Subscribe to Gizbot

4ಜಿ ಸ್ಮಾರ್ಟ್‌ಫೋನ್‌ನಲ್ಲಿರುವ ದೋಷಕ್ಕೆ ಅದ್ಭುತ ಪರಿಹಾರಗಳು: ಟ್ರೈ ಮಾಡಿ

Written By:

ಭಾರತದಲ್ಲಿ ರಿಲಾಯನ್ಸ್ ಜಿಯೋ 4ಜಿ ನೆಟ್‌ವರ್ಕ್ ಅನ್ನು ಲಾಂಚ್ ಮಾಡಿದ ನಂತರ 4ಜಿ ಎಲ್‌ಟಿಇ ಸೇವೆಗಳಿಗೆ ಜನರು ಹುಚ್ಚರಾಗುತ್ತಿದ್ದಾರೆ. ಭಾರತದಲ್ಲಿ 4ಜಿ ಗೆ ನೆರವಾಗುವ ಮಾದರಿಯಲ್ಲಿ ನೆಟ್‌ವರ್ಕ್ ಇದೆಯೇ ಎಂಬುದನ್ನು ಕಂಡುಕೊಳ್ಳುವುದು ಜಿಯೋಗೆ ಈಗ ಮುಖ್ಯವಾಗಿದ್ದು 3ಜಿ ಮತ್ತು 2ಜಿ ಸೇವೆಗೂ ಇದು ಯಾವುದೇ ತೊಡಕನ್ನು ಉಂಟುಮಾಡುತ್ತಿಲ್ಲ.

ಓದಿರಿ: ಮೊಬೈಲ್ ಬಿಲ್ ಪಾವತಿ ಮಾಡಲು ಇನ್ನು ಆನ್‌ಲೈನ್ ಸಾಕು

ಈಗಂತೂ ಪ್ರತಿಯೊಂದು ಟೆಲಿಕಾಮ್ ಆಪರೇಟರ್‌ಗಳಾದ ವೊಡಾಫೋನ್, ಏರ್‌ಟೆಲ್, ಬಿಎಸ್‌ಎನ್‌ಎಲ್ 4ಜಿ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನ ಭದ್ರಪಡಿಸುವ ನಿಟ್ಟಿನಲ್ಲಿ ಮುಂದಿವೆ. ಅದಾಗ್ಯೂ 4ಜಿ ಎಲ್‌ಟಿಇ ಸೇವೆಯು ಸಿಗ್ನಲ್, ಕಾಲ್ ಡ್ರಾಪ್ಸ್ ಮತ್ತು ವೇಗ ಮೊದಲಾದ ತೊಂದರೆಗಳನ್ನು ಎದುರುಗೊಳ್ಳುತ್ತಿದೆ ಎಂಬ ಮಾತೂ ಇದೆ. ಅದಕ್ಕಾಗಿ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ 4ಜಿ ಎಲ್‌ಟಿಇ ಸಮಸ್ಯೆಗಳು ಮತ್ತು ಅದಕ್ಕೆ ಬೇಕಾದ ಪರಿಹಾರಗಳೊಂದಿಗೆ ನಾವು ಬಂದಿದ್ದು ನೀವು ಅದನ್ನು ಇಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ನೀವರಿಯಲೇಬೇಕಾಗಿರುವ ರಿಲಾಯನ್ಸ್ ಜಿಯೋ ಡೇಟಾ ಯೋಜನೆ ಟಾರಿಫ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4ಜಿ ಸಿಗ್ನಲ್ ಇಲ್ಲ

4ಜಿ ಸಿಗ್ನಲ್ ಇಲ್ಲ

4ಜಿ ಗೆ ಬೆಂಬಲವನ್ನು ನೀಡುವ ಸಿಮ್ ಕಾರ್ಡ್ ಅನ್ನು ಸ್ಮಾರ್ಟ್‌ಫೋನ್ ಹೊಂದಿದ್ದರೂ ಸಿಗ್ನಲ್ ಕೊರತೆಯನ್ನು ಬಳಕೆದಾರರು ಈಗ ಎದುರಿಸುತ್ತಿದ್ದಾರೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಕಾರಣದಿಂದ ಉಂಟಾಗಿರುವ ಸಮಸ್ಯೆಯಾಗಿದೆ. ನಿಮ್ಮ ಫೋನ್ 4ಜಿ ಎಲ್‌ಟಿಇ ಅನ್ನು ಒಳಗೊಂಡಿದೆಯೇ ಎಂಬುದನ್ನು ಕಂಡುಕೊಳ್ಳಿ ಏಕೆಂದರೆ ಕೆಲವು ಫೋನ್‌ಗಳು 3ಜಿ ಗೆ ಮಾತ್ರವೇ ಸೀಮಿತವಾಗಿರುತ್ತದೆ.

4ಜಿ ಸ್ಮಾರ್ಟ್‌ಫೋನ್‌ಗಳಲ್ಲಿ 3ಜಿ ಸಿಗ್ನಲ್

4ಜಿ ಸ್ಮಾರ್ಟ್‌ಫೋನ್‌ಗಳಲ್ಲಿ 3ಜಿ ಸಿಗ್ನಲ್

ಇಂತಹ ಸಮಸ್ಯೆಯನ್ನು ಹೆಚ್ಚಿನ ಬಳಕೆದಾರರು ಎದುರಿಸುತ್ತಿದ್ದಾರೆ. ನಿಮ್ಮ ಪ್ರದೇಶವು 4ಜಿ ಬೆಂಬಲವನ್ನು ಪಡೆದುಕೊಳ್ಳುತ್ತಿಲ್ಲ ಎಂದಾಗಿದೆ ಅಂದರೆ ನೀವು 3ಜಿ ಸಿಗ್ನಲ್ ಅನ್ನು ಪಡೆದುಕೊಳ್ಳುತ್ತಿದ್ದೀರಿ. ನಿಮ್ಮ ಪ್ರದೇಶವು 4ಜಿ ಸೇವೆಯನ್ನು ಒಳಗೊಂಡಿದೆ ಎಂಬುದನ್ನು ಗಮನಿಸಿಕೊಳ್ಳಿ.

ನಿಧಾನ ಗತಿಯ ಡೇಟಾ

ನಿಧಾನ ಗತಿಯ ಡೇಟಾ

4ಜಿ ನೆಟ್‌ವರ್ಕ್ ಹೆಚ್ಚು ವೇಗದ ಡೇಟಾವನ್ನು ಒದಗಿಸುತ್ತದೆ ಅದಾಗ್ಯೂ ಹೆಚ್ಚಿನ ಬಳಕೆದಾರರು ನಿಧಾನ ಗತಿಯ ಡೇಟಾ ವೇಗವನ್ನು ಪಡೆದುಕೊಳ್ಳುತ್ತಿದ್ದು, ಇದಕ್ಕೆ ನಿಮ್ಮ ಫೋನ್‌ನ ಎಪಿಎನ್ ಅನ್ನು ಡಿಲೀಟ್ ಮಾಡಿ ಮತ್ತು ಎಪಿಎನ್ ರಿಸೆಟ್ ಮಾಡಿ ಇದು ಡೇಟಾ ವೇಗವನ್ನು ಹೆಚ್ಚಿಸುತ್ತದೆ.

ನೆಟ್‌ವರ್ಕ್ ಬ್ಯಾಂಡ್ ಸಮಸ್ಯೆಗಳು

ನೆಟ್‌ವರ್ಕ್ ಬ್ಯಾಂಡ್ ಸಮಸ್ಯೆಗಳು

4ಜಿ ನೆಟ್‌ವರ್ಕ್ ಕೆಲವೊಂದು ಬ್ಯಾಂಡ್‌ಗಳಿಗೆ ಸೀಮಿತವಾಗಿರುತ್ತದೆ. 1800MHZ, 2300MHZ, 800MHZ ಅಂತೆಯೇ ಬ್ಯಾಂಡ್ 40 ಯಂತಹ ಬ್ಯಾಂಡ್‌ಗಳಲ್ಲೂ ಲಭ್ಯವಿದೆ. ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಎಲ್ಲಾ ಬ್ಯಾಂಡ್‌ಗಳಿಗೆ ಬೆಂಬಲವನ್ನು ನೀಡುತ್ತದೆ. ಆದರೆ ಕೆಲವು ಫೋನ್‌ಗಳು ಬೆಂಬಲವನ್ನು ನೀಡುವುದಿಲ್ಲ. ನಿಮ್ಮ ನೆಟ್‌ವರ್ಕ್ ಬ್ಯಾಂಡ್‌ಗೆ ಅನುಗುಣವಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಆರಿಸಿ.

ಕಾಲ್ ಡ್ರಾಪ್ ಸಮಸ್ಯೆಗಳು

ಕಾಲ್ ಡ್ರಾಪ್ ಸಮಸ್ಯೆಗಳು

ನೀವು ಕರೆಯಲ್ಲಿದ್ದಾಗ ನಿಮ್ಮ ನೆಟ್‌ವರ್ಕ್ 3ಜಿ ಅಥವಾ 2ಜಿಗೆ ಡ್ರಾಪ್ ಆದಾಗ ನಿಮ್ಮ ಕರೆ ಕೂಡ ಸಂಪರ್ಕವನ್ನು ಕಡಿತಗೊಳ್ಳುತ್ತದೆ ಈ ಸಮಸ್ಯೆಯನ್ನು ಹೆಚ್ಚಿನ ಬಳಕೆದಾರರು ಎದುರಿಸುತ್ತಿದ್ದಾರೆ. ನಿಮ್ಮ ಸಿಗ್ನಲ್ ಅನ್ನು ಮಾನಿಟರ್ ಮಾಡುವುದು ಇದಕ್ಕಿರುವ ಒಂದೇ ಪರಿಹಾರವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Hence today GIZBOT, has listed some of the common 4G LTE problems and possible solutions for them. Take a look, you can thank us later.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot