ಕೇವಲ 17 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಫುಲ್!..ಶಿಯೋಮಿಯ ಅಚ್ಚರಿಯ ನಡೆ!

|

ಪ್ರಸ್ತುತ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯ ನೀಡಲಾಗುತ್ತಿದ್ದು, ಅದರೊಂದಿಗೆ ಸ್ಮಾರ್ಟ್‌ಫೋನ್‌ಗಳು ಬೇಗನೆ ಚಾರ್ಜ್ ಆಗಲು ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಆದರೆ ಇದೀಗ ಶಿಯೋಮಿ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತೀ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಲು ಉತ್ಸುಕವಾಗಿದೆ. ಶಿಯೋಮಿಯ ಈ ನಡೆ ಇತರೆ ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಶಾಕ್ ನೀಡಿದೆ.

ಕೇವಲ 17 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಫುಲ್!..ಶಿಯೋಮಿಯ ಅಚ್ಚರಿಯ ನಡೆ!

ಹೌದು, ಶಿಯೋಮಿ ಹೊಸ 100W ಸೂಪರ್‌ ಚಾರ್ಜ್ ಟರ್ಬೋ ಟೆಕ್ನಾಲಜಿ ಹೆಸರಿನ ವೇಗದ ಮೊಬೈಲ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಲಿದ್ದು, 4,000 mAh ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬ್ಯಾಟರಿಯನ್ನು ಕೇವಲ 17 ನಿಮಿಷದಲ್ಲಿ ಸಂಪೂರ್ಣ ಚಾರ್ಜ್‌ (0-100% ) ಮಾಡುವ ಶಕ್ತಿಯನ್ನು ಈ ತಂತ್ರಜ್ಞಾನವು ಒಳಗೊಂಡಿದೆ. ಈ ಮೂಲಕ ಒಪ್ಪೊದ 'ಸೂಪರ್‌VOOC' ತಂತ್ರಜ್ಞಾನಕ್ಕೆ ಸೆಡ್ಡು ಹೊಡೆಯಲಿದೆ. ಹಾಗಾದರೇ ಈ ತಂತ್ರಜ್ಞಾನ ಕುರಿತು ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

100W ಪವರ್

100W ಪವರ್

4,000 mAh ಸಾಮರ್ಥ್ಯದ ಬ್ಯಾಟರಿ ಕೇಲವ 17 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುವ ಡೆಮೊ ವಿಡಿಯೊ ಒಂದನ್ನು ಶಿಯೋಮಿಯ ಕಂಪನಿಯ ಉಪ ಉತ್ಪನ್ನಗಳು ಜನರಲ್ ಮ್ಯಾನೇಜರ್ ಮಿ. ಲಿ ವಿಬಿಂಗ್ ಅವರು ತಮ್ಮ Weibo ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 100W ಶಕ್ತಿಯ ಈ ಚಾರ್ಜರ್‌ 20V/5A ಸಾಮರ್ಥ್ಯದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಬಲ ತುಂಬಲಿದೆ ಎಂದು ಹೇಳಲಾಗಿದೆ.

ಪೈಪೋಟಿ

ಪೈಪೋಟಿ

ಈಗಾಗಲೇ ಒನ್‌ಪ್ಲಸ್‌ ಕಂಪನಿ ಡ್ಯಾಶ್ ಚಾರ್ಜಂಗ್ ತಂತ್ರಜ್ಞಾನ, ಮೊಟೊರೊಲಾ ಸಂಸ್ಥೆ ಟರ್ಬೊಚಾರ್ಜಿಂಗ್ ತಂತ್ರಜ್ಞಾನವನ್ನು ಮತ್ತು ಒಪ್ಪೊ ಕಂಪನಿ ಸೂಪರ್‌ VOOC ಚಾರ್ಜಿಂಗ್ ತಂತ್ರಜ್ಞಾನವನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಒದಗಿಸಿವೆ. ಹಾಗೇ ಹುವಾಯಿ 55W ಸೂಪರ್‌ ಚಾರ್ಜ್ ಮೇಟ್‌ ಎಕ್ಸ್ ಸ್ಮಾರ್ಟ್‌ಫೋನ್‌ಗೆ 35ನಿಮಿಷದಲ್ಲಿ ಬ್ಯಾಟರಿ ಪೂರ್ಣ ಮಾಡುವ ಶಕ್ತಿ ಹೊಂದಿದ್ದು, ಇವುಗಳಿಗೆ ಶಿಯೋಮಿ ಪೈಪೋಟಿ ನೀಡಲಿದೆ.

ಯಾವಾಗ ಲಭ್ಯ

ಯಾವಾಗ ಲಭ್ಯ

ಶಿಯೋಮಿ '100W ಸೂಪರ್‌ ಚಾರ್ಜ್ ಟರ್ಬೋ' ತಂತ್ರಜ್ಞಾನ ಮುಂಬರಲಿರುವ ಶಿಯೋಮಿ ರೆಡ್ಮಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಚಾರ್ಜರ್‌ ಅನ್ನು ಒದಗಿಸಬಹುದು ಎಂದು ಹೇಳಲಾಗುತ್ತಿದ್ದು, ಆದರೆ ಕಂಪನಿಯು ಇನ್ನೂ ಅಧಿಕೃತವಾಗಿ ಮಾಹಿತಿ ಹೊರಹಾಕಿಲ್ಲ. ಈ ಹೊಸ ಫಾಸ್ಟ್ ಟೆಕ್ನಾಲಜಿಯಲ್ಲಿ ಚಾರ್ಜರ್‌ ಬಿಸಿ ಆಗಬಹುದೇ ಮತ್ತು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕು.

Best Mobiles in India

English summary
Xiaomi 100W Super Charge Can Fully Charge A 4000 mAh Smartphone in 17 Minutes.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X