ಈ 800 ರುಪಾಯಿಯ ಫೋನು ನಿಮ್ಮ ದುಬಾರಿ ಸ್ಮಾರ್ಟ್ ಫೋನಿಗಿಂತ ಉತ್ತಮ!

|

2007ರಲ್ಲಿ ಐಫೋನ್ ಬರುವುದಕ್ಕೆ ಮುಂಚೆ, ನೋಕಿಯಾ ಕಂಪನಿಯ ಮೊಬೈಲ್ ಫೋನುಗಳು ಮಾರುಕಟ್ಟೆಯನ್ನಾಕ್ರಮಿಸಿಕೊಂಡಿದ್ದವು. ಅದರಲ್ಲೂ ನೋಕಿಯಾ 1100 ತರಹದ ಫೀಚರ್ ಫೋನನ್ನು ಬಹುತೇಕ ಜನರು ಉಪಯೋಗಿಸುತ್ತಿದ್ದರು.

ಈ 800 ರುಪಾಯಿಯ ಫೋನು ನಿಮ್ಮ ದುಬಾರಿ ಸ್ಮಾರ್ಟ್ ಫೋನಿಗಿಂತ ಉತ್ತಮ!

ಕಡಿಮೆ ಬೆಲೆ, ಚಿಕ್ಕ ಗಾತ್ರ ಮತ್ತು ದೃಡ ರಚನೆಯ ಈ ಫೋನು ಎಲ್ಲರ ಮನ ಗೆದ್ದಿತ್ತು. ಭಾರತದಲ್ಲಿ, ಸ್ಮಾರ್ಟ್ ಫೋನುಗಳ ಅಬ್ಬರದ ನಡುವೆಯೂ ಈ ಫೋನನ್ನು ಉಪಯೋಗಿಸುವುದನ್ನು ನೋಡಬಹುದು.

ಓದಿರಿ: ಜಿಯೋ 4ಜಿ ಸಿಮ್ ಅನ್ನು ಡಾಂಗಲ್‌ನಲ್ಲಿ ಬಳಸುವುದು ಹೇಗೆ?

ಹಾಗಿದ್ದರೂ, ಸ್ಮಾರ್ಟ್ ಫೋನುಗಳ ಆಗಮನದೊಂದಿಗೆ, ನೋಕಿಯಾ ಜನರ ಮನಸ್ಸಿನಿಂದ ಮರೆಯಾಗಿ ಹೋಗಿದೆ. ಇವತ್ತು ನೋಕಿಯಾ 1100 ಫೋನನ್ನಾಗಲೀ ಅಥವಾ ಯಾವುದೇ ಫೀಚರ್ ಫೋನನ್ನು ನೋಡುವುದು ಕಷ್ಟ. ಈಗಲೂ ಈ ಫೋನುಗಳು ಕೆಲವು ಅಂಗಡಿಗಳಲ್ಲಿ ಲಭ್ಯ.

ಓದಿರಿ: ಮಾರುಕಟ್ಟೆಗೆ ಕಾಲಿಡಲಿರುವ ನೋಕಿಯಾ ಸಿ1 ಆಂಡ್ರಾಯ್ಡ್ ಡಿವೈಸ್

ಈ ಐತಿಹಾಸಿಕ ಮೊಬೈಲ್ ಫೋನ್ ಈಗಿರುವ ಸ್ಮಾರ್ಟ್ ಫೋನುಗಳಿಗಿಂತ ಯಾಕೆ ಉತ್ತಮ ಅನ್ನುವುದನ್ನು ಕೆಳಗಿನ ಸ್ಲೈಡರ್ ನಲ್ಲಿ ನೋಡಿ.

ನಿಮ್ಮಿಡೀ ತಿಂಗಳಿನ ಸಂಬಳವನ್ನು ಮೊಬೈಲ್ ಖರೀದಿಸಲು ನೀಡಬೇಕಾಗಿಲ್ಲ.

ನಿಮ್ಮಿಡೀ ತಿಂಗಳಿನ ಸಂಬಳವನ್ನು ಮೊಬೈಲ್ ಖರೀದಿಸಲು ನೀಡಬೇಕಾಗಿಲ್ಲ.

ಈ ಫೋನಿನ ಸದ್ಯದ ಬೆಲೆ ಕೇವಲ 800 ರುಪಾಯಿ. ನಿಮ್ಮ ತಿಂಗಳ ಸಂಬಳವನ್ನೆಲ್ಲ ಇದನ್ನು ಖರೀದಿಸುವ ಸಲುವಾಗಿ ವಿನಿಯೋಗಿಸಬೇಕಾಗಿಲ್ಲ. ಕಡಿಮೆ ಬೆಲೆಯ ಫೋನ್ ಇದು.

ಅಕಸ್ಮಾತ್ ಕಳೆದುಕೊಂಡರೂ ಪಶ್ಚಾತ್ತಾಪವೇನಿರಲ್ಲ.

ಅಕಸ್ಮಾತ್ ಕಳೆದುಕೊಂಡರೂ ಪಶ್ಚಾತ್ತಾಪವೇನಿರಲ್ಲ.

ನಿಮ್ಮ ಸ್ಮಾರ್ಟ್ ಫೋನನ್ನು ಕಳೆದುಕೊಳ್ಳುವುದು ನಿಜಕ್ಕೂ ದುಸಪ್ನ, ಅದರಲ್ಲಿ ಬಹಳಷ್ಟು ಮಾಹಿತಿ, ಚಿತ್ರಗಳನ್ನು ಸೇವ್ ಮಾಡಿರುತ್ತೀರಿ ಮತ್ತು ಅದರ ಬೆಲೆಯೂ ಅಧಿಕವಾಗಿರುತ್ತೆ. ಆದರೆ ನೋಕಿಯಾ 1100 ಫೋನನ್ನು ಕಳೆದುಕೊಂಡರೆ ದುಃಖಪಡುವುದೇನೂ ಬೇಡ, ಅದರ ಬೆಲೆಯೂ ಕಡಿಮೆ ಮತ್ತಿದರಲ್ಲಿರುವ ಮಾಹಿತಿಯೂ ಕಡಿಮೆ.

ಎಸೆದರೂ ಮುರಿಯುವುದಿಲ್ಲ.

ಎಸೆದರೂ ಮುರಿಯುವುದಿಲ್ಲ.

ನೋಕಿಯಾ 1100 ಗಟ್ಟಿಮುಟ್ಟಾಗಿದೆ. ಇದನ್ನು ನೀವು ಎಷ್ಟು ಸಲ ಬೇಕಾದರೂ ಎಸೆಯಿರಿ ಅಥವಾ ಬೀಳಿಸಿ ಫೋನಿನ ಮೇಲೆ ಏನೂ ಪರಿಣಾಮ ಬೀರುವುದಿಲ್ಲ! ಆದರೆ ಈಗಿನ ಸ್ಮಾರ್ಟ್ ಫೋನುಗಳು ಒಮ್ಮೆ ಬಿದ್ದರೆ ಒಡೆದುಹೋಗುತ್ತದೆ ಮತ್ತು ಅವನ್ನು ರಿಪೇರಿ ಮಾಡುವುದೂ ಖರ್ಚಿನ ಬಾಬತ್ತು.

ನೋಕಿಯಾ 1100ನಲ್ಲಿ ಶಕ್ತಿಯುತ ಟಾರ್ಚ್ ಇದೆ.

ನೋಕಿಯಾ 1100ನಲ್ಲಿ ಶಕ್ತಿಯುತ ಟಾರ್ಚ್ ಇದೆ.

ನೋಕಿಯಾ 1100ನಲ್ಲಿರುವ ಟಾರ್ಚ್ ಲೈಟ್ ಶಕ್ತಿಯುತವಾಗಿದೆ. ನಿಮ್ಮ ಮನೆಯ ಒಂದಿಡೀ ರೂಮನ್ನು ಇದು ಬೆಳಗಬಲ್ಲದು. ಸ್ಮಾರ್ಟ್ ಫೋನಿನಲ್ಲೂ ಫ್ಲಾಷ್ ಲೈಟ್ ಇರುತ್ತದೆ, ಆದರೆ ನೀವು ಅದನ್ನು ಉಪಯೋಗಿಸಿದರೆ ಬ್ಯಾಟರಿ ಬೇಗನೆ ಖರ್ಚಾಗಿಬಿಡುತ್ತದೆ.

ಬ್ಯಾಟರಿಯ ಆಯಸ್ಸಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

ಬ್ಯಾಟರಿಯ ಆಯಸ್ಸಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

ನೋಕಿಯಾ 1100 ಫೋನನ್ನು ಪದೇ ಪದೇ ಚಾರ್ಜ್ ಮಾಡಬೇಕಿಲ್ಲ. ಫೋನಿನ ಬ್ಯಾಟರಿ ಲೈಫ್ ಉತ್ತಮವಾಗಿದೆ, ರೀಚಾರ್ಜ್ ಮಾಡದೆಯೇ ಅನೇಕ ದಿನಗಳವರೆಗೆ ಉಪಯೋಗಿಸಬಹುದು. ಸ್ಮಾರ್ಟ್ ಫೋನನ್ನು ಎಷ್ಟು ಸಲ ಚಾರ್ಜ್ ಮಾಡಬೇಕು ಎನ್ನುವುದು ನಿಮಗೇ ಗೊತ್ತಿರಬೇಕಲ್ಲ?

ಟೈಪಿಸುವುದು ತುಂಬಾ ಸುಲಭ.

ಟೈಪಿಸುವುದು ತುಂಬಾ ಸುಲಭ.

ನೋಕಿಯಾ 1100ದಲ್ಲಿರುವ ಕೀಪ್ಯಾಡ್ ಬಹಳ ಸರಳವಾಗಿದೆ, ಉಪಯೋಗಿಸಲು ಸುಲಭ. ಸ್ಮಾರ್ಟ್ ಫೋನಿನ ಕೀಬೋರ್ಡುಗಳು ತುಂಬಾ ದೊಡ್ಡದಿರುವುದರಿಂದ ತಪ್ಪುಗಳಾಗುವ ಸಾಧ್ಯತೆ ಅಧಿಕ.

ಸ್ಪೀಡ್ ಡಯಲ್ ಫೀಚರ್.

ಸ್ಪೀಡ್ ಡಯಲ್ ಫೀಚರ್.

ನೋಕಿಯಾದಲ್ಲಿರುವ ಸ್ಪೀಡ್ ಡಯಲ್ ಫೀಚರ್ ಮೂಲಕ ಮೊದಲೇ ನಿಗದಿಗೊಳಿಸಿದ ನಂಬರನ್ನು ದೀರ್ಘವಾಗಿ ಒತ್ತುವ ಮೂಲಕ ಕರೆ ಮಾಡಬಹುದು. ಕಾಂಟ್ಯಾಕ್ಟ್ಸ್ ಮೆನುಗೆ ಹೋಗಿ ಕರೆ ಮಾಡುವ ಗೋಜಲಿಲ್ಲ.

 ಹ್ಯಾಂಗ್ ಆಗುವುದಿಲ್ಲ.

ಹ್ಯಾಂಗ್ ಆಗುವುದಿಲ್ಲ.

ನೀವು ನೋಕಿಯಾ 1100 ಫೋನನ್ನು ಉಪಯೋಗಿಸಿದ್ದರೆ ಆ ಫೋನು ಹ್ಯಾಂಗ್ ಆಗುವುದು ತುಂಬಾ ಅಪರೂಪ ಎನ್ನುವುದು ನಿಮಗೆ ಗೊತ್ತಿರುತ್ತದೆ. ಹ್ಯಾಂಗ್ ಆದರೂ ಒಮ್ಮೆ ಫೋನನ್ನು ಆಫ್ ಮಾಡಿ ಆನ್ ಮಾಡಿದರೆ ಸರಿಯಾಗುತ್ತದೆ.

ಪಾಸ್ ವರ್ಡ್ ನೆನಪಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ.

ಪಾಸ್ ವರ್ಡ್ ನೆನಪಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ.

ಫೋನನ್ನು ಲಾಕ್ ಮತ್ತು ಅನ್ ಲಾಕ್ ಮಾಡುವುದು ತುಂಬಾ ಸುಲಭ. ಪಾಸ್ ವರ್ಡ್ ಅಥವಾ ಪಿನ್ ಅನ್ನು ನೆನಪಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ.

ಎಲ್ಲೆಡೆಯೂ ಚಾರ್ಜರ್ ಸಿಗುತ್ತದೆ.

ಎಲ್ಲೆಡೆಯೂ ಚಾರ್ಜರ್ ಸಿಗುತ್ತದೆ.

ನಿಮಗೆ ನೆನಪಿದ್ದರೆ, ಆಗ ಎಲ್ಲೆಡೆಯೂ ಎಲ್ಲರ ಹತ್ತಿರವೂ ನೋಕಿಯಾ ಚಾರ್ಜರ್ ಇತ್ತು. ನಿಮ್ಮ ಫೋನನ್ನು ಚಾರ್ಜ್ ಮಾಡಲು ಚಾರ್ಜರ್ ಹುಡುಕುವ ಪರದಾಟವಿರುತ್ತಿರಲಿಲ್ಲ.

Best Mobiles in India

Read more about:
English summary
Nokia 1100 is a great phone that costs just Rs 800. The smartphones that are available these days are too expensive. You can take a look at why the Nokia phone is better from the reasons that we have detailed over here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X