ಜಿಯೋ ಫೋನ್ ಬುಕ್ ಮಾಡುವುದು ಹೇಗೆ..? ಗೊಂದಲ ಬೇಡ ಇಲ್ಲಿದೆ ಸರಳ ಉಪಾಯ..!!!
ಈ ಸ್ಮಾರ್ಟ್‌ಫೋನ್ ನಿರೀಕ್ಷೇಗೂ ಮೀರಿದ ಆಯ್ಕೆಗಳನ್ನು ಹೊಂದಿದ್ದು, ಈಗಾಗಲೇ ಗ್ರಾಹಕರು ಈ ಫೋನ್ ಅನ್ನು ಕೊಂಡುಕೊಳ್ಳಬೇಕು ಎಂದು ಪ್ಲಾನ್ ಹಾಕುತ್ತಿದ್ದಾರೆ.
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಕಂಪನಿ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರೀಕ್ಷೆಯಂತೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಫೋನ್ ಬಿಡುಗಡೆ ಮಾಡಿದ್ದಾರೆ. ಈ ಸ್ಮಾರ್ಟ್‌ಫೋನ್ ನಿರೀಕ್ಷೇಗೂ ಮೀರಿದ ಆಯ್ಕೆಗಳನ್ನು ಹೊಂದಿದ್ದು, ಈಗಾಗಲೇ ಗ್ರಾಹಕರು ಈ ಫೋನ್ ಅನ್ನು ಕೊಂಡುಕೊಳ್ಳಬೇಕು ಎಂದು ಪ್ಲಾನ್ ಹಾಕುತ್ತಿದ್ದಾರೆ.

ಓದಿರಿ: ಶಾಕಿಂಗ್ ನ್ಯೂಸ್: ಜಿಯೋ ಬಳಕೆದಾರಿಗೆ 'ಜಿಯೋ 4G VoLTE ಫೋನ್ ಸಂಫೂರ್ಣ ಉಚಿತ'

ಈ ಹಿನ್ನಲೆಯಲ್ಲಿ ನಮ್ಮ ಓದುಗರಿಗೆ ಈ ಸ್ಮಾರ್ಟ್‌ಫೋನ್ ಅನ್ನು ಕೊಂಡುಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುವ ಸಲುವಾಗಿ ಈ ಲೇಖನವನ್ನು ಮಂಡಿಸಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಭಾರತದ ಫೋನ್ ಆಗಿರಲಿದೆ ಎಂದು ಅಂಬಾನಿ ಹೇಳಿದ್ದು, ಇದು ಭಾರತೀಯರ ಪಾಲಿಗೆ ಎಲ್ಲವೂ ಆಗಲಿದೆ. ಹೊರ ಪ್ರಪಂಚಕ್ಕೆ ತೆರೆದುಕೊಳ್ಳಲು ಕೀಲಿ ಕೈ ಆಗಲಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ.
ಓದಿರಿ: 'ಉಚಿತ ಜಿಯೋ ಫೋನ್' ಒಂದೇ ಕಲ್ಲಿಗೆ ಎರಡು ಹಕ್ಕಿ: ಟೆಲಿಕಾಂ-ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಬಿತ್ತು ಬರೆ..!!

ಆಗಸ್ಟ್ 24 ರಿಂದ ಪ್ರೀ ಆರ್ಡರ್ ಶುರು:
ಇಂದು ಜಿಯೋ ಫೋನ್ ಲಾಂಚ್ ಆಗಿದ್ದು, ಆಗಸ್ಟ್ 24 ರಿಂದ ಪ್ರೀ ಆರ್ಡರ್ ಶುರುವಾಗಲಿದೆ. ಆದರೆ ಈ ಸ್ಮಾರ್ಟ್‌ಫೋನ್ ಸೆಪೆಂಬರ್ ನಿಂದ ಗ್ರಾಹಕ ಕೈಗೆ ಈ ಫೋನ್ ಸಿಗಲಿದೆ ಎನ್ನಲಾಗಿದೆ. ಪ್ರತಿ ತಿಂಗಳು 5 ಲಕ್ಷ ಫೋನ್ ಗಳನ್ನು ಜಿಯೋ ಮಾರಾಟ ಮಾಡಲಿದೆ.

ಜಿಯೋ ಫೋನ್ ಕೊಳ್ಳುವುದು ಹೇಗೆ..?
ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ ಜಿಯೋಫೋನ್ ಅನ್ನು ಕೊಳ್ಳಲು ಸಲುಭ ಮಾರ್ಗಳಿದೆನ ಎನ್ನಲಾಗಿದೆ. ನೀವು ಎರಡು ಮಾದರಿಯಲ್ಲಿ ಈ ಫೋನ್ ಬುಕ್ ಮಾಡಬಹುದಾಗಿದೆ ಒಂದು ಜಿಯೋ ಆಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಮತ್ತು ಹತ್ತಿರ ರೀಟೆಲ್ ಶಾಪ್ ನಲ್ಲಿಯೂ ಜಿಯೋ ಪೋನ್ ಬುಕ್ ಮಾಡಬಹುದಾಗಿದೆ.

ಬೆಲೆ ಹೇಗೆ..?
ಜಿಯೋ ಫೋನ್ ಉಚಿತ ಎಂದ ಮೇಲೆ ಬೆಲೆಯ ಪ್ರಶ್ನೆ ಏಕೆ ಎನ್ನಬೇಡಿ. ಜಿಯೋ ತನ್ನ ಪೋನಿ ಕ್ವಾಲಿಟಿಯ ಮೇಲೆ ನಂಬಿಕೆ ಇರಿಸಿಕೊಂಡಿದ್ದು, ಇದಕ್ಕಾಗಿ ರೂ.1500 ಡೆಪಾಸಿಟ್ ಇಡುವಂತೆ ಕೋರಿದೆ. ಮೂರು ವರ್ಷದ ನಂತರ ನಿಮಗೆ ಆ ಫೋನ್ ಇಷ್ಟವಾಗದೆ ಹೊದಲ್ಲಿ ನೀವು ನಿಮ್ಮ ಫೋನ್ ಹಿಂದಿರುಗಿಸಿ ನಿಮ್ಮ ಹಣವನ್ನು ವಾಪಾಸ್ಸು ಪಡೆಯಬಹುದಾಗಿದೆ.

ಉಚಿತ ಕರೆ- ಉಚಿತ ಡೇಟಾ:
ಜಿಯೋ ಪೋನ್ ಬಳಕೆದಾರಿಗೆ ವಾಯ್ಸ್ ಕಾಲ್ ಸಂಫೂರ್ಣ ಉಚಿತ ನೀಡಲು ಮುಖೇಶ್ ಅಂಬಾನಿ ಮುಂದಾಗಿದ್ದಾರೆ. ಫೋನ್ ಇರುವವರೆ ಉಚಿತ ಕರೆ ಮಾಡಬಹುದಾಗಿದೆ. ಇದರೊಂದಿಗೆ ಸಂಫೂರ್ಣ ಉಚಿತ ಡೇಟಾವನ್ನು ನೀಡುತ್ತಿದ್ದು, ಇದಕ್ಕಾಗಿ ತಿಂಗಳಿಗೆ ರೂ.153 ಪಡೆದುಕೊಳ್ಳಲಿದೆ.

ಜಿಯೋ ಫೋನ್ ನಲ್ಲಿ ಜಿಯೋ ಆಪ್ :
ಈ ಜಿಯೋಫೋನ್ ಕೊಂಡವರಿಗೆ ಜಿಯೋ ಆಪ್ ಗಳನ್ನು ಸಂಫೂರ್ಣ ಉಚಿತವಾಗಿ ಜಿಯೋ ಆಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಗಳು ಪ್ರೀ ಲೋಡ್ ಆಗಿ ಬರಲಿದೆ. ಇದು ಉಚಿತವಾಗಿ ದೊರೆಯಲಿದೆ.


Click it and Unblock the Notifications








