5,000mAh ಬ್ಯಾಟರಿ ಬಲದ 'ವಿವೋ Y17' ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಲಾಂಚ್.!

|

ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ತಂತ್ರಜ್ಞಾನವನ್ನು ಪರಿಚಯಿಸುತ್ತ ಸಾಗಿ ಬಂದಿರುವ ವಿವೋ ಕಂಪನಿ ಇತ್ತೀಚಿಗಷ್ಟೆ 'ವಿವೋ ವಿ15 ಪ್ರೋ' ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸಖತ್ ಮಿಂಚುತ್ತಿದೆ. ಚೀನಾ ಮೂಲದ ವಿವೋ ಕಂಪನಿ ಇದೀಗ ಮತ್ತೆ ಹೊಸದೊಂದು ಸ್ಮಾರ್ಟ್‌ಫೋನ್‌ ರಿಲೀಸ್‌ಗೆ ಸಜ್ಜಾಗುತ್ತಿದೆ. ಮುಂಬರುವ ಹೊಸ ಸ್ಮಾರ್ಟ್‌ಫೋನ್‌ ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಿದೆ.

5,000mAh ಬ್ಯಾಟರಿ ಬಲದ 'ವಿವೋ Y17' ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಲಾಂಚ್.!

ಹೌದು, ವಿವೋ ಸಂಸ್ಥೆಯು 'ವಿವೋ Y17' ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಈ ಸ್ಮಾರ್ಟ್‌ಫೋನ್‌ ಮೀಡ್‌ರೇಂಜ್‌ ಮಾದರಿಯಲ್ಲಿರಲಿದೆ ಎನ್ನುತ್ತಿವೆ ಲೀಕ್ ಮಾಹಿತಿಗಳು. ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ಜೊತೆಗೆ ಬಾಹ್ಯವಾಗಿ ಬ್ಲೂ ಗ್ರೇಡಿಯಂಟ್ ಕಲರ್‌ನಿಂದ ಗಮನಸೆಳೆಯಲಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ರಚನೆ ಸಹ ಇರಲಿದೆ.

5,000mAh ಬ್ಯಾಟರಿ ಬಲದ 'ವಿವೋ Y17' ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಲಾಂಚ್.!

ವಾಟರ್‌ಡ್ರಾಪ್‌ ಸ್ಟೈಲ್‌ ರಚನೆಯೊಂದಿಗೆ, ಸುತ್ತಲೂ ಸ್ಲಿಮ್‌ ಬೆಜಲ್ ರಚನೆಯನ್ನು ಹೊಂದಿರಲಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ ಎನ್ನುವುದು ಈ ಸ್ಮಾರ್ಟ್‌ಫೋನಿನ ಇನ್ನೊಂದು ಪ್ರಮುಖ ಹೈಲೈಟ್‌ ಎನ್ನಬಹುದಾಗಿದೆ. ಹಾಗಾದರೇ ಮುಂಬರುವ ಹೊಸ 'ವಿವೋ Y17' ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್

ಡಿಸೈನ್

ವಿವೋ Y17 ಸ್ಮಾರ್ಟ್‌ಫೋನ್‌ ಬ್ಲೂ ಗ್ರೇಡಿಯಂಟ್ ಬಣ್ಣದ ರಚನೆಯನ್ನು ಹೊಂದಿರಲಿದ್ದು, ಬಾಹ್ಯವಾಗಿ ಆಕರ್ಷಕವಾಗಿ ಕಾಣಿಸಲಿದೆ. ಫಿಂಗರ್‌ಪ್ರಿಂಟ್ ಸೆನ್ಸಾರ್‌ ಒಳಗೊಂಡಿದ್ದು, ಫೋನ್‌ ಸುತ್ತಲೂ ತೆಳುವಾದ ಅಂಚನ್ನು ಹೊಂದಿದೆ. ಫೋನ್ ಹಿಂಬದಿ ಮೂರು ಕ್ಯಾಮೆರಾ ಮತ್ತು ಫ್ಲ್ಯಾಶ್‌ ಅನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ವಿವೋ Y17 ಸ್ಮಾರ್ಟ್‌ಫೋನ್‌ 6.35 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್‌ ರಕ್ಷಣೆ ಪಡೆದಿದೆ ಎನ್ನಲಾಗುತ್ತಿದೆ. ಡಿಸ್‌ಪ್ಲೇ ಗಾತ್ರವು ಕಂಫರ್ಟ್‌ ಆಗಿದ್ದು, ವಿಡಿಯೊ ವೀಕ್ಷಣೆಗೆ ಉತ್ತಮ ಎನಿಸಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಮೀಡಿಯಾ ಟೆಕ್‌ ಹಿಲಿಯೊ P35 SoC ಸಾಮರ್ಥ್ಯದ ಪ್ರೊಸೆಸರ್‌ ಈ ಸ್ಮಾರ್ಟ್‌ಫೋನಿನಲ್ಲಿ ಇರಲಿದ್ದು, ಸ್ಮಾರ್ಟ್‌ಫೋನಿನ ವೇಗದ ಕಾರ್ಯವೈಖರಿಗೆ ಬೆಂಬಲಿಸಲಿದೆ. 4 GB RAM ಜೊತೆಗೆ 64 GB ಮತ್ತು 128 GB ಆಂತಗರಿಕ ಸಂಗ್ರಹದ ಎರಡು ಆಯ್ಕೆಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ಮೂರು ಕ್ಯಾಮೆರಾ ನೀಡಲಾಗಿದ್ದು, ಅವುಗಳು ಕ್ರಮವಾಗಿ 13ಎಂಪಿ, 8ಎಂಪಿ ಮತ್ತು 2ಎಂಪಿ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಲೆನ್ಸ್‌ಗಳ ಸಹ ಇರಲಿವೆ. ಸೆಲ್ಫಿ ಪ್ರಿಯರನ್ನು ಸೆಳೆಯಲು, 16/32ಎಂಪಿ ಸೆಲ್ಫಿ ಕ್ಯಾಮೆರಾ ನೀಡಲಾಗಿರಲಿದೆ. ಕ್ಯಾಮೆರಾಗಳು AI ತಂತ್ರಜ್ಞಾನವನ್ನು ಹೊಂದಿದ್ದು, ಫೋಟೊಗಳು ಉತ್ತಮವಾಗಿ ಮೂಡಿಬರಲು ಬೆಂಬಲಿಸುತ್ತದೆ.

ಬ್ಯಾಟರಿ

ಬ್ಯಾಟರಿ

5,000mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿಯನ್ನು ಒದಗಿಸುವ ಸಾಧ್ಯತೆಗಳಿವೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್‌ ಸೌಲಭ್ಯವನ್ನು ಸಹ ನೀಡಲಾಗುವುದು ಎನ್ನುತ್ತಿವೆ ಲೀಕ್ ಮಾಹಿತಿಗಳು. ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ಇರಲಿದ್ದು, USB-C ಫೋರ್ಟ್‌ ಆಯ್ಕೆಯನ್ನು ಸಹ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ Y17 ಸ್ಮಾರ್ಟ್‌ಫೋನ್‌ ಶೀಘ್ರದಲ್ಲಿಯೇ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಹಾಗೇ ಚೀನಾದಲ್ಲಿಯೂ ಲಾಂಚ್‌ ಆಗಲಿದೆ ಎನ್ನಲಾಗುತ್ತಿದೆ. ಇದರ ಬೆಲೆಯು 16,990ರೂ.ಗಳು ಇರಲಿವೆ ಎಂದು ಊಹಿಸಲಾಗುತ್ತಿದೆ.

Best Mobiles in India

English summary
Vivo Y17 debuting soon; Leaked poster reveals triple rear cameras and design.to know more visit to kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X