಯಾನೇಜರ್ ಆಗಿ ನೇಮಕಗೊಂಡಿರುವ ಪ್ರಥಮ ಮಹಿಳಾ ಇಂಜಿನಿಯರ್ ಎಂದೆನಿಸಿದ್ದಾರೆ.

ದೀಪಕ್ ಅಹುಜಾ

ದೀಪಕ್ ಅಹುಜಾ

ಟೆಸ್ಲಾದ ಹೆಚ್ಚು ನಂಬಿಕರ್ಹ ಉದ್ಯೋಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೀಪಕ್ ಅಹುಜಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿಯನ್ನು ದೀಪಕ್ ಪಡೆದುಕೊಂಡಿದ್ದಾರೆ.

ಪೂಜಾ ಶಂಕರ್

ಪೂಜಾ ಶಂಕರ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪಿಜಾವನ್ನು ಆರಂಭಿಸಿದ ಪೂಜಾ ಶಂಕರ್, ಫೇಸ್‌ಬುಕ್ ಒರೇಕಲ್‌ನೊಂದಿಗೆ ಕಾರ್ಯನಿರ್ವಹಿಸಿದ ನಂತರ ಗುರುಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂಯೋಜನೆಯನ್ನು ಮಾಡಿತು.

ಕವಿತಾರ್ಕ್ ರಾಮ್ ಶ್ರೀರಾಮ್

ಕವಿತಾರ್ಕ್ ರಾಮ್ ಶ್ರೀರಾಮ್

ಶೇರ್‌ಪಾಲೊ ವೆಂಚ್ಯೂರಸ್‌ನ ಪಾಲುದಾರರು ಮತ್ತು ಮ್ಯಾನೇಜಿಂಗ್ ಪಾಲುದಾರರಾಗಿರುವ ಕವಿತಾರ್ಕ್ ಗೂಗಲ್‌ನಲ್ಲಿ ಪ್ರಥಮ ಹೂಡಿಕೆದಾರರು ಎಂದೆನಿಸಿದ್ದಾರೆ.

Best Mobiles in India

English summary
In this article we can see most prominent Indian american in silicon valley.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X