ಜಿಯೋ 4ಜಿ ಸಿಮ್ ಅನ್ನು ಡಾಂಗಲ್‌ನಲ್ಲಿ ಬಳಸುವುದು ಹೇಗೆ?

By Shwetha
|

ಇಂದಿನ ದಿನಗಳಲ್ಲಿ ರಿಲಾಯನ್ಸ್ ಜಿಯೋ ಹೆಚ್ಚು ಸದ್ದು ಉಂಟುಮಾಡುತ್ತಿದೆ. ಹೆಚ್ಚಿನ ಎಲ್ಲಾ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳಿಗೆ ರಿಲಾಯನ್ಸ್ ಟ್ರಯಲ್ ಆವೃತ್ತಿಯನ್ನು ಇದೀಗ ಆರಂಭಿಸಿದೆ. ಹೆಚ್ಚಿನವರು ಜಿಯೋ ಸಿಮ್ ಕಾರ್ಡ್ ಅನ್ನು ತಮ್ಮ ಫೋನ್‌ಗಳಿಗೆ ಪಡೆದುಕೊಂಡಿದ್ದಾರೆ. ಎಲ್ಲಾ 4ಜಿ ಸ್ಮಾರ್ಟ್‌ಫೋನ್‌ಗಳಿಗೆ ಸೇವೆಯನ್ನು ಒದಗಿಸಲಾಗಿದೆ ಎಂಬ ವರದಿ ಕೂಡ ಇದೆ.

ಓದಿರಿ: ಏರ್‌ಟೆಲ್ 4ಜಿ ಯನ್ನೂ ಮೂಲೆಗುಂಪಾಗಿಸಿತೇ ರಿಲಾಯನ್ಸ್ ಜಿಯೋ

ಈಗ ಹೆಚ್ಚಿನವರಿಗೆ ಇರುವ ಸಮಸ್ಯೆ ಏನೆಂದರೆ, ಜಿಯೋ ಸಿಮ್ ಕೇವಲ 4ಜಿ ಸಕ್ರಿಯವಾಗಿರುವ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಲಭ್ಯವೇ ಎಂದಾಗಿದೆ. ಇಂದಿನ ಲೇಖನದಲ್ಲಿ ಇದಕ್ಕೆ ತಕ್ಕುದಾದ ಉತ್ತರವನ್ನು ನಾವು ನೀಡುತ್ತಿದ್ದು ಡಾಂಗಲ್‌ಗಳಿಗೂ ಈ ಸಿಮ್ ಅನ್ನು ಬಳಸಬಹುದು ಎಂಬ ಸಂತಸದ ವಿಷಯವನ್ನು ತಿಳಿಸುತ್ತಿದ್ದೇವೆ. ಹಾಗಿದ್ದರೆ ಈ ಟ್ರಿಕ್ಸ್ ಅನ್ನು ಅರಿತುಕೊಳ್ಳುವುದು ಹೇಗೆ ಎಂಬುದಕ್ಕೆ ಸಲಹೆ ಇಲ್ಲಿದೆ.

ಬೆಂಬಲಿತ ಜಿಯೋ ಸಿಮ್ ಕಾರ್ಡ್

ಬೆಂಬಲಿತ ಜಿಯೋ ಸಿಮ್ ಕಾರ್ಡ್

ಜಿಯೋ ಸಿಮ್ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಹಲವಾರು ವಿಧಾನಗಳಿವೆ. ಆರಂಭದಲ್ಲಿ ಬರೇ ರಿಲಾಯನ್ಸ್ ಉದ್ಯೋಗಿಗಳಿಗೆ ಮತ್ತು ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿದೆ. ನಿಮ್ಮ ಸಿಮ್ ಎಲ್‌ವೈಎಫ್ ಸ್ಮಾರ್ಟ್‌ಫೋನ್‌ನದ್ದಾಗಿದ್ದರೆ, ನಿಮಗದನ್ನು ಡಾಂಗಲ್‌ಗೆ ಬಳಸಲಾಗುವುದಿಲ್ಲ. ಸ್ಯಾ್‌ಸಂಗ್ ಅಥವಾ ಇತರ 4ಜಿ ಸಕ್ರಿಯವಾಗಿರುವ ಸ್ಮಾರ್ಟ್‌ಫೋನ್‌ನಲ್ಲಿ ಸಿಮ್ ಇದೆ ಎಂದಾದಲ್ಲಿ ಇದನ್ನು ಸರಳವಾಗಿ ಡಾಂಗಲ್‌ನಲ್ಲಿ ಬಳಸಬಹುದಾಗಿದೆ.

ಡಾಂಗಲ್‌ಗೆ ಸಿಮ್ ಕಾರ್ಡ್ ಅಳವಡಿಸಿ

ಡಾಂಗಲ್‌ಗೆ ಸಿಮ್ ಕಾರ್ಡ್ ಅಳವಡಿಸಿ

ಈ ಪ್ರಕ್ರಿಯೆಯ ಆರಂಭ ಹಂತವೆಂದರೆ 4ಜಿ ಗೆ ಬೆಂಬಲವನ್ನು ನೀಡುವ ಏರ್‌ಟೆಲ್ ಅಥವಾ ಇತರ ಡಾಂಗಲ್‌ಗೆ ಸಿಮ್ ಅನ್ನು ಅಳವಡಿಸಿಕೊಳ್ಳಿ. ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ಗೆ ಡಾಂಗಲ್ ಕನೆಕ್ಟ್ ಮಾಡಿ ಮತ್ತು ಸಂಪರ್ಕ ಅನುಷ್ಟಾನಗೊಳ್ಳುವವರೆಗೆ ಕಾಯಿರಿ.

ಎಪಿಎನ್ ಹೊಂದಿಸಿ

ಎಪಿಎನ್ ಹೊಂದಿಸಿ

ನಿಮ್ಮ ಡಾಂಗಲ್ ಅನ್ನು ಒಮ್ಮೆ ಸಂಪರ್ಕಪಡಿಸಿದ ನಂತರ, ಅಧಿಸೂಚನೆ ಬರುವವರೆಗೆ ನೀವು ಕಾಯಬೇಕು. ಹೀಗೆ ಆಗದೇ ಇದ್ದಲ್ಲಿ, ನಿಮ್ಮ ಡಾಂಗಲ್ ಸೆಟ್ಟಿಂಗ್ಸ್‌ಗೆ ಹೋಗಿ. ವಿಂಡೋಸ್ 8 ಅಥವಾ ಮೇಲ್ಮಟ್ಟದ್ದನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಅಧಿಸೂಚನೆ ಪ್ಯಾನಲ್‌ಗೆ ಹೋಗಿ ಮತ್ತು ಎಪಿಎನ್ ಸೆಟ್ಟಿಂಗ್ಸ್ ಹೊಂದಿಸಿ. ಆಕ್ಸೆಸ್ ಪಾಯಿಂಟ್ ನೇಮ್: ಜಿಯೋನೆಟ್ ಎಂದಾಗಿದೆ.

ಸ್ವಯಂಚಾಲಿತವಾಗಿ ಡಾಂಗಲ್ ಎಪಿಎನ್ ಆಯ್ಕೆಮಾಡುತ್ತದೆ

ಸ್ವಯಂಚಾಲಿತವಾಗಿ ಡಾಂಗಲ್ ಎಪಿಎನ್ ಆಯ್ಕೆಮಾಡುತ್ತದೆ

ಕೆಲವೊಂದು ಡಾಂಗಲ್‌ಗಳು ಸ್ವಯಂಚಾಲಿತವಾಗಿ ಎಪಿಎನ್ ಅನ್ನು ಆಯ್ಕೆಮಾಡುತ್ತದೆ. ನಿಮ್ಮ ಬ್ರೌಸರ್ ಅನ್ನು ತೆರೆಯುವಾಗ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ. ಯಾವುದೇ ವೆಬ್ ಪುಟವನ್ನು ಇದು ತೆರೆಯುತ್ತಿಲ್ಲ ಎಂದಾದಲ್ಲಿ, ಎಪಿಎನ್ ಅನ್ನು ಮ್ಯಾನುವಲ್ ಆಗಿ ನೀವು ಹೊಂದಿಸಬೇಕು.

ಡಾಂಗಲ್‌ನೊಂದಿಗೆ ಜಿಯೋ 4ಜಿ ಬಳಸಲು ನೀವು ಸಿದ್ಧ

ಡಾಂಗಲ್‌ನೊಂದಿಗೆ ಜಿಯೋ 4ಜಿ ಬಳಸಲು ನೀವು ಸಿದ್ಧ

ಎಲ್ಲವನ್ನೂ ಸಮಪ್ರಕಾರವಾಗಿ ನಡೆಯಿತು ಎಂದಾದಲ್ಲಿ, ನೀವು ಇಂಟರ್ನೆಟ್‌ಗೆ ಸಂಪರ್ಕವನ್ನು ಪಡೆದುಕೊಳ್ಳುತ್ತೀರಿ ಮತ್ತು ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ರಿಲಾಯನ್ಸ್ ಜಿಯೋ 4ಜಿ ಯನ್ನು ನಿಮಗೆ ಬಳಸಬಹುದಾಗಿದೆ. ಏನಾದರೂ ತೊಂದರೆ ಕಂಡುಬಂದಲ್ಲಿ ಸಿಸ್ಟಮ್ ರಿಬೂಟ್ ಮಾಡಿ ಮತ್ತು ಪುನಃ ಪ್ರಯತ್ನಿಸಿ.

Best Mobiles in India

English summary
Check out the sliders below on how to use Reliance Jio SIM card on any dongle.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X