ನೋಕಿಯಾದ ಮತ್ತೇರಡು ಪೋನ್‌ಗಳು ಮಾರುಕಟ್ಟೆಗೆ..!
ರಷ್ಯಾ ಮಾರುಕಟ್ಟೆಗೆ ಪರಿಚಯಿಸಲು ಎರಡು ಮಾದರಿಯ ಪೋನುಗಳನ್ನು ಸಿದ್ಧಪಡಿಸಿರುವ ನೋಕಿಯಾ TA-1008 ಮತ್ತು TA-1030 ಎಂಬ ಪೋನುಗಳು ಈಗಾಗಲೇ ಮಾರಾಟಕ್ಕೆ ಕ್ಲಿಯರೆನ್ಸ್ ಪಡೆದುಕೊಂಡಿದೆ.
ಮತ್ತೆ ಮಾರುಕಟ್ಟೆಗೆ ಬರಲು ಸಿದ್ಧಗೊಂಡಿರುವ ನೋಕಿಯಾ ಈಗಾಗಲೇ ಚೀನಾದಲ್ಲಿ ಮೊದಲ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದೆ. ನೋಕಿಯಾ 6 ಅಧಿಕೃತ ಮೊದಲ ಸ್ಮಾರ್ಟ್‌ಪೋನಾಗಿದ್ದು, P1 ಅನ್ನುವ ಮತ್ತೊಂದು ಫೋನನ್ನು ಮಾರುಕಟ್ಟೆಗೆ ಪರಿಚಯಿಸಲು ತುದಿಗಾಲಿನಿಂದಿದೆ. ಇದೊರೊಂದಿಗೆ ಮತ್ತೇರಡು ಪೋನಗಳು ಬರಲಿವೆ.

ಓದಿರಿ: ಟೋಕಿಯೋ ಒಲಂಪಿಕ್ ಆಯೋಜಕರಿಗೆ ಬೇಕಂತೆ ನಿಮ್ಮ ಹಳೇಯ ಸ್ಮಾರ್ಟ್‌ಪೋನು, ಕಂಪ್ಯೂಟರ್..!
ರಷ್ಯಾ ಮಾರುಕಟ್ಟೆಗೆ ಪರಿಚಯಿಸಲು ಎರಡು ಮಾದರಿಯ ಪೋನುಗಳನ್ನು ಸಿದ್ಧಪಡಿಸಿರುವ ನೋಕಿಯಾ TA-1008 ಮತ್ತು TA-1030 ಎಂಬ ಪೋನುಗಳು ಈಗಾಗಲೇ ರಷ್ಯಾದಲ್ಲಿ ಮಾರಾಟಕ್ಕೆ ಕ್ಲಿಯರೆನ್ಸ್ ಪಡೆದುಕೊಂಡಿದೆ ಎನ್ನಲಾಗಿದೆ. MWC ಶೋಗಿಂತಲೂ ಮುಂಚೆಯೇ ಈ ಪೋನುಗಳು ಸದ್ದು ಮಾಡುತ್ತಿವೆ.
ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ನೋಕಿಯಾ 6 ಸಖತ್ ಸದ್ದು ಮಾಡಿದ್ದು, ಸೇಲ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಹ್ಯಾಂಡ್‌ಸೆಟ್‌ಗಳು ಮಾರಾಟವಾಗಿ ನೂತನ ದಾಖಲೆಯನ್ನು ನಿರ್ಮಿಸಿದ್ದು, ಈಗ ಈ ಎರಡು ಪೋನುಗಳು ಸಹ ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಓದಿರಿ: ವಾಟ್ಸಪ್‌ನಲ್ಲಿ ಕಳುಹಿಸಿದ್ದ ಮೇಸೆಜ್ ಡಿಲೀಟ್-ಎಡಿಟ್ ಮಾಡುವುದು ಹೇಗೆ..?
ಈಗಾಗಲೇ ನೋಕಿಯಾ ಫಿಚರ್ ಪೋನುಗಳು ಸೇರಿದಂತೆ ಎಂಟ್ರಿ ಲೆವಲ್ ಸ್ಮಾರ್ಟ್ ಪೋನು, ಬಜೆಟ್ ಸ್ಮಾರ್ಟ್‌ಪೋನು ಮತ್ತು ಪ್ರೀಮಿಯಮ್ ಸ್ಮಾರ್ಟ್‌ಪೋನುಗಳು ಸೇರಿದಂತೆ ಒಟ್ಟು 7ಕ್ಕೂ ಹೆಚ್ಚು ಪೋನುಗಳು ಈ ವರ್ಷದಲ್ಲಿ ಮಾರುಕಟ್ಟೆಗೆ ಬಿಡಲಿದೆ.


Click it and Unblock the Notifications








