ಮಾರುಕಟ್ಟೆಗೆ ಕಾಲಿಡಲಿರುವ ನೋಕಿಯಾ ಸಿ1 ಆಂಡ್ರಾಯ್ಡ್ ಡಿವೈಸ್

By Shwetha
|

ನೋಕಿಯಾ ಬ್ರ್ಯಾಂಡ್ ಇತ್ತೀಚೆಗೆ ಸುದ್ದಿ ಮಾಡಿರುವಂತೆಯೇ ಆಂಡ್ರಾಯ್ಡ್ ಚಾಲಿತ ಡಿವೈಸ್‌ಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿದೆ. ಎಚ್‌ಎಮ್‌ಡಿ ಎಂಬ ಹೊಸ ಕಂಪೆನಿ ಈ ನಿರ್ಮಾಣದ ಜವಬ್ದಾರಿಯನ್ನು ಪಡೆದುಕೊಂಡಿದ್ದು ನೋಕಿಯಾ ಬ್ರ್ಯಾಂಡ್‌ನ ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಇದು ತಯಾರಿಸಲಿದೆ.

ಓದಿರಿ: ಆಂಡ್ರಾಯ್ಡ್ ಫೋನ್‌ಗೆ ಜಿಯೋ ಸಿಮ್ ಕಾರ್ಡ್ ಹೀಗೆ ಪಡೆದುಕೊಳ್ಳಿ

ಈಗಾಗಲೇ ಬಂದಿರುವ ಸುದ್ದಿಯೆಂದರೆ ಸಿ1 ಡಿವೈಸ್‌ನಲ್ಲಿ ಪ್ರಸ್ತುತ ನೋಕಿಯಾ ಕಾರ್ಯನಿರ್ವಹಿಸುತ್ತಿದೆ ಎಂದಾಗಿದೆ. ಇದೊಂದೇ ಡಿವೈಸ್ ಅಲ್ಲದೆ ಇನ್ನೆರಡು ಫೋನ್‌ಗಳನ್ನು ಕಂಪೆನಿ ಚಾಲನೆಗೆ ತರುವಲ್ಲಿ ಸಿದ್ಧತೆಯನ್ನು ನಡೆಸುತ್ತಿದೆ ಎಂದಾಗಿದೆ. ನೋಕಿಯಾ ಸಿ1 ಎರಡು ಭಿನ್ನ ಗಾತ್ರಗಳಲ್ಲಿ ಬರುತ್ತಿದ್ದು ಭಿನ್ನ ಕ್ಯಾಮೆರಾ, RAM ಮತ್ತು ಆನ್‌ಬೋರ್ಡ್ ಸ್ಟೋರೇಜ್ ಅನ್ನು ಇದು ಪಡೆದುಕೊಳ್ಳಲಿದೆ. ಈ ಡಿವೈಸ್ ಕುರಿತ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.

5.5 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ ಸ್ಕ್ರೀನ್

5.5 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ ಸ್ಕ್ರೀನ್

5.5 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ ಸ್ಕ್ರೀನ್ ಅನ್ನು ಡಿವೈಸ್ ಪಡೆದುಕೊಳ್ಳಲಿದೆ. 2ಜಿಬಿ RAM ಅನ್ನು ಫೋನ್ ಹೊಂದಲಿದ್ದು 32 ಸಂಗ್ರಹಣಾ ಸಾಮರ್ಥ್ಯ ಡಿವೈಸ್‌ನಲ್ಲಿರಲಿದೆ.

ಕ್ಯಾಮೆರಾ

ಕ್ಯಾಮೆರಾ

ಡಿವೈಸ್ 8 ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಳ್ಳಲಿದ್ದು 5.5 ಇನ್ ಮಾಡೆಲ್ 3ಜಿಬಿ RAM, 13 ಎಮ್‌ಪಿ ಕ್ಯಾಮೆರಾ ಮತ್ತು 64 ಜಿಬಿ ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಲಿದೆ. 5 ಎಮ್‌ಪಿ ಸೆಕೆಂಡರಿ ಕ್ಯಾಮೆರಾವು ಡಿವೈಸ್‌ನಲ್ಲಿರಲಿದೆ.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್

ನೋಕಿಯಾ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಹೊಸ ಶ್ರೇಣಿ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. ಆದರೆ ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ನೋಕಿಯಾ ಥರ್ಡ್ ಪಾರ್ಟಿಗಳು ರಚಿಸಿರುವ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳಲಿದೆ ಎಂದಾಗಿದೆ.

ಮೈಕ್ರೋಸಾಫ್ಟ್‌ನ ಪ್ರಿವ್ಯೂ ಕ್ಯಾಮೆರಾ ತಂತ್ರಜ್ಞಾನ

ಮೈಕ್ರೋಸಾಫ್ಟ್‌ನ ಪ್ರಿವ್ಯೂ ಕ್ಯಾಮೆರಾ ತಂತ್ರಜ್ಞಾನ

ಮೈಕ್ರೋಸಾಫ್ಟ್‌ನ ಪ್ರಿವ್ಯೂ ಕ್ಯಾಮೆರಾ ತಂತ್ರಜ್ಞಾನವನ್ನು ಈ ಡಿವೈಸ್‌ಗಳಲ್ಲಿ ನಾವು ಕಂಡುಕೊಳ್ಳಬಹುದಾಗಿದೆ. ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ ತಂತ್ರಜ್ಞಾನವನ್ನು ಡಿವೈಸ್ ಡಿಸ್‌ಪ್ಲೇ ಹೊಂದಲಿದೆ.

ಆಂಡ್ರಾಯ್ಡ್ ಮಾರ್ಶ್ ಮಲ್ಲೊ

ಆಂಡ್ರಾಯ್ಡ್ ಮಾರ್ಶ್ ಮಲ್ಲೊ

ಎಚ್‌ಎಮ್‌ಡಿ ಮತ್ತು ಫೋಕ್ಸನ್ ಸಂಸ್ಥೆಗಳು ಇನ್ನಷ್ಟು ಬದಲಾವಣೆಗಳೊಂದಿಗೆ ಡಿವೈಸ್‌ಗಳನ್ನು ಮಾರುಕಟ್ಟೆಗೆ ಹೊರತರುವ ಯೋಚನೆಯಲ್ಲಿವೆ. ಆಂಡ್ರಾಯ್ಡ್ ಮಾರ್ಶ್ ಮಲ್ಲೊವನ್ನೇ ಇದರಲ್ಲಿ ಬಿಡುಗಡೆ ಮಾಡುವ ಇರಾದೆಯನ್ನು ಈ ಕಂಪನಿಗಳು ಹೊಂದಿವೆ.

ಸಪ್ಟೆಂಬರ್ 7, 2016

ಸಪ್ಟೆಂಬರ್ 7, 2016

ಒಂದು ಮಾಹಿತಿಯ ಪ್ರಕಾರ ನೋಕಿಯಾ ಸಿ1 ಫೋನ್ ಸಪ್ಟೆಂಬರ್ 7, 2016 ಕ್ಕೆ ಮಾರುಕಟ್ಟೆಗೆ ಕಾಲಿಡಲಿದೆ.

Best Mobiles in India

English summary
According to the reports,Nokia is back to the smartphone market with Its new Android handset named as Nokia C1.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X