ಚೀನಾದ ಚಿನ್ನದ ಮೊಟ್ಟೆ ಶ್ಯೋಮಿಯಿಂದ ಅದ್ಭುತ ಡಿವೈಸ್
ಚೀನಾದ ಆಪಲ್ ಎಂದೇ ಕರೆಯಲ್ಪಟ್ಟಿರುವ ಶ್ಯೋಮಿ ವರ್ಷದ ಹೆಚ್ಚು ಕಾತರದ ಫ್ಲ್ಯಾಗ್‌ಶಿಪ್ ಡಿವೈಸ್ ಎಂದೇ ಚಿರಪರಿಚಿತವಾಗಿದೆ. ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಎಮ್ಐ 5 ಇದಕ್ಕೆ ತಕ್ಕ ಪುರಾವೆಯನ್ನು ಒದಗಿಸಿದೆ. ಈಗ ಚೀನಾದ ಚಿನ್ನದ ಮೊಟ್ಟೆ ತನ್ನ ಅಪ್‌ಗ್ರೇಡ್ ಆಗಿರುವ ಆವೃತ್ತಿ ಶ್ಯೋಮಿ ಎಮ್ಐ 5 ಎಸ್ ಅನ್ನು ಲಾಂಚ್ ಮಾಡಹೊರಟಿದೆ.
ಓದಿರಿ: 4ಜಿ ಸ್ಮಾರ್ಟ್‌ಫೋನ್‌ನಲ್ಲಿರುವ ದೋಷಕ್ಕೆ ಅದ್ಭುತ ಪರಿಹಾರಗಳು: ಟ್ರೈ ಮಾಡಿ
ಡಿವೈಸ್‌ನ 6ಜಿಬಿ RAM ಮತ್ತು ಸ್ನ್ಯಾಪ್‌ಡ್ರ್ಯಾಗನ್ 821 ಸಾಕ್ ಎಮ್ಐ 5 ಎಸ್‌ನಲ್ಲಿದೆ. ಅಂಟುಟು ಬೆಂಚ್ ಮಾರ್ಕ್ ಅನ್ನು ಡಿವೈಸ್ ಪಡೆದುಕೊಂಡಿದ್ದು, ಸ್ನ್ಯಾಪ್‌ಡ್ರ್ಯಾಗನ್ 821 ಚಿಪ್‌ಸೆಟ್ ಅನ್ನು ಡಿವೈಸ್ ಒಳಗೊಂಡಿದೆ.
ಓದಿರಿ: ವಾಟ್ಸಾಪ್‌ನಲ್ಲಿ ಸಂಪರ್ಕ ಬ್ಲಾಕ್ ಮಾಡಿದ ಮೇಲೆ ಚಿಂತೆಯೇ ಮಾಡದಿರಿ!

ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಅಂಟುಟು ಪಟ್ಟಿ ಮಾಡಿರುವಂತೆ ಎಮ್ಐ 5 ಎಸ್ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಕ್ರೀನ್ ಗಾತ್ರದಲ್ಲಿ ಯಾವುದೇ ವಿವರಗಳು ದೊರೆಯದೇ ಇದ್ದರೂ, ಎಮ್ಐ 5 ಎಸ್, 5.15 ಇಂಚಿನ ಸ್ಕ್ರೀನ್ ಅನ್ನು ಹೊಂದಲಿದೆ.

ಆಪಲ್‌ನ 3ಡಿ ಟಚ್ ಫೀಚರ್
ಈ ಹಿಂದೆ ಮಾಡಿರುವ ವದಂತಿಗಳಂತೆ, ಎಮ್ಐ 5 ಎಸ್ ಸೂಕ್ಷ್ಮ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ನ ಅದೇ ಫೀಚರ್ ಅನ್ನು ಡಿವೈಸ್ ಪಡೆದುಕೊಂಡಿದೆ. ನೀವು ಇದರ ಮೇಲೆ ಹಾಕುವ ಒತ್ತಡವನ್ನು ಆಧರಿಸಿ ಇದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

ಸ್ನ್ಯಾಪ್‌ಡ್ರ್ಯಾಗನ್ 821 ಚಿಪ್‌ಸೆಟ್
ಈ ಹಿಂದೆ ನಮೂದಿಸಿರುವಂತೆ, ಶ್ಯೋಮಿಯ ಅತ್ಯಾಧುನಿಕ ಆಫರಿಂಗ್ ಕ್ವಾಡ್ ಕೋರ್ 2.4GHZ ಸ್ನ್ಯಾಪ್‌ಡ್ರ್ಯಾಗನ್ 821 ಸಾಕ್‌ನೊಂದಿಗೆ ಬಂದಿದೆ. ಅಡ್ರೆನೊ 530 ಜಿಪಿಯುನಲ್ಲಿ ಗ್ರಾಫಿಕ್‌ಗಳನ್ನು ನಿಮಗೆ ತೆಗೆಯಬಹುದಾಗಿದೆ.

ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಎಮ್ಐ 5 ಎಸ್ ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 7.0 ನ್ಯೂಗಾದೊಂದಿಗೆ ಇದು ಅಪ್‌ಡೇಟ್ ಆದಲ್ಲಿ ಇನ್ನಷ್ಟು ಉತ್ತಮವಾಗಿರುತ್ತದೆ. ಆದರೆ ನಮಗೆ ಸಿಕ್ಕಿರುವ ಮಾಹಿತಿ ಇಷ್ಟೇ ಆಗಿದೆ. ಅತ್ಯಾಧುನಿಕ ಓಎಸ್ ಅನ್ನು ಇದು ಅಪ್‌ಡೇಟ್ ಮಾಡಬಹುದು ಎಂಬುದಾಗಿ ನಾವು ಕಾಯುತ್ತಿದ್ದೇವೆ.

6 ಜಿಬಿ RAM, ಇದ್ದರೂ ಇರಬಹುದು
ಅಂಟುಟು ಬೆಂಚ್‌ಮಾರ್ಕ್ ಇದುವರೆಗೆ RAM ಕುರಿತು ಏನೂ ಹೇಳದೇ ಇದ್ದರೂ, ಎಮ್ಐ 5 ಎಸ್, 6ಜಿಬಿ RAM ಅನ್ನು ಒಳಗೊಂಡಿರುವ ಸಾಧ್ಯತೆ ಇದೆ.

ಹೆಚ್ಚುವರಿ ಸಂಗ್ರಹಣೆ
ಎಮ್ಐ 5 ಎಸ್ ಬೇರೆ ಬೇರೆ ಸಂಗ್ರಹಣಾ ಸಾಮರ್ಥ್ಯಗಳನ್ನು ಪಡೆದುಕೊಳ್ಳಲಿದೆ. ಇದರಲ್ಲೊಂದು 256 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಲಿದೆ.

16 ಎಮ್‌ಪಿ ರಿಯರ್ ಕ್ಯಾಮೆರಾ
ಎಮ್ಐ 5 ಎಸ್ 16 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಳ್ಳಲಿದ್ದು f/1.8 ಅಪಾರ್ಚರ್, 4 ಆಕ್ಸಿಸ್ ಒಐಎಸ್, ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್, ಕಡಿಮೆ ಬೆಳಕಿನ ಇಮೇಜಿಂಗ್, 8 ಎಮ್‌ಪಿ ಸೆಲ್ಫಿ ಕ್ಯಾಮೆರಾವನ್ನು ಡಿವೈಸ್ ಹೊಂದಲಿದೆ. ಎಮ್ಐ 5 ಎಸ್ 4 ಕೆ ವೀಡಿಯೊಗಳನ್ನು 30fps ನಲ್ಲಿ ರೆಕಾರ್ಡ್ ಮಾಡಲಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್
ಎಮ್ಐ 5 ಎಸ್, ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಂದಿದ್ದು ಹೊಸದಾಗಿ ರಿಲೀಸ್ ಆಗಿರುವ ಐಫೋನ್ 7 ಪ್ಲಸ್‌ಗೆ ಭರ್ಜರಿ ಪೈಪೋಟಿಯನ್ನು ನೀಡಲಿದೆ.

ಬ್ಯಾಟರಿ ಸಾಮರ್ಥ್ಯದಲ್ಲಿ ಸುಧಾರತೆ
ಶ್ಯೋಮಿ ಎಮ್ಐ 5 ಎಸ್ ಹೆಚ್ಚು ಸುಧಾರಿತ 3490mAh ಬ್ಯಾಟರಿಯನ್ನು ನೀಡುತ್ತಿದ್ದು ಎಮ್ಐ 5 ನಲ್ಲಿರುವ 3000mAh ಬ್ಯಾಟರಿಗೆ ಹೋಲಿಸಿದಾಗ ಇದೇ ಬ್ಯಾಟರಿ ಎಮ್ಐ 5 ಎಸ್‌ಗೆ ಅತ್ಯುತ್ತಮ ಎಂದೆನಿಸಿದೆ.

ಕ್ವಾಲ್‌ಕಾಮ್‌ನ ಅಲ್ಟ್ರಾ ಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನ
ಎಮ್ಐ 5 ಎಸ್ ಕ್ವಾಲ್‌ಕಾಮ್‌ನ ಅಲ್ಟ್ರಾಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನದೊಂದಿಗೆ ಬಂದಿದೆ. ಗ್ಲಾಸ್, ಪ್ಲಾಸ್ಟಿಕ್, ಸ್ಟೀಲ್ ಮತ್ತು ಸಫಾಯರ್ ಹೀಗೆ ಬೇರೆ ಬೇರೆ ಸಾಮಾಗ್ರಿಗಳಲ್ಲಿ ಇದು ಕೆಲಸ ಮಾಡಲಿದೆ.


Click it and Unblock the Notifications








