10 ಸಾವಿರದೊಳಗಿನ ಶಕ್ತಿಶಾಲಿ ಬ್ಯಾಟರಿ ಹೊಂದಿರುವ 10 ಸ್ಮಾರ್ಟ್‌ಫೋನ್‌ಗಳು
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುವ ಮೊದಲು ನೋಕಿಯಾ ಮೊಬೈಲ್‌ಗಳಿಗೆ ಭರ್ಜರಿ ಡಿಮ್ಯಾಂಡ್,ಅದು ಬ್ಲ್ಯಾಕ್ ಆಂಡ್ ವೈಟ್ ಸ್ಕ್ರೀನ್ ಇರಲಿ ಕಲರ್ ಸ್ಕ್ರೀನ್ ಇರಲಿ ನೋಕಿಯಾ ಕಂಪೆನಿ ಆದರೆ ಆಯಿತು. ಗುಣಮಟ್ಟವನ್ನು ಪರೀಕ್ಷಿಸದೇ ಜನ ನೋಕಿಯಾ ಮೊಬೈಲ್ ಖರೀದಿಸುತ್ತಿದ್ದರು.
ಆದರೆ ಯಾವಾಗ ನೋಕಿಯಾ ಮೈಕ್ರೋಸಾಫ್ಟ್ ಜೊತೆಗೆ ಒಪ್ಪಂದವಾಗಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿಂಡೋಸ್ ಓಎಸ್ ಬಿಡುಗಡೆ ಮಾಡಲು ಆರಂಭಿಸಿತ್ತು, ಆ ದಿನದಿಂದ ನೋಕಿಯಾದ ಬೇಡಿಕೆ ಕುಸಿಯತೊಡಗಿತು.ಆದರೂ ನೋಕಿಯಾ ಅಭಿಮಾನಿಗಳು ಪ್ರಕಾರ ,ಒಂದು ವೇಳೆ ನೋಕಿಯಾ ಆಂಡ್ರಾಯ್ಡ್ ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದರೆ ಈವಾಗಲೂ ನಂಬರ್ ಒನ್ ಪಟ್ಟ ನೋಕಿಯಾಗೆ ಲಭಿಸುತಿತ್ತು ಎಂದು ಹೇಳುವವರಿದ್ದಾರೆ. ನೋಕಿಯಾ ಆಂಡ್ರಾಯ್ಡ್ ಓಎಸ್‌ನಲ್ಲಿ ಬಿಡುಗಡೆ ಮಾಡದ ಕಾರಣ ಸ್ಯಾಮ್‌ಸಂಗ್ ಸೇರಿದಂತೆ ದೇಶಿಯ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕ್ಲಿಕ್ ಆಗುತ್ತಿರುವುದು ಎಂದು ಮತ್ತೊಂದು ವಾದವನ್ನು ಹೇಳುತ್ತಾರೆ.
ನೋಕಿಯಾ ಅಭಿಮಾನಿಗಳು ಏನೇ ಹೇಳಿದರೂ ಸದ್ಯ ಭಾರತದಲ್ಲಿ ದೇಶಿಯ ಕಂಪೆನಿಗಳು ಮತ್ತು ಚೀನಾ ಕಂಪೆನಿಗಳ ಸ್ಮಾರ್ಟ್‌ಫೋನ್ ಬೇಡಿಕೆ ಹೆಚ್ಚುತ್ತಿರುವುದು ನಿಮಗೆ ಗೊತ್ತಿರುವ ವಿಚಾರ. ಇನ್ನು ಸ್ಮಾರ್ಟ್‌ಫೋನ್‌ಗಳ ಗುಣಮಟ್ಟದ ವಿಚಾರಕ್ಕೆ ಬಂದರೆ ವಿಶ್ವದ ಬಹುತೇಕ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಹಾರ್ಡ್‌ವೇರ್ ಭಾಗಗಳು ಚೀನಾದಲ್ಲೇ ಉತ್ಪಾದನೆಯಾಗುತ್ತದೆ.ನಂತರ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ಯೂಸರ್ ಇಂಟರ್‌ಫೇಸ್, ಕ್ಯಾಮೆರಾ ಇತ್ಯಾದಿ ವಿಶೇಷತೆಯನ್ನು ಸೇರಿಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತದೆ.
ಈ ಕಾರಣಕ್ಕಾಗಿ ಇಲ್ಲಿ ಹತ್ತು ಸಾವಿರದೊಳಗಿನ 10 ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ. ಗುಣಮಟ್ಟದ ಕ್ಯಾಮೆರಾ, ಎಚ್‌ಡಿ ಸ್ಕ್ರೀನ್ ಬೇಡ .ಶಕ್ತಿಶಾಲಿ ಬ್ಯಾಟರಿ,ಪ್ರೊಸೆಸರ್,ಆಂತರಿಕ ಮೆಮೊರಿಯಿರುವ ಸ್ಮಾರ್ಟ್‌ಫೋನ್ ಸಾಕು ಎಂದು ಭಾವಿಸುವ ಮಂದಿಗೆ ಮಾತ್ರ ಈ ಪಟ್ಟಿ ಅನ್ವಯವಾಗುತ್ತದೆ.ಇಲ್ಲಿ ನೀಡಲಾಗಿರುವ ಪಟ್ಟಿಯಲ್ಲಿ ಎಲ್ಲವೂ 2000 mAh ಬ್ಯಾಟರಿ ಮತ್ತು ಅದಕ್ಕಿಂತಲೂ ಹೆಚ್ಚಿನ mAh ಬ್ಯಾಟರಿ ಇರುವ ಸ್ಮಾರ್ಟ್‌ಫೋನ್‌ಗಳಿವೆ.ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.ಇಷ್ಟವಾದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗೆ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಕಾರ್ಬನ್ ಟೈಟಾನಿಯಂ ಎಸ್5
ಬೆಲೆ:9,899
ವಿಶೇಷತೆ:
5 ಇಂಚಿನ qHD ಮಲ್ಟಿಟಚ್ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(960 x 540 ಪಿಕ್ಸೆಲ್)
ಆಂಡ್ರಾಯ್ಡ್4.1 ಜೆಲ್ಲಿಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೋಸೆಸರ್
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3G,ಬ್ಲೂಟೂತ್
2,000 mAh ಬ್ಯಾಟರಿ

ಝೋಲೋ ಕ್ಯೂ700 ಐ
ಬೆಲೆ:8,729
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಕ್ಯೂಎಚ್‌ಡಿ ಐಪಿಎಸ್ ಸ್ಕ್ರೀನ್(960 x 540 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
2 ಎಂಪಿ ಮುಂದುಗಡೆ ಕ್ಯಾಮೆರಾ
ಬಿಎಸ್‌ಐ ಸೆನ್ಸರ್ ಸಹಿತ 8 ಎಂಪಿ ಹಿಂದುಗಡೆ ಕ್ಯಾಮೆರಾ
1 GB ರ್‍ಯಾಮ್
4 GB ಆಂತರಿಕ ಮೆಮೋರಿ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್,ವೈಫೈ,ಜಿಪಿಎಸ್,ಎ-ಜಿಪಿಎಸ್,ಮೈಕ್ರೋ ಯುಎಸ್‌ಬಿ
2400 mAh ಬ್ಯಾಟರಿ

ಸ್ಪೈಸ್ ಕೂಲ್‌ಪ್ಯಾಡ್ ಎಂಐ - 515
ಬೆಲೆ:8,990
ವಿಶೇಷತೆ:
ಡ್ಯುಯಲ್ ಸಿಮ್(ಜಿಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1 GB ರ್‍ಯಾಮ್
4 GB ಆಂತರಿಕ ಮೆಮೊರಿ
0.3 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

ಸೆಲ್ಕಾನ್ ಸಿಗ್ನೇಚರ್ ಒನ್ ಎ 107 ಪ್ಲಸ್
ಬೆಲೆ:6,174
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(480X800 ಪಿಕ್ಸೆಲ್)
ಆಂಡ್ರಾಯ್ಡ್ 4.0.1 ಐಸಿಎಸ್ ಓಎಸ್
1 GHz ಡ್ಯುಯಲ್ ಕೋರ್ ಪ್ರೊಸೆಸರ್
512MB RAM
4GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಬ್ಯಾಟರಿ

ಜಿಯೋನೀ ಜಿಪ್ಯಾಡ್ ಜಿ3
ಬೆಲೆ:9,390
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(854 × 480 ಪಿಕ್ಸೆಲ್)
1.2 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
5 ಎಂಪಿ ಮುಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2250 mAh ಬ್ಯಾಟರಿ

ಇಂಟೆಕ್ಸ್ ಅಕ್ವಾ ಐ4
ಬೆಲೆ:8,520
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.0 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(854 x 480)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಬ್ಲೂಟೂತ್,ವೈಫೈ,ಜಿಪಿಎಸ್
2000mAh ಬ್ಯಾಟರಿ

ಲಾವಾ ಐರಿಸ್ 503
ಬೆಲೆ: 8,599
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯೂ ಎಚ್‌ಡಿ ಐಪಿಎಸ್ ಸ್ಕ್ರೀನ್(540x960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
512MB ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೊರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000mAh ಬ್ಯಾಟರಿ

ಸೆಲ್ಕಾನ್ ಎಆರ್ 50
ಬೆಲೆ:8767
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸೆರ್
512 MB ರ್‍ಯಾಮ್
4 GB ಆಂತರಿಕ ಮಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32 ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

ಕಾರ್ಬನ್ ಎ 18 ಪ್ಲಸ್
ಬೆಲೆ:8,039
ವಿಶೇಷತೆ:
5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(480 x 853 ಪಿಕ್ಸೆಲ್)
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಡ್ಯುಯಲ್ ಕೋರ್ ಪ್ರೊಸೆಸರ್
512 MB ರ್‍ಯಾಮ್
4 GB ಆಂತರಿಕ ಮಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಎ111 ಕ್ಯಾನ್‌ವಾಸ್ ಡೂಡಲ್
ಬೆಲೆ:9999
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿ ಟಚ್ ಸ್ಕ್ರೀನ್
1.2GHz ಕ್ವಾಡ್ ಕೋರ್ ಸ್ನಾಪ್‌ಡ್ರಾಗನ್ ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್,ಎಲ್‌ಎಇಡಿ ಫ್ಲ್ಯಾಶ್)
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
4GB ಆಂತರಿಕ ಮೆಮೋರಿ
ವೈಫೈ,3G,ಬ್ಲೂಟೂತ್,ಜಿಪಿಎಸ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100 mAh ಬ್ಯಾಟರಿ


Click it and Unblock the Notifications








