Home
ಮೊಬೈಲ್

ಶಿಯೋಮಿ ಫೋನ್‌ ಖರೀದಿಗೆ ಇದುವೇ ಬೆಸ್ಟ್‌ ಟೈಮ್‌!.ಆಫರ್ ನಾಳೆ ಮುಕ್ತಾಯ!

ಸದಾ ಒಂದಿಲ್ಲೊಂದು ಆಫರ್‌ಗಳನ್ನು ಪರಿಚಯಿಸುತ್ತಲೇ ಸಾಗಿರುವ ಜನಪ್ರಿಯ ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಇದೀಗ 'ಗ್ರೇಟ್‌ ಡೀಲ್ಸ್‌ ಆನ್ Mi ಫೋನ್ಸ್‌ ಮೇಳವನ್ನು ಆಯೋಜಿಸಿದ್ದು, ಶಿಯೋಮಿ ಗ್ರಾಹಕರನ್ನು ಸೆಳೆಯುತ್ತಿದೆ. ಕಂಪನಿಯ ಸ್ಮಾರ್ಟ್‌ಪೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದ್ದು, ಹೀಗಾಗಿ ಶಿಯೋಮಿ ಸ್ಮಾರ್ಟ್‌ಪೋನ್‌ಗಳ ಖರೀದಿಗೆ ಇದುವೇ ಬೆಸ್ಟ್ ಟೈಮ್ ಎನ್ನುವಂತಾಗಿದೆ.

ಶಿಯೋಮಿ ಫೋನ್‌ ಖರೀದಿಗೆ ಇದುವೇ ಬೆಸ್ಟ್‌ ಟೈಮ್‌!.ಆಫರ್ ನಾಳೆ ಮುಕ್ತಾಯ!

ಹೌದು, ಫ್ಲಿಪ್‌ಕಾರ್ಟ್‌ 'ಗ್ರೇಟ್‌ ಡೀಲ್ಸ್‌ ಆನ್ Mi ಫೋನ್ಸ್‌ ಮೇಳವು ಎರಡು ದಿನಗಳ ಕಾಲ ನಡೆಯಲಿದ್ದು, ಈ ಮೇಳವು ಇದೇ ಏಪ್ರಿಲ್ 11 ರಂದು ಆರಂಭವಾಗಿದ್ದು, ಇದೇ ಏಪ್ರಿಲ್ 13 (ನಾಳೆ)ರಂದು ಕೊನೆಗೊಳ್ಳಲಿದೆ. ಶಿಯೋಮಿಯ ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ಡಿಸ್ಕೌಂಟ್ ಲಭ್ಯವಾಗಲಿದ್ದು, ಎಕ್ಸ್‌ಚೇಂಜ್ ಮತ್ತು ಬ್ಯಾಂಕ್ ಆಫರ್‌ಗಳು ದೊರೆಯಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಮೇಳದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿರುವ ಡಿಸ್ಕೌಂಟ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ರೆಡ್ಮಿ ಗೋ

ರೆಡ್ಮಿ ಗೋ

ಹೊಸದಾಗಿ ಲಾಂಚ್ ಆಗಿರುವ ರೆಡ್ಮಿ ಗೋ ಸ್ಮಾರ್ಟ್‌ಫೋನ್ 5999ರೂ.ಗಳ ಬೆಲೆಯನ್ನು ಹೊಂದಿದ್ದು, ಆದರೆ ಫ್ಲಿಪ್‌ಕಾರ್ಟ್‌ ಮೇಳದಲ್ಲಿ ಸುಮಾರು ಒಂದು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆದಿದ್ದು, ಹೀಗಾಗಿ 4999ರೂ.ಗಳಿಗೆ ದೊರೆಯಲಿದೆ. ಈ ಫೋನಿಗೆ ಕಾಯುವ ಅಗತ್ಯವಿಲ್ಲ ಸಂಪೂರ್ಣ ಲಭ್ಯತೆ ಇದೆ.

ರೆಡ್ಮಿ 6

ರೆಡ್ಮಿ 6

ಕಂಪನಿಯ ರೆಡ್ಮಿ 6 ಸ್ಮಾರ್ಟ್‌ಫೋನ್ ಪ್ರಸ್ತುತ ಎರಡು ವೇರಿಯಂಟ್ ಮಾದರಿಗಳಲ್ಲಿ ಲಭ್ಯವಿದ್ದು, ಎರಡು ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ 2000ರೂ.ಗಳನ್ನು ಡಿಸ್ಕೌಂಟ್‌ ಮಾಡಲಾಗಿದೆ. ಮೇಳದಲ್ಲಿ 32GB ವೇರಿಯಂಟ್ 6999ರೂ.ಗಳಿಗೆ ದೊರೆಯಲಿದೆ. ಹಾಗೇ 64GB ವೇರಿಯಂಟ್ 8499ರೂ.ಗಳಿಗೆ ಗ್ರಾಹಕರ ಕೈ ಸೇರಲಿದೆ.

ರೆಡ್ಮಿ 6 ಪ್ರೋ

ರೆಡ್ಮಿ 6 ಪ್ರೋ

ಕಂಪನಿಯ ಜನಪ್ರಿಯ ರೆಡ್ಮಿ 6 ಪ್ರೋ ಸ್ಮಾರ್ಟ್‌ಫೋನ್ 6GB RAM ಮತ್ತು 4GB RAM ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಈ ಎರಡು ವೇರಿಯಂಟ್‌ಗಳ ಮೇಲೆ ಮೇಳದಲ್ಲಿ 4000ರೂ.ಗಳ ರಿಯಾಯಿತಿ ನೀಡಲಾಗಿದೆ. ಹೀಗಾಗಿ 6GB RAM ವೇರಿಯಂಟ್ 13999ರೂ ಮತ್ತು 4GB RAM ವೇರಿಯಂಟ್‌ 11999 ರೂಪಾಯಿಗಳಿಗೆ ದೊರೆಯಲಿದೆ.

ರೆಡ್ಮಿ 5 ಪ್ರೋ

ರೆಡ್ಮಿ 5 ಪ್ರೋ

ಶಿಯೋಮಿ ರೆಡ್ಮಿ 5 ಪ್ರೋ ಸ್ಮಾರ್ಟ್‌ಫೋನ್ 6GB RAM ಮತ್ತು 4GB RAM ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, 4000ರೂ.ಗಳ ರಿಯಾಯಿತಿಯನ್ನು ಎರಡು ವೇರಿಯಂಟ್‌ಗಳ ಮೇಲೆ ನೀಡಲಾಗಿದೆ. ಹೀಗಾಗಿ ಮೇಳದಲ್ಲಿ 6GB RAM ವೇರಿಯಂಟ್ 11999ರೂ ಮತ್ತು 4GB RAM ವೇರಿಯಂಟ್‌ 10999 ರೂಪಾಯಿಗಳಿಗೆ ದೊರೆಯಲಿದೆ.

ರೆಡ್ಮಿ Y2

ರೆಡ್ಮಿ Y2

ಶಿಯೋಮಿಯ ರೆಡ್ಮಿ Y2 ಸ್ಮಾರ್ಟ್‌ಪೋನ್ 3GB RAM ಮತ್ತು 32GB ವೇರಿಯಂಟ್ 7999ರೂ.ಗಳಿಗೆ ದೊರೆಯಲಿದ್ದು, ಹಾಗೇ 3GB RAM ಮತ್ತು 64GB ವೇರಿಯಂಟ್ 9999ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನಿನ ಮೊದಲಿನ ಬೆಲೆಯ ಮೇಲೆ ಒಟ್ಟು 3500ರೂ.ಗಳ ಡಿಸ್ಕೌಂಟ್‌ ನೀಡಲಾಗಿದೆ.

ಫೊಕೊ ಎಫ್ 1

ಫೊಕೊ ಎಫ್ 1

ಫೊಕೊ ಎಫ್ 1 ಸ್ಮಾರ್ಟ್‌ಫೋನ್ ಸುಮಾರು 4000ರೂ.ಗಳ ಡಿಸ್ಕೌಂಟ್ ಪಡೆದಿದ್ದು, ಮೂರು ವೇರಿಯಂಟ್‌ಗಳನ್ನು ಹೊಂದಿದೆ. 6GB RAM+64GB ವೇರಿಯಂಟ್ 17999ರೂ.ಗಳಿಗೆ, 6GB RAM+128GB ವೇರಿಯಂಟ್ 20999ರೂ.ಗಳಿಗೆ ಮತ್ತು 8GB RAM+256GB ವೇರಿಯಂಟ್ 24999ರೂ.ಗಳಿಗೆ ಲಭ್ಯವಾಗಲಿದೆ.

Best Mobiles in India

English summary
Xiaomi Poco F1, Redmi Note 6 Pro, Redmi 6 sell at lowest ever prices on Flipkart today.to know more visit to kannada,gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+