Subscribe to Gizbot

ಜಿಯೋ ಬಳಕೆದಾರರಿಗೆ 'ಜಿಯೋ 4G VoLTE ಫೋನ್ ಸಂಪೂರ್ಣ ಉಚಿತ'

Written By:

ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ ಗ್ರಾಹಕರಿಗೆ ಶಾಕಿಂಗ್ ಗಿಫ್ಟ್ ನೀಡಿದ್ದಾರೆ. ನೀವು ನಂಬಲೇ ಬೇಕು ಜಿಯೋ ಫೋನ್ ಅನ್ನ ಸಂಪೂರ್ಣ ಉಚಿತವಾಗಿ ನೀಡುತ್ತಿದ್ದಾರೆ.

ಜಿಯೋ ಬಳಕೆದಾರರಿಗೆ 'ಜಿಯೋ 4G VoLTE ಫೋನ್ ಸಂಪೂರ್ಣ ಉಚಿತ'

ರಿಲಯನ್ಸ್ ಮಾಲೀಕತ್ವದ ಜಿಯೋ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಮಾಡಿದಂತಹ ಕ್ರಾಂತಿಕಾರಕ ಬದಲಾವಣೆಯನ್ನು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿಯೂ ಮಾಡಲು ಮುಂದಾಗಿದೆ ಇದಕ್ಕಾಗಿ ಜಿಯೋ ಫೋನ್ ಲಾಂಚ್ ಮಾಡಿದ್ದು, ಇದಕ್ಕೆ ಭಾರತದ ಸ್ಮಾರ್ಟ್‌ಫೋನ್ ಎಂದು ಹೆಸರಿಟ್ಟಿದೆ.

ಇದು ನೋಡಲು ಫೀಚರ್ ಫೋನ್ ಆದರೂ ಸಹ ಇದೊಂದು ಸ್ಮಾರ್ಟ್‌ಫೋನ್ ಎನ್ನಬಹುದಾಗಿದೆ. ಇದಕ್ಕೆ ಕಾರಣ ಇದರಲ್ಲಿರುವ ಆಯ್ಕೆಗಳು. ಸ್ಮಾರ್ಟ್‌ಫೋನ್ ನಾಚಿಸುವ ಮಾದರಿಯಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಫೋನಿನ ಬೆಲೆ:

ಜಿಯೋ ಫೋನಿನ ಬೆಲೆ:

ಬೆಲೆ ರೂ. ೦ ಸಂಪೂರ್ಣ ಸೋನ್ನೆ, ಜಿಯೋ ಬಳಕೆದಾರರಿಗೆ ಫ್ರೀ. ಆದರೆ ಇದಕ್ಕಾಗಿ ರೂ.1,500 ಡೆಪಾಸಿಟ್ ಇಡಬೇಕಾಗಿದೆ. ಇದನ್ನು ಮೂರು ವರ್ಷದ ನಂತರ ನೀವು ಇದನ್ನು ವಾಪಸ್ ಪಡೆಯಬಹುದಾಗಿದೆ. ಇದು ಜಿಯೋ ಗುಣಮಟ್ಟಕ್ಕೆ ನೀಡುತ್ತಿರುವ ಖಾತರಿಯಾಗಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಆಗಸ್ಟ್ 15ರಿಂದ ಉಚಿತ ಕರೆ-ಡೇಟಾ:

ಆಗಸ್ಟ್ 15ರಿಂದ ಉಚಿತ ಕರೆ-ಡೇಟಾ:

ಇದಲ್ಲದೇ ಫೀಚರ್ ಫೋನ್ ಬಳಕೆದಾರರಿಗೆ ವಾಯ್ಸ್ ಕಾಲ್ ಸಂಪೂರ್ಣ ಉಚಿತ ನೀಡಲು ಮುಖೇಶ್ ಅಂಬಾನಿ ಮುಂದಾಗಿದ್ದಾರೆ. ಫೋನ್ ಇರುವವರೆಗೆ ಉಚಿತ ಕರೆ ಮಾಡಬಹುದು. ಅದುವೇ ಯಾವುದೇ ಟ್ಯಾರಿಫ್ ಇಲ್ಲದೆ.

ಅನ್‌ಲಿಮಿಟೆಡ್ ಉಚಿತ ಡೇಟಾ:

ಅನ್‌ಲಿಮಿಟೆಡ್ ಉಚಿತ ಡೇಟಾ:

ಜಿಯೋ ಫೋನಿನಲ್ಲಿ ಸಂಪೂರ್ಣ ಉಚಿತ ಡೇಟಾವನ್ನು ನೀಡಲು ಮುಂದಾಗಿದೆ. ಅದಲ್ಲದೇ ಇದಕ್ಕಾಗಿ ತಿಂಗಳಿಗೆ ರೂ.153 ನಿಗದಿ ಮಾಡಿದೆ. ಅದುವೇ ಜಿಯೋ ಧನ್ ಧನಾ ಧನ್ ಆಫರ್ ಆಗಿರಲಿದೆ.

ಜಿಯೋ ಪೋನಿನಿಂದ ಟಿವಿ ಕನೆಕ್ಟ್ ಮಾಡಿಕೊಳ್ಳಬಹುದು:

ಜಿಯೋ ಪೋನಿನಿಂದ ಟಿವಿ ಕನೆಕ್ಟ್ ಮಾಡಿಕೊಳ್ಳಬಹುದು:

ಈ ಸಣ್ಣ ಫೋನಿನಲ್ಲಿ ಟಿವಿ ಕೇಬಲ್ ಆಯ್ಕೆಯನ್ನು ನೀಡಿದ್ದು, ಇದಕ್ಕೆ ಯಾವುದೇ ಟಿವಿಯನ್ನು ಬೇಕಾದರು ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಹಳೇ ಟಿವಿಯನ್ನು ಕನೆಕ್ಟ್ ಮಾಡಿಕೊಂಡು ಟಿವಿ ನೋಡಬಹುದು. ಜಿಯೋ ಫೋನ್ ಟಿವಿಗಾಗಿ ರೂ.309 ಪ್ಲಾನ್ ನೀಡಿದೆ.

ಇದಲ್ಲದೇ ಇನ್ನು ಇದೆ:

ಇದಲ್ಲದೇ ಇನ್ನು ಇದೆ:

ಇದಲ್ಲದೇ ಕಡಿಮೆ ಬೆಲೆಯ ಆಫರ್ ಸಹ ಇದೆ. ಅದುವೇ ರೂ.24 ಮತ್ತು ರೂ.54 ಪ್ಲಾನ್ ಇದರಲ್ಲಿ ರೂ.24 ಒಂದು ದಿನ ಮತ್ತು ರೂ.54ಕ್ಕೆ ಒಂದು ವಾರ ವ್ಯಾಲಿಡಿಟಿಯನ್ನು ಹೊಂದಿರಲಿದೆ.

22 ಭಾಷೆಗಳಲ್ಲಿ ಲಭ್ಯ:

22 ಭಾಷೆಗಳಲ್ಲಿ ಲಭ್ಯ:

ನಮ್ಮ ದೇಶದಲ್ಲಿ ಅನೇಕ ಭಾಷೆಗಳ ಲಭ್ಯವಿದ್ದು, ಅದಕ್ಕಾಗಿ ದೇಶದ 22 ಭಾಷೆಗಳಲ್ಲಿ ಈ ಫೋನ್ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ವಿವಿಧತೆಯಲ್ಲಿ ಏಕತೆ.

ವಾಯ್ಸ್ ಕಮಾಂಡಿಗ್ ಲಭ್ಯವಿದೆ.

ವಾಯ್ಸ್ ಕಮಾಂಡಿಗ್ ಲಭ್ಯವಿದೆ.

ಜಿಯೋ ತನ್ನ ಬಳಕೆದಾರಿಗೆ ಅತ್ಯಂತ ವಿಶಿಷ್ಠ ಫೋನ್ ನೀಡಿದೆ. ಇದು ನಿಮ್ಮ ಮೇಸೆಜ್ ಗಳನ್ನು ವಾಯ್ಸ್ ಮೂಲಕವೇ ಕಳುಹಿಸಬಹುದಾಗಿದ್ದು, ಆಪಲ್ ಸಿರಿಗೆ ಸ್ಪರ್ಧೆ ನೀಡುವ ಮಾದರಿಯಲ್ಲಿದೆ. ಇಂಟರ್ನೆಟ್ ನಲ್ಲಿಯೂ ವಾಯ್ಸ್ ಕಮಾಂಡಿಂಗ್ ಮೂಲಕ ಸರ್ಚ್ ಮಾಡಬಹುದಾಗಿದೆ.

ಜಿಯೋ ಆಪ್ ಬಳಕೆ:

ಜಿಯೋ ಆಪ್ ಬಳಕೆ:

ಈ ಜಿಯೋ ಫೀಚರ್ ಫೋನಿನಲ್ಲಿ ಸ್ಮಾರ್ಟ್‌ಫೋನ್ ಅನ್ನು ಕಾಣಬಹುದಾಗಿದ್ದು, ಇದರಲ್ಲಿ ಜಿಯೋ ಆಪ್ ಗಳು ಇರಲಿದೆ. ಇದರಿಂದ ಇದನ್ನು ಭಾರತದ ಫೀಚರ್ ಸ್ಮಾರ್ಟ್‌ಪೋನ್ ಎಂದು ಕರೆಯಬಹುದಾಗಿದೆ.

ತುರ್ತು ಸಂಖ್ಯೆ:

ತುರ್ತು ಸಂಖ್ಯೆ:

ಈ ಪೋನಿನಲ್ಲಿ ನೀವು ಸಂಖ್ಯೆ 5 ಅನ್ನು ಒತ್ತಿ ಹಿಡಿದರೆ ತುರ್ತು ಸಂದರ್ಭದಲ್ಲಿ ನಿಮ್ಮ ಸಹಾಯಕ್ಕಾಗಿ ನಿಮ್ಮ ಹತ್ತಿರದವರಿಗೆ ಮೇಸೆಜ್ ಹೋಗಲಿದೆ. ಅಲ್ಲದೇ ಇದು ನೀವಿರುವ ಲೋಕೆಷನ್ ಅನ್ನು ಅವರಿಗೆ ಕಳುಹಿಸಲಿದೆ.

ಮೋದಿ ಆಪ್:

ಮೋದಿ ಆಪ್:

ಜಿಯೋ ಫೀಚರ್ ಫೋನಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ ಅನ್ನು ನೀಡಲಾಗಿದ್ದು, ಇದರಲ್ಲಿ ಅವರ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.

ಡಿಜಿಟಲ್ ಪೇಮೆಂಟ್:

ಡಿಜಿಟಲ್ ಪೇಮೆಂಟ್:

ಕೇವಲ ಒಂದೇ ಒಂದು ಬಟನ್ ಒತ್ತುವ ಮೂಲಕ ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಆಪ್ ಇದಕ್ಕಾಗಿ ಅವಶ್ಯಕತೆ ಇಲ್ಲ. ಇದು ಭವಿಷ್ಯದ ತಂತ್ರಜ್ಞಾನವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
New set of data plans under Dhan Dhana Dhan offer announced catering to the Jio feature phone users. For Rs 153 every month, users get free voice calls, unlimited data, and subscribe to Jio apps for free. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot