Home
ಮೊಬೈಲ್

ಇಂದು Vivo T3 Ultra 5G ಬಿಡುಗಡೆ: ಟಾಪ್ 5 ಫೀಚರ್ಸ್‌ ಬಹಿರಂಗ, 50MP ಸೆಲ್ಫಿ ಕ್ಯಾಮೆರಾ ಫಿಕ್ಸ್‌!

Vivo T3 Ultra 5G Launch: ವಿವೋ (Vivo) ಇಂದು ತನ್ನ ಭಾರತೀಯ ಗ್ರಾಹಕರಿಗಾಗಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಹೌದು, ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ವಿವೋ ಭಾರತದಲ್ಲಿ ವಿವೋ T3 ಅಲ್ಟ್ರಾ 5G (Vivo T3 Ultra 5G) ಅನ್ನು ಬಿಡುಗಡೆ ಮಾಡಲಿದೆ. ಈ ಫೋನಿನ ಲ್ಯಾಂಡಿಂಗ್ ಪುಟವು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಮೊಬೈಲ್ ಬಿಡುಗಡೆಯಾಗಲಿದೆ. ಬಿಡುಗಡೆಯ ನಂತರ ಮೊಬೈಲ್‌ನ ಬೆಲೆ ಮತ್ತು ಮಾರಾಟದ ದಿನಾಂಕದ ವಿವರಗಳು ಲಭ್ಯವಾಗಲಿದೆ.

ವಿವೋ T3 ಅಲ್ಟ್ರಾ 5G ಬಿಡುಗಡೆಯ ಮೊದಲೇ, ಕಂಪನಿಯು ಹೊಸ ಫೋನಿವ ಪ್ರಮುಖ ವೈಶಿಷ್ಟ್ಯಗಳನ್ನು ಖಚಿತಪಡಿಸಿದೆ. ಈ ಹೊಸ ವಿವೋ ಫೋನ್, 6.78 ಇಂಚಿನ 3D ಬಾಗಿದ 1.5K AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಮೀಡಿಯಾ ಟೆಕ್‌ ಡೈಮೆನ್ಸಿಟಿ 9200 ಪ್ಲಸ್ SoC ಚಿಪ್‌ಸೆಟ್‌, 50 ಮೆಗಾಪಿಕ್ಸೆಲ್ ಸೋನಿ IMX921 ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5500mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

50MP ಸೆಲ್ಫಿ ಕ್ಯಾಮೆರಾದೊಂದಿಗೆ Vivo T3 Ultra 5G ಇಂದು ಬಿಡುಗಡೆ: ಬೆಲೆ ಎಷ್ಟು?

ವಿವೋ T3 ಅಲ್ಟ್ರಾ 5G ಫೋನಿನ ನಿರೀಕ್ಷಿತ ಬೆಲೆ ಎಷ್ಟು?

8GB + 128GB ಸ್ಟೋರೇಜ್ ಬೆಲೆ = 30,999 ರೂ.
8GB + 256GB ಸ್ಟೋರೇಜ್ ಬೆಲೆ = 32,999 ರೂ.
12GB + 256GB ಸ್ಟೋರೇಜ್ ಬೆಲೆ = 34,999 ರೂ.

ಮಾಹಿತಿಯ ಪ್ರಕಾರ, ಕಂಪನಿಯು ವಿವೋ T3 ಅಲ್ಟ್ರಾ 5G ಫೋನ್‌ ಫ್ರಾಸ್ಟ್ ಗ್ರೀನ್, ಲೂನಾ ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಇದು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. 8GB + 128GB ರೂಪಾಂತರದ ಬೆಲೆ 30,999 ರೂ. ಇರಲಿದೆ. 8GB + 256GB ಬೆಲೆ 32,999 ರೂ. ಹಾಗೂ 12GB + 256GB ಬೆಲೆ 34,999 ರೂ.ಗೆ ಮಾರಾಟವಾಗುವ ಸಾಧ್ಯತೆಯಿದೆ.

ವಿವೋ T3 ಅಲ್ಟ್ರಾ 5G ಫೋನಿನ ಫೀಚರ್ಸ್

ಡಿಸ್ಲ್ಪೇ: ಕಂಪನಿಯು ವಿವೋ T3 ಅಲ್ಟ್ರಾ 5G ಫೋನನ್ನು 6.78 ಇಂಚಿನ 3D ಬಾಗಿದ 1.5K AMOLED ಡಿಸ್ಪ್ಲೇಯೊಂದಿಗೆ ಪರಿಚಯಿಸಲಿದೆ. ಇದು 2800 x 1260 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 4500 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತಿದೆ. P3 ಸಿನಿಮಾ ಗ್ರೇಡ್ ಕಲರ್ ಗ್ಯಾಮಟ್ ಮತ್ತು HDR 10+ ನಂತಹ ವೈಶಿಷ್ಟ್ಯಗಳೂ ಇರಲಿದೆ.

ಪ್ರೊಸೆಸರ್: ಮುಂಬರುವ ವಿವೋ T3 ಅಲ್ಟ್ರಾ 5G ಮೊಬೈಲ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 9200 ಪ್ಲಸ್ SoC ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗಲಿದೆ. ಫೋನನ್ನು 4nm ಚಿಪ್‌ಸೆಟ್‌ನೊಂದಿಗೆ ತರಲಾಗುತ್ತಿದೆ. ಜೊತೆಗೆ, ಫೋನ್ ಸುಧಾರಿತ APU ಸಮ್ಮಿಳನ ತಂತ್ರಜ್ಞಾನವನ್ನು ಹೊಂದಿದೆ.

ಸ್ಟೋರೇಜ್: ಈ ಫೋನ್ 8GB + 256GB ಮತ್ತು 12GB + 256GB ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮೊಬೈಲ್ 12GB ವರೆಗಿನ ವರ್ಚುವಲ್ RAM ಅನ್ನು ಸಹ ಹೊಂದಿರಲಿದೆ.

ಈ ಸುದ್ದಿ ಓದಿದ್ದೀರಾ?: ಸದ್ದಿಲ್ಲದೆ Vivo Y37 Pro ಫೋನ್ ಬಿಡುಗಡೆ: 6,000mAh ಬ್ಯಾಟರಿ.. 50MP ಕ್ಯಾಮೆರಾ.. ಕಡಿಮೆ ಬೆಲೆ!

ಕ್ಯಾಮೆರಾ: ವಿವೋ ಫೋನ್ 50 ಮೆಗಾಪಿಕ್ಸೆಲ್ ಸೋನಿ IMX921 OIS ಮುಖ್ಯ ಕ್ಯಾಮೆರಾ ಹೊಂದಿರಲಿದೆ. 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ. ಫೋನಿನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು.

ಬ್ಯಾಟರಿ: ಹೊಸ ವಿವೋ ಮೊಬೈಲ್‌ 80W ವೇಗದ ಚಾರ್ಜಿಂಗ್‌ನೊಂದಿಗೆ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು ದೀರ್ಘ ಬ್ಯಾಕಪ್ ಮತ್ತು ತ್ವರಿತ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.

ಇತರೆ ವೈಶಿಷ್ಟ್ಯಗಳು: ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ವಿವೋ T3 ಅಲ್ಟ್ರಾ 5G ಫೋನ್ IP68 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ ಡ್ಯುಯಲ್ ಸ್ಪೀಕರ್‌, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಒಳಗೊಂಡಿರಲಿದೆ.

Best Mobiles in India

English summary
Vivo T3 Ultra 5G Launch in India Today at 12PM: Check Expected Prices and Specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+