Subscribe to Gizbot

'ಉಚಿತ ಜಿಯೋ ಫೋನ್' ಒಂದೇ ಕಲ್ಲಿಗೆ ಎರಡು ಹಕ್ಕಿ: ಟೆಲಿಕಾಂ-ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಬಿತ್ತು ಬರೆ..!!

Written By:

ಜಿಯೋ ಜುಲೈ 21ಕ್ಕೆ ರೂ.500ಕ್ಕೆ ಫೀಚರ್ ಫೋನ್ ಬಿಡುಗಡೆ ಮಾಡಲಿದೆ ಎನ್ನುವುದನ್ನು ನಂಬಿದ ಗ್ರಾಹಕರಿಗೆ ಮೋಸಮಾಡದೇ ಮತ್ತಷ್ಟು ಖುಷಿಪಡಿಸುವ ಸಲುವಾಗಿ ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ, ಉಚಿತವಾಗಿ ಫೀಚರ್ ಫೋನ್ ಬಿಡುಗಡೆ ಮಾಡುವ ಮೂಲಕ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೇಬ್ಬಿಸಿದ್ದಾರೆ ಎನ್ನಲಾಗಿದೆ.

'ಉಚಿತ ಜಿಯೋ ಫೋನ್' ಒಂದೇ ಕಲ್ಲಿಗೆ ಎರಡು ಹಕ್ಕಿ:

ಓದಿರಿ: ಜಿಯೋ ಬಳಕೆದಾರರಿಗೆ 'ಜಿಯೋ 4G VoLTE ಫೋನ್ ಸಂಪೂರ್ಣ ಉಚಿತ'

ಇಷ್ಟು ದಿನ ಕೇವಲ ಟೆಲಿಕಾಂ ಕಂಪನಿಗಳೊಂದಿಗೆ ಮಾತ್ರವೇ ಜಿಯೋ ಸ್ಪರ್ಧೆಯನ್ನು ನಡೆಸುತ್ತಿತ್ತು, ಆದರೆ ಈಗ ತನ್ನ ಸ್ಪರ್ಧೆಯನ್ನು ಮೊಬೈಲ್ ಕಂಪನಿಗಳೊಂದಿಗೆ ಹಂಚಿಕೊಳ್ಳಲು ಮುಂದಾಗಿದ್ದು, ಈಗ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ಮುಂದಾಗಿದೆ ಜಿಯೋ. ಇಷ್ಟು ದಿನ ಕೇವಲ ಉಚಿತ ಡೇಟಾ-ಕಾಲ್ ನೀಡುತ್ತಿದ್ದ ಜಿಯೋ ಈಗ ಉಚಿತ ಮೊಬೈಲ್ ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಮುಗಿಯಿತು ಬಜೆಟ್ ಸ್ಮಾರ್ಟ್‌ಫೋನ್ ಗಳ ಕಥೆ:

ಮುಗಿಯಿತು ಬಜೆಟ್ ಸ್ಮಾರ್ಟ್‌ಫೋನ್ ಗಳ ಕಥೆ:

ದೇಶದಲ್ಲಿ ಜಿಯೋ ಸೇವೆಯು ಆರಂಭವಾದ ನಂತರದಲ್ಲಿ ಸ್ಮಾರ್ಟ್‌ಫೋನ್ ಗಳ ವಹಿವಾಟು ಜೋರಾಗಿ ನಡೆದಿತ್ತು. ಅಲ್ಲದೇ ಜಿಯೋ ಗಾಗಿಯೇ ಹೆಚ್ಚಿನ ದುಡ್ಡು ನೀಡಿ ಫೋನ್ ಖರೀದಿಸುವವರು ಇದ್ದರು. ಆದರೆ ಈಗ ಜಿಯೋ ಫೋನ್ ಲಾಂಚ್ ಆದ ನಂತರದಲ್ಲಿ ಎಲ್ಲಾರು ಜಿಯೋ ಕಡೆಗೆ ವಾಲುತ್ತಾರೆ.

ಒಂದೇ ಏಟಿಗೆ ಎರಡು ಹಕ್ಕಿ:

ಒಂದೇ ಏಟಿಗೆ ಎರಡು ಹಕ್ಕಿ:

ಜಿಯೋ ಈ ಬಾರಿ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದು ಉರುಳಿಸಿದೆ. ತನ್ನ ಬಳಕೆದಾರರನ್ನು ಸೆಳೆಯುಲು ಕಡಿಮೆ ಬೆಲೆಗೆ ಫೋನ್ ಮತ್ತು ಜಿಯೋ ಪೋನ್ ನಲ್ಲಿ ಉತ್ತಮ ಫೀಚರ್ ನೀಡುವ ಮೂಲಕ ಮೊಬೈಲ್ ಲೋಕದಲ್ಲಿಯೂ ಹೊಸ ಕ್ರಾಂತಿಯನ್ನು ಮಾಡಲು ಮುಂದಾಗಿದೆ.

ಏರ್‌ಟೆಲ್-ವೊಡಾಪೋನ್ ಗೆ ಹೊಡೆತ:

ಏರ್‌ಟೆಲ್-ವೊಡಾಪೋನ್ ಗೆ ಹೊಡೆತ:

ಇಷ್ಟು ದಿನ ಜಿಯೋ ದೊಂದಿಗೆ ಟ್ಯಾರಿಫ್ ಪ್ಲಾನ್ ಗಳ ಮೂಲಕ ಹೊಡೆದಾಡುತ್ತಿದ್ದ ಏರ್‌ಟೆಲ್ ಮತ್ತು ವೊಡಾಫೋನ್ ಪಾಲಿಗೆ ಜಿಯೋ ಫೋನ್ ಮಾರಕವಾಗಲಿದೆ. ಇನ್ನು ಮುಂದೆ ಜಿಯೋ 4G ಫೋನ್ ಖರೀದಿಸುವ ಗ್ರಾಹಕರು ಮತ್ತೆಂದು ಜಿಯೋ ಬಿಟ್ಟು ಬರುವುದಿಲ್ಲ ಕಾರಣ ಉಚಿತ ಕರೆ ಮಾಡುವ ಸೇವೆ. ಅಲ್ಲದೇ ಇದಕ್ಕಿಂತ ಹೆಚ್ಚಿನದನ್ನು ಏರ್‌ಟೆಲ್ - ವೊಡಾಫೋನ್ ನಿಂದ ನಿರೀಕ್ಷಿಸಲು ಸಾಧ್ಯವೂ ಇಲ್ಲ.

ಏಕಸ್ವಾಮ್ಯ ಸಾಧಿಸುವ ಗುರಿ:

ಏಕಸ್ವಾಮ್ಯ ಸಾಧಿಸುವ ಗುರಿ:

ಜಿಯೋ ಈಗಾಗಲೇ ಟೆಲಿಕಾಂ ವಲಯದಲ್ಲಿ ಹಿಡಿತವನ್ನು ಸಾಧಿಸುವ ಕ್ರಮಕ್ಕೆ ಮುಂದಾಗಿದೆ. ಇದಲ್ಲದೇ ಇದರೊಂದಿಗೆ ಮೊಬೈಲ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಶೀಘ್ರವೇ ಡಿಟಿಹೆಚ್ ಕ್ಷೇತ್ರವನ್ನು ಅಲಂಕರಿಸಲಿದ್ದು, ಮುಂದೆ ಬ್ರಾಡ್ ಬ್ಯಾಂಡಿನಲ್ಲಿಯೂ ಜಿಯೋ ಆಬ್ಬರ ಕಾಣಬಹುದಾಗಿದೆ. ಒಟ್ಟಿನಲ್ಲಿ ತಾನು ಕಾಲಿಟ್ಟ ಕಡೆಗಳಲ್ಲಿ ವೇಗದ ಬೆಳವಣಿಗೆಯನ್ನು ಸಾಧಿಲು ಮುಂದಾಗಿರುವ ಜಿಯೋ ಭಾರತೀಯ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಲು ಮುಂದಾಗಿದೆ.

ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಡೆತ:

ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಡೆತ:

2017ರಲ್ಲಿ ವೇಗದ ಬೆಳವಣಿಗೆಯ ಗತಿಯನ್ನು ಹೊಂದಿದ್ದ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಹೊಡೆತ ತಿನ್ನಲಿದೆ. ಜಿಯೋ ಫೋನಿನಲ್ಲಿ ಎಲ್ಲಾ ಆಯ್ಕೆಗಳು ಇರುವುದರಿಂದ ಗ್ರಾಹಕರು ಈ ಫೋನಿನ ಕಡೆಗೆ ಹೆಚ್ಚಿನ ಒಲವು ತೋರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್ ಲೋಕವು ಹಿನ್ನಡೆ ಅನುಭವಿಸಲಿದೆ.

ಜಿಯೋ ಫೋನ್ ಸಂಪೂರ್ಣ ಉಚಿತ:

ಜಿಯೋ ಫೋನ್ ಸಂಪೂರ್ಣ ಉಚಿತ:

ಜಿಯೋ ಪೋನ್ ಗ್ರಾಹಕರಿಗೆ ಉಚಿತವಾಗಿ ದೊರೆಯಲಿದೆ. ಅಂದರೆ ₹1500 ನೀಡಿ ಇದನ್ನು ಖರೀದಿಸಿದರೆ, ಮೂರು ವರ್ಷಗಳ ನಂತರ ಆ ಹಣವನ್ನು ವಾಪಸ್ ಪಡೆಯಬಹುದಾಗಿದೆ. ಇದರಿಂದಾಗಿ ನಿಮಗೆ ಈ ಫೋನ್ ಉಚಿತವಾಗಿ ದೊರೆಯಲಿದೆ ಎನ್ನಲಾಗಿದೆ.

ಆಗಸ್ಟ್‌ 24ರಿಂದ ಮುಂಗಡ ಬುಕ್ಕಿಂಗ್:

ಆಗಸ್ಟ್‌ 24ರಿಂದ ಮುಂಗಡ ಬುಕ್ಕಿಂಗ್:

ಆಗಸ್ಟ್‌ 24ರ ನಂತರ ಮುಂಗಡವಾಗಿ ಕಾಯ್ದಿರಿಸುವಿಕೆ ಆರಂಭವಾಗಲಿದ್ದು, ಆದ್ಯತೆಯ ಆಧಾರದಲ್ಲಿ ಸೆಪ್ಟೆಂಬರ್‌ 2017ರಿಂದಲೇ ಮಾರಾಟ ಪ್ರಾರಂಭವಾಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಪೋನ್ ನಿಮ್ಮ ಕೈಗೆ ಬರಲು ಇನ್ನು ಎರಡು ಮೂರು ತಿಂಗಳಾಗಲಿದೆ ಎನ್ನಲಾಗಿದೆ.

ವಿಶ್ವದ ಅತೀ ಅಗ್ಗದ ಫೋನ್ ಇದು:

ವಿಶ್ವದ ಅತೀ ಅಗ್ಗದ ಫೋನ್ ಇದು:

ಜಿಯೋ ಈ ಪೋನ್ ಅನ್ನು ಜಗತ್ತಿನಲ್ಲಿ ಅತ್ಯಂತ ಅಗ್ಗದ ದರಕ್ಕೆ ದೊರಕುವ ಸ್ಮಾರ್ಟ್‌ಫೋನ್‌ ಎಂದು ಹೇಳಿಕೊಂಡಿದೆ. ಬೇಡಿಕೆಯ ಅನುಗುಣವಾಗಿ ಪ್ರತಿ ತಿಂಗಳು ದೇಶದಾದ್ಯಂತ 5ಲಕ್ಷ ‘ಜಿಯೋ ಫೋನ್‌' ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
At the Annual General Meeting (AGM), Reliance Jio announced the launch of the JioPhone as expected. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot