ವಿಶ್ವದ ಮೊದಲ 5G ಸ್ಮಾರ್ಟ್‌ಪೋನ್‌: ವಿಶೇಷತೆಗಳೇನು..?

ಈ ಪೋನಿನ ಡೌನ್‌ಲೋಡ್‌ ವೇಗ 1GBPS, ಅಂದರೇ ಸೆಕೆಂಡಿಗೆ 1GB ಡೇಟಾವನ್ನು ಡೌನ್‌ಲೋಡ್ ಮಾಡಲಿದೆ.

|

ಈಗಾಗಲೇ ವಿಶ್ವವು 5G ಟೆಕ್ನಾಲಜಿಯನ್ನು ಎದುರು ನೋಡುತ್ತಿದ್ದು, 2020ರ ಒಳಗೆ ಜಾಗತಿಕವಾಗಿ 5G ಬಳಕೆ ಆರಂಭವಾಗಲಿದೆ. ಆದರೆ ಈಗಾಗಲೇ ZTE ಸ್ಮಾರ್ಡ್‌ಪೋನ್ ತಯಾರಕ ಕಂಪನಿ 5G ಸ್ಮಾರ್ಟ್ ಪೋನ್ನ್ನು ಅನಾವರಣಗೊಳಿಸಿದ್ದು, ಈ ಪೋನಿನ ಡೌನ್‌ಲೋಡ್‌ ವೇಗ 1GBPS, ಅಂದರೆ ಸೆಕೆಂಡಿಗೆ 1GB ಡೇಟಾವನ್ನು ಡೌನ್‌ಲೋಡ್ ಮಾಡಲಿದೆ.

ವಿಶ್ವದ ಮೊದಲ 5G ಸ್ಮಾರ್ಟ್‌ಪೋನ್‌: ವಿಶೇಷತೆಗಳೇನು..?

ಓದಿರಿ: ಜಿಯೋ ಪ್ರೈಮ್ ತಿಂಗಳ ರಿಜಾರ್ಜ್ 303 ರೂ. ಅಲ್ಲ, ಕೇವಲ 273 ರೂ....!!

ಸದ್ಯ ನಮ್ಮ ದೇಶದಲ್ಲಿ 4G ಟೆಕ್ನಾಲಜಿ ಭಾರಿ ಸದ್ದು ಮಾಡುತ್ತಿದ್ದು, 4G ವೇಗಕ್ಕೆ ಜನರು ಮಾರುಹೋಗಿದ್ದಾರೆ. ಆದರೆ ನಾವು ನೀವು ಬಳಸುತ್ತಿರುವ 4G ವೇಗವೂ ತೀರಾ ಕಡಿಮೆಯಿದ್ದು, 100 MBPS ರಷ್ಟು ವೇಗವಾಗಿ ಕಾರ್ಯ ನಿರ್ವಹಿಸುವ ಶಕ್ತಿ 4G ತರಂಗಾಂತರಗಳಿಗೆ ಇದೆ ಎನ್ನಲಾಗಿದೆ.

2020ರ ಒಳಗೆ 5G ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳಲು ಮುಂದುವರೆದ ದೇಶಗಳು ಈಗಾಗಲೇ ತಯಾರಿ ಆರಂಭಿಸಿದ್ದು, 5G ವೇಗಕ್ಕೆ ಸರಿಹೊಂದುವ ಗ್ಯಾಜೆಟ್‌ಗಳನ್ನು ಅಭಿವೃದ್ಧಿಪಡಿಸಿಸಲು ನೀಲಿನಕ್ಷೆ ರೂಪಿಸುತ್ತಿವೆ. ಆದರೆ ಇದರಲ್ಲಿ ಒಂದು ಹೆಜ್ಜೆ ಮುಂದೆ ಹೊದ ZTE ಸೆಕೆಂಡಿಗೆ 1GB ಡೇಟಾವನ್ನು ಡೌನ್‌ಲೋಡ್ ಮಾಡುವ 5G ಸ್ಮಾರ್ಟ್‌ಪೊನನ್ನು ತಯಾರಿಸಿ, ಬಿಡುಗಡೆ ಮಾಡಿದೆ.

ಓದಿರಿ: ಸೆಲ್ಪಿ ಇತಿಹಾಸವನ್ನೇ ಬದಲಿಸಲಿರುವ ಓಪ್ಪೋ F3 ಪ್ಲಸ್ ಡುಯಲ್ ಸೆಲ್ಫಿ ಕ್ಯಾಮೆರಾ..!!

ZTE ಈ ನೂತನ ಫೋನಿಗೆ ಗಿಗಾ ಬೈಟ್ ಪೋನೆಂದು ನಾಮಕರಣ ಮಾಡಿದ್ದು, ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಅನಾವರಣಗೊಳಿಸಿದ್ದು, 4G ವೇಗಕ್ಕಿಂತ ಈ ಪೋನು 10 ಪಟ್ಟು ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎಂದು ತಿಳಿಸಿದೆ.

ಈ ಗಿಗಾ ಬೈಟ್ ಸ್ಮಾರ್ಟ್‌ಪೋನಿನಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರ್ಯಾಗನ್ 835 ಪ್ರೋಸೆಸರ್ ಹೊಂದಿದ್ದು, X16 LET ಮೊಡಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಪೋನಿನಲ್ಲಿ 360 ಡಿಗ್ರಿ VR ವಿಡಿಯೋ ಸೆರೆಹಿಡಿಯಬಹುದಾಗಿದ್ದು, ಅಲ್ಲದೇ Hi-Fi ವಿಡಿಯೋ ಮತ್ತು ಆಡಿಯೋಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ವಿಶ್ವದ ಮೊದಲ 5G ಸ್ಮಾರ್ಟ್‌ಪೋನ್‌: ವಿಶೇಷತೆಗಳೇನು..?

ಓದಿರಿ: ಭಾರತ ಆಪ್‌ ಡೆವಲಪರ್‌ಗಳ ರಾಜಧಾನಿಯಾಗಲಿದೆ: ಯಾಹೂ ಫ್ಲಾರಿ

ಈಗಾಗಲೇ 5G ಟೆಕ್ನಾಲಜಿಗೆ ಸಪೋರ್ಟ್‌ ಮಾಡುವ ಸಾಧನಗಳ ತಯಾರಿಕೆಯಲ್ಲಿ ZTE ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಅಲ್ಲದೇ ತರಂಗಾಂತರಗಳ ಸ್ವೀಕರಿಸಲು ಮತ್ತು ಕಳುಹಿಸಲು ಬೇಕಾದ ಹಾರ್ಡ್‌ವೇರ್‌ಗಳ ತಯಾರಿಕೆಯನ್ನು ಈಗಾಗಲೇ ಆರಂಭಿಸಿದೆ ಎನ್ನಲಾಗಿದ್ದು, ಅದಕ್ಕೆ ಸಾಕ್ಷಿಯಾಗಿ ಈ ಪೋನು ಬಿಡುಗಡೆಯಾಗಿದೆ.

Best Mobiles in India

Read more about:
English summary
ZTE unveiled a phone that supports 5G technology and is capable of catching the speed of up to 1GB Per second. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X