ನೋಕಿಯಾ ಆಶಾ 303 ಸ್ಮಾರ್ಟ್ ಫೀಚರ್ ಫೋನ್

Posted By: Varun
ನೋಕಿಯಾ ಆಶಾ 303 ಸ್ಮಾರ್ಟ್ ಫೀಚರ್ ಫೋನ್

ಫಿನ್ಲ್ಯಾಂಡಿನ ಟೆಲಿಕಾಂ ದೈತ್ಯ ನೋಕಿಯಾ, ಸ್ಮಾರ್ಟ್ ಫೋನ್ ತರಹದ ಫೀಚರ್ ಫೋನನ್ನುಮೊದಲಬಾರಿಗೆ ಹೊರತಂದಿದೆ.

ಆಶಾ 303 ಹೆಸರಿನ ಹೊಸ ಫೋನನ್ನುಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿರುವ ನೋಕಿಯಾ, ಸ್ಮಾರ್ಟ್ ಫೋನಿನಲ್ಲಿರುವಂತೆ ಟಚ್ ಸ್ಕ್ರೀನ್ ಹೊಂದಿದ್ದು, QWERTY ಕೀಪ್ಯಾಡ್ ಕೂಡ ಹೊಂದಿರುವ ವಿಶೇಷ ಫೋನ್ ಆಗಿದೆ.

ಸ್ಮಾರ್ಟ್ ಫೋನುಗಳ ಶ್ರೇಣಿಯಲ್ಲಿ ಇದೇ ಸಾಲಿನಲ್ಲಿ ಬರುವ ಸ್ಯಾಮ್ಸಂಗ್ ಗ್ಯಾಲಕ್ಸಿ ವೈ, ಐಡಿಯಾ ಬ್ಲೇಡ್, ಮೈಕ್ರೋಮ್ಯಾಕ್ಸ್ A73, ಸ್ಪೈಸ್ Mi350n, ಮೋಟೋರೋಲಾ ಫೈರ್, HTC ಎಕ್ಸ್ಪ್ಲೋರರ್, ಹುವಾವೇ ಸೋನಿಕ್ ಮತ್ತು ಎಲ್ಜಿ ಆಪ್ಟಿಮಸ್ ಪ್ರೊ ಮಾಡಲುಗಳಿಗೆ ಸವಾಲೊಡ್ಡುವ ಸಾಧ್ಯತೆ ಇದೆ.

ಈ ಫೋನಿನ ಇತರ ಸ್ಪೆಸಿಫಿಕೇಶನ್ ಈ ರೀತಿ ಇವೆ:

  • S40 ಪ್ರೋಸೆಸರ್, ಟಚ್ ಮತ್ತು ಟೈಪ್ ಸ್ಕ್ರೀನ್.

  • 2.6 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್, 240 X 320 ಪಿಕ್ಸೆಲ್ ರೆಸಲ್ಯೂಶನ್.

  • 1 GHz ಪ್ರೊಸೆಸರ್.

  • ಆಂತರಿಕ ಮೆಮೊರಿ 100 MB, 32 ಜಿಬಿ ವಿಸ್ತರಿಸಬಹುದಾದ ಮೆಮೊರಿ.

  • ಜೂಮ್ ಮತ್ತು ವಿಡಿಯೋ 3.2 ಮೆಗಾಪಿಕ್ಸೆಲ್ ಡಿಜಿಟಲ್ ಕ್ಯಾಮೆರಾ.

  • ವಿಡಿಯೋ ಪ್ಲೇಯರ್, ಮ್ಯೂಸಿಕ್ ಪ್ಲೇಯರ್ ಮತ್ತು ಎಫ್ಎಂ ರೇಡಿಯೋ.

  • GPRS, ಎಡ್ಜ್, 3G, ಬ್ಲೂಟೂತ್, ವೈಫೈ ಮತ್ತು USB.

  • ನೋಕಿಯಾ ಸಂಗೀತ ಅನಿಯಮಿತ ಸೇವೆ ಜೊತೆಗೆ ಜೆಂಗಾ ಟಿವಿ, ವಾಟ್ಸ್ಅಪ್ App ,ಫೇಸ್ಬುಕ್ ಚಾಟಿಂಗ್,ನೋಕಿಯಾ ಮ್ಯಾಪ್ಸ್,ಆಂಗ್ರಿ ಬರ್ಡ್ಸ್ ಲೈಟ್.

  • ಗೂಗಲ್ ಪ್ಲೇ ಅಪ್ಲಿಕೇಶನ್ ಸ್ಟೋರ್ನಿಂದ ಸಾವಿರಾರು Apps ಡೌನ್ಲೋಡ್ ಸಾಮರ್ಥ್ಯ.
ಪ್ರಸ್ತುತ ಈ ಫೋನ್ ರೂ 8,900 ಗೆ ಲಭ್ಯವಿದ್ದು ಕೆಂಪು ಮತ್ತು ಗ್ರ್ಯಾಫೈಟ್ ಬಣ್ಣಗಳಲ್ಲಿ ಬರಲಿದೆ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot