3GB RAM ಹೊಂದಿರುವ ಕೂಲ್‌ಪ್ಯಾಡ್ ನೋಟ್ 5 ಲೈಟ್: ಬೆಲೆ ರೂ.8,199 ಮಾತ್ರ
ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕೂಲ್‌ಪಾಡ್ ನೋಟ್ 5 ಲೈಟ್ ಸ್ಮಾರ್ಟ್‌ಪೋನು ಅಮೇಜಾನ್‌ನಲ್ಲಿ ಲಭ್ಯವಿದೆ.
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ ಕಂಪನಿಗಳ ಭರಾಟೆ ಜೋರಾಗಿದ್ದು, ಇದೇ ಸಾಲಿಗೆ ಸೇರಲು ಬಂದಿದೆ ಕೂಲ್‌ಪ್ಯಾಡ್‌ನ ಹೊಸದೊಂದು ಬಜೆಟ್ ಬೆಲೆಯ ಸ್ಮಾರ್ಟ್‌ಪೋನು.

ಇದನ್ನು ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!
ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕೂಲ್‌ಪಾಡ್ ನೋಟ್ 5 ಲೈಟ್ ಸ್ಮಾರ್ಟ್‌ಪೋನು ಅಮೇಜಾನ್‌ನಲ್ಲಿ ಲಭ್ಯವಿದ್ದು, 8,199 ರೂಗಳಿಗೆ ಮಾರಾಟವಾಗಲಿದೆ. ಮಾರ್ಚ್ 21 ರಿಂದ ಸೇಲ್ ಆರಂಭವಾಗಲಿದೆ.
ಓದಿರಿ: ಆಂಡ್ರಾಯ್ಡ್ ಲಾಕ್ ಓಪನ್ ಮಾಡಿದ್ರೂ ದುಡ್ಡು..! ವಿಚಿತ್ರವಾದ್ರೂ ಸತ್ಯ..!

5 ಇಂಚಿನ HD ಡಿಸ್‌ಪ್ಲೇ:
ಇಂದು ಬಿಡುಗಡೆಗೊಂಡಿರುವ ಕೂಲ್‌ಪಾಡ್ ನೋಟ್ 5 ಲೈಟ್ ಸ್ಮಾರ್ಟ್‌ಪೋನು 5 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು, 720p ರೆಸಲ್ಯೂಷನ್ ಇರುವ ಈ ಡಿಸ್‌ಪ್ಲೇಗೆ 2.5D ಕರ್ವಡ್ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದ್ದು, ಸುಲಭವಾಗಿ ಡಿಸ್‌ಪ್ಲೇ ಒಡೆಯುವುದಿಲ್ಲ.

3GB RAM/ 16 GB ROM
ಕೂಲ್‌ಪಾಡ್ ನೋಟ್ 5 ಲೈಟ್ ಸ್ಮಾರ್ಟ್‌ಪೋನಿನಲ್ಲಿ 3GB RAM ಅಳವಡಿಸಲಾಗಿದ್ದು, 16 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ, ಇದಲ್ಲದೆ ಕಾರ್ಡ್ ಮೂಲಕ 64GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

1 GHz ಪ್ರೋಸೆಸರ್:
ಕೂಲ್‌ಪಾಡ್ ನೋಟ್ 5 ಲೈಟ್ ಸ್ಮಾರ್ಟ್‌ಪೋನು 1 GHz ವೇಗದ ಮಿಡಿಯಾಟೆಕ್ MT6735CP ಪ್ರೋಸೆಸರ್ ಹೊಂದಿದ್ದು, 720 ಗ್ರಾಫಿಕ್ಸ್ ಯೂನಿಟ್ ಸಹ ಈ ಪೋನಿನಲ್ಲಿದೆ.

13 MP ಕ್ಯಾಮೆರಾ:
ಕೂಲ್‌ಪಾಡ್ ನೋಟ್ 5 ಲೈಟ್ ಸ್ಮಾರ್ಟ್‌ಪೋನಿನ ಹಿಂಭಾದಲ್ಲಿ 13 MP ಕ್ಯಾಮೆರಾ ಇದ್ದು, ಜೊತೆಗೆ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ. ಮುಂಭಾಗದಲ್ಲಿ 8 MP ಕ್ಯಾಮರಾವನ್ನು ಅಳವಡಿಸಲಾಗಿದೆ. ಇದೊರಂದಿಗೆ 2500 mAh ಬ್ಯಾಟರಿ ಸಹ ಇದೆ.


Click it and Unblock the Notifications








