10 ಸಾವಿರಕ್ಕೆ ಟಾಪ್ 5 ಟಚ್

ಸ್ಮಾರ್ಟ್ ಫೋನುಗಳು ಇತ್ತೀಚೆಗೆ ತುಂಬಾ ಖ್ಯಾತಿಯನ್ನು ಪಡೆಯುತ್ತಿದ್ದು ಸಾಮಾನ್ಯವಾದ Qwerty ಕೀಪ್ಯಾಡಿನ ಮೊಬೈಲುಗಳನ್ನು ಹಿಂದಿಕ್ಕುತ್ತಿದೆ. ಆದರೆ ಕೆಲವರಿಗೆ ಟಚ್ ಸ್ಕ್ರೀನ್ ಅನ್ನು ಪ್ರಾರಂಭದಲ್ಲಿ ಬಳಸಲು ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ಮೊಬೈಲು ಕಂಪನಿಗಳು ಟಚ್ ಸ್ಕ್ರೀನ್ ಹಾಗು ಕೀಪ್ಯಾಡ್, ಎರಡೂ ಇರುವ ಟಚ್ & ಟೈಪ್ ಫೋನುಗಳನ್ನು ಹೊರತಂದಿವೆ. ನಿಮಗಾಗಿ ಇಲ್ಲಿದೆ, ಟಾಪ್ 5 ಟಚ್ ಮತ್ತು ಟೈಪ್ ಫೋನುಗಳ ಪಟ್ಟಿ:
1) ನೋಕಿಯಾ ಆಶಾ 303 (7,800 ರೂಪಾಯಿ) : ಹೊಸದಾಗಿ ಬಿಡುಗಡೆ ಆಗಿರುವ ಈ ಮೊಬೈಲ್ S40 ತಂತ್ರಾಂಶದೊಂದಿಗೆ ಕಾರ್ಯ ನಿರ್ವಹಿಸುತ್ತದೆ ಹಾಗು 1 GHz ಪ್ರೋಸೆಸರ್ ಹೊಂದಿದೆ ಹಾಗು Qwerty ಕೀಪ್ಯಾಡ್ ಹೊಂದಿದೆ.
2) ಸ್ಯಾಮ್ಸಂಗ್ ಗ್ಯಾಲಕ್ಸಿ Y ಪ್ರೋ Duos (9,500 ರೂಪಾಯಿ): ಆಂಡ್ರಾಯ್ಡ್ ತಂತ್ರಾಂಶ ಹೊಂದಿರುವ ಈ ಫೋನ್ ನಲ್ಲಿ, Qwerty ಕೀಪ್ಯಾಡ್, 832 MHz ಪ್ರೋಸೆಸರ್, 384 MB ರಾಮ್, 3.2 ಮೆಗಾಪಿಕ್ಸೆಲ್ ಕ್ಯಾಮರಾ, ವೀಡಿಯೋ ರೆಕಾರ್ಡಿಂಗ್, ಗೇಮ್ಸ್ ಹಾಗು ವೆಬ್ ಬ್ರೌಸಿಂಗ್ ಕೂಡಾ ಹೊಂದಿದೆ.
3) LG ಆಪಟಿಮಸ್ Pro (8,500 ರೂಪಾಯಿ): ಬಾರ್ ಡಿಸೈನ್ ಹೊಂದಿರುವ ಈ ಫೋನ್ qwerty ಕೀಪ್ಯಾಡ್ ಹೊಂದಿದೆ. ಆಂಡ್ರಾಯ್ಡ್ 2.3 ತಂತ್ರಾಂಶ, 3G, ವೈಫೈ, GPS, 3.15 ಮೆಗಾ ಪಿಕ್ಸೆಲ್ ಕ್ಯಾಮರಾ, 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ, ಹಾಗು ಮೈಕ್ರೋ SD ಕಾರ್ಡ್ ಬೆಂಬಲ ಇದೆ.
4) ನೋಕಿಯಾ C2 03 ( 3,900 ರೂಪಾಯಿ) : ಕಡಿಮೆ ಬಜೆಟ್ ನ ಟಚ್ & ಟೈಪ್ ಫೋನುಗಳಲ್ಲೇ ಅಗ್ಗವಾದ ಈ ಫೋನ್ ಒಳ್ಳೆ ಡಿಸೈನ್ ಹೊಂದಿದ್ದು 2.6 ಇಂಚ್ LCD ಡಿಸ್ಪ್ಲೇ, ಆಡಿಯೋ ಪ್ಲೇಯರ್, FM ರೇಡಿಯೋ, 2 ಮೆಗಾ ಪಿಕ್ಸೆಲ್ ಕ್ಯಾಮರಾ ಹಾಗು ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ.
5) ಮೋಟೊರೋಲ ಬ್ರಿಯ Ex 119 (5,000 ರೂಪಾಯಿ) : ಈ ಮಾಡಲ್ ಮೊಬೈಲ್ ಫೋನು ಹಳೆಯದಾಗಿದ್ದರೂ ಈಗಲೂ ಹೆಸರುವಾಸಿಯಾಗಿರುವ ಫೋನ್ ಆಗಿದೆ. ದ್ವಿಸಿಮ್, 2.4 ಇಂಚ್ ರೆಸಿಸ್ಟಿವ್ ಟಚ್ ಸ್ಕ್ರೀನ್, Qwerty ಕೀಪ್ಯಾಡ್, ಲಿನಕ್ಸ್ ತಂತ್ರಾಂಶ, 3 ಮೆಗಾ ಪಿಕ್ಸೆಲ್ ಕ್ಯಾಮರಾ, ವೀಡಿಯೋ ರೆಕಾರ್ಡಿಂಗ್, 50 MB ಆಂತರಿಕ ಮೆಮೊರಿ, 32 GB ವಿಸ್ತರಿಸಬಹುದಾದ ಮೆಮೊರಿ, ಮೈಕ್ರೋ SD ಕಾರ್ಡ್, GPRS, ವೈಫೈ, ಬ್ಲೂಟೂತ್, ಹಾಗು 3.5 mm ಆಡಿಯೋ ಜ್ಯಾಕ್ ಹೊಂದಿದೆ.
ಸ್ಮಾರ್ಟ್ ಫೋನ್ ಕೊಳ್ಳುವ ಐಡಿಯಾ ಇರುವವರು ಈ ಮೇಲಿನ ಯಾವುದಾದರೂ ಟಚ್ & ಟೈಪ್ ಮೊದಲಿಗೆ ಟ್ರೈ ಮಾಡಬಹುದು.


Click it and Unblock the Notifications








