Subscribe to Gizbot

4,900 ರೂಗಳಿಗೆ ಶಿಯೋಮಿ ರೆಡ್‌ಮಿ 4 ಸ್ಮಾರ್ಟ್‌ಪೋನ್: 2GB RAM, 13MP ಕ್ಯಾಮೆರಾ ಇನ್ನು ಹಲವು..!!!

Written By:

ಚೀನಾ ಮೂಲದ ಶಿಯೋಮಿ ಕಂಪನಿ ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದು, 10 ಸಾವಿರ ರೂಗಳಿಗೆ ಟಾಪ್ ಎಂಡ್ ಪೋನಿನಲ್ಲಿರುವ ಗುಣಮಟ್ಟವನ್ನು ತನ್ನ ಪೋನಿನಲ್ಲಿ ನೀಡಿ ಗ್ರಾಹಕರನ್ನು ಖುಷಿ ಪಡಿಸಿದ ರೀತಿಯಲ್ಲೇ ಸದ್ಯ ಆರಂಭಿಕ ಬೆಲೆಯ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಬಿಡುಗೆಡೆ ಮಾಡಿ ಮತ್ತಷ್ಟು ಲಾಭ ಮಾಡುವ ಸನಿಹದಲ್ಲಿದೆ.

4,900 ರೂಗಳಿಗೆ ಶಿಯೋಮಿ ರೆಡ್‌ಮಿ 4 ಸ್ಮಾರ್ಟ್‌ಪೋನ್

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ತನ್ನ ಮಾರಾಟ ತಂತ್ರವನ್ನೇ ಬೇರೆ ಮಾದರಿಯಲ್ಲಿ ರೂಪಿಸಿರುವ ಶಿಯೋಮಿ, ಜಾಹೀರಾತಿಗಾಗಿ ಹೆಚ್ಚಿನ ಹಣವನ್ನು ವ್ಯರ್ಥಮಾಡದೆ ಕಡಿಮೆ ಬೆಲೆಗೆ ಉತ್ತಮ ಪೋನುಗಳನ್ನು ನೀಡಿ, ಗ್ರಾಹಕರೇ ತನ್ನ ಬ್ರಾಂಡ್ ಪ್ರಮೋಷನ್ ಮಾಡುವ ರೀತಿಯಲ್ಲಿ ಮಾಡಿಕೊಳ್ಳುತ್ತಿದ್ದು, ಸದ್ಯ ಕೇವಲ 5 ಸಾವಿರಕ್ಕೆ ಉತ್ತಮ ಸ್ಮಾರ್ಟ್‌ಪೋನನ್ನು ನೀಡಲು ಮುಂದಾಗಿದ್ದು, ಇಷ್ಟು ದಿನ ಫ್ಲೀಪ್‌ಕಾರ್ಟ್‌ನಲ್ಲಿ ಮಾತ್ರ ಮೊಬೈಲ್ ಸೇಲ್ ಮಾಡುತ್ತಿದ್ದ ಶಿಯೋಮಿ ಈ ಬಾರಿ, ಅಮೇಜಾನ್ ಕಡೆಗೆ ಮುಖ ಮಾಡಿದ್ದು, ಇದೇ ಮಾರ್ಚ್ 20 ರಂದು ಬಿಡುಗಡೆಯಾಗಲಿದೆ.

ಓದಿರಿ: 3GB RAM ಹೊಂದಿರುವ ಕೂಲ್‌ಪ್ಯಾಡ್ ನೋಟ್ 5 ಲೈಟ್‌: ಬೆಲೆ ರೂ.8,199 ಮಾತ್ರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಅಮೆಜಾನ್‌ಗಾಗಿಯೇ ಶಿಯೋಮಿ ರೆಡ್‌ಮಿ 4 A:

ಅಮೆಜಾನ್‌ಗಾಗಿಯೇ ಶಿಯೋಮಿ ರೆಡ್‌ಮಿ 4 A:

ಶಿಯೋಮಿ ಕಂಪನಿ ನವೆಂಬರ್ ನಲ್ಲೇ ರೆಡ್‌ಮಿ 4 ಪೋನುಗಳನ್ನು ಬಿಡುಗಡೆ ಮಾಡುವುದಾಗಿ ಘೋಷನೆ ಮಾಡಿತ್ತು, ಅದರಂತೆ ಈಗ ರೆಡ್‌ಮಿ 4 ಮತ್ತು ರೆಡ್‌ಮಿ 4A ಎಂಬ ಎರಡು ಪೋನುಗಳನ್ನು ಅಮೇಜಾನ್‌ನಲ್ಲಿ ಮಾರಾಟ ಮಾಡಲಿದ್ದು, ಈ ಪೋನುಗಳನ್ನು ಅಮೆಜಾನ್‌ಗಾಗಿಯೇ ಶಿಯೋಮಿ ತಯಾರಿಸಿದೆ ಎನ್ನಲಾಗಿದೆ. ಇದಕ್ಕಾಗಿಯೇ A ಎಂದು ನಾಮಕರಣ ಮಾಡಲಾಗಿದೆ.

ರೆಡ್‌ಮಿ 4 ವಿಶೇಷತೆಗಳು:

ರೆಡ್‌ಮಿ 4 ವಿಶೇಷತೆಗಳು:

ರೆಡ್‌ಮಿ 4 ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ 720x1280 p ರೆಸಲ್ಯೂಷನ್ ಹೊಂದಿದೆ. ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್ ಇದರಲ್ಲಿದೆ. ಇದರಲ್ಲಿ 2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಇದರಲಿದೆ. ಅಲ್ಲದೇ 13 MP ಹಿಂಬದಿ ಕ್ಯಾಮರೆ ಮತ್ತು ಮಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಉತ್ತಮ ಬ್ಯಾಟರಿ ಬ್ಯಾಕಪ್‌ಗಾಗಿ 4100mAh ಅಳವಡಿಸಲಾಗಿದೆ. ರೆಡ್‌ಮಿ 4A ಸ್ಮಾರ್ಟ್‌ಪೋನ್ 4,900 ರೂ.ಗಳಾಗಲಿದೆ.

ರೆಡ್‌ಮಿ 4 A ವಿಶೇಷತೆಗಳು:

ರೆಡ್‌ಮಿ 4 A ವಿಶೇಷತೆಗಳು:

ರೆಡ್‌ಮಿ 4 A ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ 720x1280 p ರೆಸಲ್ಯೂಷನ್ ಹೊಂದಿದೆ. ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಇದರಲ್ಲಿದೆ.2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಇದರಲಿದೆ. ಅಲ್ಲದೇ 13 MP ಹಿಂಬದಿ ಕ್ಯಾಮರೆ ಮತ್ತು ಮಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. 3120mAh ಅಳವಡಿಸಲಾಗಿದೆ. ರೆಡ್‌ಮಿ 4 ಬೆಲೆ 6,900 ರೂ.ಗಳಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi has sent out invites for a launch event on Monday, and the company is now dropping hints on social media running up to launch. to know more visitt kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot