ವಾಟ್ಸಾಪ್‌ನಲ್ಲಿ ಸಂಪರ್ಕ ಬ್ಲಾಕ್ ಮಾಡಿದ ಮೇಲೆ ಚಿಂತೆಯೇ ಮಾಡದಿರಿ!

By Shwetha
|

ಹೆಚ್ಚು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎಂದೆನಿಸಿರುವ ವಾಟ್ಸಾಪ್ ಕುಟುಂಬದ ಸರ್ವ ಸದಸ್ಯರನ್ನು ಸ್ನೇಹಿತರನ್ನು ನಿಕಟವಾಗಿರಿಸುವಲ್ಲಿ ಒಂದು ಸೇತುವೆಯಾಗಿದೆ. ವಾಟ್ಸಾಪ್‌ನಲ್ಲಿ ಮೀಡಿಯಾ ಫೈಲ್‌ಗಳು, ಡಾಕ್ಯುಮೆಂಟ್‌ಗಳು, ಸಂಪರ್ಕಗಳು ಮತ್ತು ಸ್ಥಳವನ್ನು ಹಂಚಿಕೊಳ್ಳುವುದು ಹೆಚ್ಚು ಸುಲಭವಾಗಿದೆ.

ಓದಿರಿ: ಆಂಡ್ರಾಯ್ಡ್ ಬಳಕೆದಾರರು ಮಿಸ್ ಮಾಡಿಕೊಳ್ಳಲೇಬಾರದ ಟಿಪ್ಸ್‌

ಹೆಚ್ಚು ತೊಂದರೆಯನ್ನುಂಟು ಮಾಡುತ್ತಿರುವ ವ್ಯಕ್ತಿಗಳನ್ನು ಇದರಲ್ಲಿ ಬ್ಲಾಕ್ ಮಾಡುವಲ್ಲಿ ನೀವು ಕೆಲವೊಂದು ಸಂದೇಹಗಳನ್ನು ಹೊಂದಿರಬಹುದು. ಹಾಗಿದ್ದರೆ ನಿಮ್ಮೆಲ್ಲಾ ಸಂದೇಹಗಳನ್ನು ದೂರಮಾಡುವ ಸಲಹೆಗಳೊಂದಿಗೆ ಇಂದಿನ ಲೇಖನದಲ್ಲಿ ನಾವು ಟಿಪ್ಸ್‌ಗಳನ್ನು ನೀಡಿದ್ದೇವೆ.

ಇದನ್ನೂ ಓದಿ: ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ

ಬ್ಲಾಕ್ ಮಾಡಿದ ಸಂಪರ್ಕಕ್ಕೆ ಸಂದೇಶ ಡೆಲಿವರಿ ಆಗುವುದಿಲ್ಲ

ಬ್ಲಾಕ್ ಮಾಡಿದ ಸಂಪರ್ಕಕ್ಕೆ ಸಂದೇಶ ಡೆಲಿವರಿ ಆಗುವುದಿಲ್ಲ

ವಾಟ್ಸಾಪ್‌ನಲ್ಲಿ ನೀವು ಯಾರನ್ನಾದರೂ ಬ್ಲಾಕ್ ಮಾಡಿದ್ದಲ್ಲಿ, ನಿಮಗೆ ಆ ವ್ಯಕ್ತಿಯ ಸಂದೇಶ ದೊರೆಯುವುದಿಲ್ಲ. ಸಂಪರ್ಕವನ್ನು ಅನ್‌ಬ್ಲಾಕ್ ಮಾಡುವುದರಿಂದ ನಿಮಗೆ ಕಳುಹಿಸಿದ ಸಂದೇಶಗಳು ನಿಮಗೆ ತಲುಪುವುದೇ ಇಲ್ಲ.

ನಿಮ್ಮ ಲಾಸ್ಟ್ ಸೀನ್ ಗೋಚರಿಸುವುದಿಲ್ಲ

ನಿಮ್ಮ ಲಾಸ್ಟ್ ಸೀನ್ ಗೋಚರಿಸುವುದಿಲ್ಲ

ನಿಮ್ಮ ಸಂಪರ್ಕಗಳಲ್ಲಿ ನೀವು ಯಾರನ್ನಾದರೂ ಬ್ಲಾಕ್ ಮಾಡಿದ್ದರೆ ನಿಮ್ಮ ಕೊನೆಯ ವಿವರವನ್ನು ಅವರಿಗೆ ನೋಡಲು ಆಗುವುದಿಲ್ಲ.

ಸ್ಟೇಟಸ್ ಮೆಸೇಜ್ ಹಿಡನ್ ಆಗಿರುತ್ತದೆ

ಸ್ಟೇಟಸ್ ಮೆಸೇಜ್ ಹಿಡನ್ ಆಗಿರುತ್ತದೆ

ಲಾಸ್ಟ್ ಸೀನ್ ಮಾಹಿತಿಯಂತೆಯೇ, ವಾಟ್ಸಾಪ್‌ನಲ್ಲಿರುವ ಸ್ಟೇಟಸ್ ಸಂದೇಶವು ಸಂಪರ್ಕದಿಂದ ಮರೆಯಾಗಿರುತ್ತದೆ. ಸಂಪರ್ಕವನ್ನು ಅನ್‌ಬ್ಲಾಕ್ ಮಾಡಿದ ನಂತರವೇ ನಿಮ್ಮ ಸ್ಟೇಟಸ್ ಅನ್ನು ವ್ಯಕ್ತಿಗೆ ಕಾಣಲು ಸಾಧ್ಯ.

ನಿಮ್ಮ ಪ್ರೊಫೈಲ್ ಚಿತ್ರ ಕಾಣುವುದಿಲ್ಲ

ನಿಮ್ಮ ಪ್ರೊಫೈಲ್ ಚಿತ್ರ ಕಾಣುವುದಿಲ್ಲ

ವಾಟ್ಸಾಪ್‌ನಲ್ಲಿ ನೀವು ಬ್ಲಾಕ್ ಮಾಡಿದ ಸಂಪರ್ಕಕ್ಕೆ ನಿಮ್ಮ ಪ್ರೊಫೈಲ್ ಚಿತ್ರ ಕಾಣುವುದಿಲ್ಲ. ನಿಮ್ಮ ಡಿಸ್‌ಪ್ಲೇ ಜಾಗದಲ್ಲಿ ಅವರಿಗೆ ಯಾವುದೇ ಫೋಟೋ ಕೂಡ ದೊರೆಯುವುದಿಲ್ಲ.

ನಿಮಗೆ ಕರೆಮಾಡಲೂ ಸಾಧ್ಯವಿಲ್ಲ

ನಿಮಗೆ ಕರೆಮಾಡಲೂ ಸಾಧ್ಯವಿಲ್ಲ

ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ ಸಂಪರ್ಕವು ನಿಮಗೆ ಯಾವುದೇ ಸಂದೇಶಗಳನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಕಳುಹಿಸಲು ಆಗುವುದಿಲ್ಲ. ನಿಮಗೆ ಕರೆ ಮಾಡಲೂ ಅವರಿಂದ ಸಾಧ್ಯವಿಲ್ಲ.

ರೀಡ್ ರಿಸಿಪ್ಟ್ ಗೋಚರಿಸುವುದಿಲ್ಲ

ರೀಡ್ ರಿಸಿಪ್ಟ್ ಗೋಚರಿಸುವುದಿಲ್ಲ

ಯಾವುದೇ ಸಂದೇಶ ನಿಮಗೆ ಅಥವಾ ಅವರಿಗೆ ವಿತರಣೆಯಾಗುವುದಿಲ್ಲ ಅಂತೆಯೇ ಬ್ಲ್ಯೂ ಟಿಕ್ ಮಾರ್ಕ್ ಕೂಡ ಇದರಲ್ಲಿ ಗೋಚರವಾಗುವುದಿಲ್ಲ.

ಗ್ರೂಪ್ ಚಾಟ್ಸ್‌ಗೆ ತೊಂದರೆ ಇಲ್ಲ

ಗ್ರೂಪ್ ಚಾಟ್ಸ್‌ಗೆ ತೊಂದರೆ ಇಲ್ಲ

ಬ್ಲಾಕ್ ಮಾಡಿದ ವ್ಯಕ್ತಿಯು ಯಾವುದೇ ಸಂದೇಶಗಳನ್ನು ವೈಯಕ್ತಿಕವಾಗಿ ಕಳುಹಿಸಲು ಸಾಧ್ಯವಿಲ್ಲ, ಆದರೆ ಗ್ರೂಪ್ ಚಾಟ್‌ಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಬ್ಲಾಕ್ ಮಾಡಿದ ಸಂದೇಶವು ನಿಮಗೆ ಸಂದೇಶಗಳನ್ನು ಗ್ರೂಪ್‌ನಲ್ಲಿ ಕಳುಹಿಸಬಹುದು ಅದರಲ್ಲೂ ನೀವು ನಿರ್ದಿಷ್ಟ ಸಂಪರ್ಕವನ್ನು ಸೇರಿಸಿದರೆ ಇದು ಸಾಧ್ಯ.

ಅನ್‌ಬ್ಲಾಕ್ ಮಾಡುವ ಮುನ್ನ ಸಂದೇಶ, ಕರೆ ಮಾಡಲು ಸಾಧ್ಯವಿಲ್ಲ

ಅನ್‌ಬ್ಲಾಕ್ ಮಾಡುವ ಮುನ್ನ ಸಂದೇಶ, ಕರೆ ಮಾಡಲು ಸಾಧ್ಯವಿಲ್ಲ

ವಾಟ್ಸಾಪ್‌ನಲ್ಲಿ ನೀವು ಸಂಪರ್ಕವನ್ನು ಬ್ಲಾಕ್ ಮಾಡಿದರೆ, ಆ ವ್ಯಕ್ತಿಗೆ ಮಾತ್ರವಲ್ಲ ನಿಮಗೂ ಯಾವುದೇ ಕರೆ ಅಥವಾ ಸಂದೇಶಗಳನ್ನು ಕಳುಹಿಸಲು ಸಾಧ್ಯವಿಲ್ಲ.

ವಾಟ್ಸಾಪ್‌ನಿಂದ ಸಂಪರ್ಕವನ್ನು ಅಳಿಸಲಾಗುವುದಿಲ್ಲ

ವಾಟ್ಸಾಪ್‌ನಿಂದ ಸಂಪರ್ಕವನ್ನು ಅಳಿಸಲಾಗುವುದಿಲ್ಲ

ನೀವು ಬ್ಲಾಕ್ ಮಾಡಿದ ಸಂಪರ್ಕವನ್ನು ವಾಟ್ಸಾಪ್‌ನಿಂದ ಅಳಿಸಲು ಸಾಧ್ಯವಿಲ್ಲ. ನಿಮ್ಮ ಫೋನ್ ಬುಕ್ ಅಥವಾ ಅಡ್ರೆಸ್ ಬುಕ್‌ನಿಂದ ಡಿಲೀಟ್ ಮಾಡಿದರೆ ಮಾತ್ರ ಇದು ನೆರವೇರುತ್ತದೆ.

ಎಲ್ಲವೂ ನಿಮ್ಮ ಕೈಯಲ್ಲಿದೆ

ಎಲ್ಲವೂ ನಿಮ್ಮ ಕೈಯಲ್ಲಿದೆ

ವಾಟ್ಸಾಪ್‌ನಲ್ಲಿ ಸಂಪರ್ಕವನ್ನು ಬ್ಲಾಕ್ ಮಾಡುವುದು ಮತ್ತು ಅನ್‌ಬ್ಲಾಕ್ ಮಾಡುವುದು ನಿಮ್ಮ ಕೈಯಲ್ಲೇ ಇದೆ. ನಿಮ್ಮ ಆಸೆ ಇದಾಗಿದ್ದರೆ ಸುಲಭವಾಗಿ ಇದನ್ನು ಮಾಡಬಹುದಾಗಿದೆ. ಸಂಪರ್ಕದ ಮೇಲೆ ದೀರ್ಘವಾಗಿ ಒತ್ತುವುದರ ಮೂಲಕ, ಆ ವ್ಯಕ್ತಿಯೊಂದಿಗೆ ನೀವು ಮಾಡುತ್ತಿರುವ ಸಂವಾದಕ್ಕೆ ಅಂತ್ಯ ಹಾಡಲು ಅನ್‌ಬ್ಲಾಕ್ ಮಾಡಬಹುದಾಗಿದೆ.

Best Mobiles in India

English summary
Here, we have listed a few such queries listed here. Take a look below to know what happens when you block someone on WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X