ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

Written By:

ದೇಶಿಯ ಟೆಲಿಕಾಂ ವಲಯದಲ್ಲಿ ಹೊಸದೊಂದು ಕ್ರಾಂತಿಗೆ ಕಾರಣವಾಗಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ, ಜಿಯೋ ಸಾರಿದ ಸಮರಕ್ಕೆ ಉತ್ತರ ನೀಡುವ ಸಲುವಾಗಿ ತೊಡೆತಟ್ಟಿದ ಭಾರ್ತಿ ಏರ್‌ಟೆಲ್‌ಗೆ ಸರಿಯಾದ ಉತ್ತರ ನೀಡಿರುವ ಸರಕಾರಿ ಸ್ವಾಮ್ಯದ BSNL ತನ್ನ ಇತಿಹಾಸದಲ್ಲೇ ಅತ್ಯುತ್ತಮ ಆಫರ್ ಅನ್ನು ಘೋಷಣೆ ಮಾಡಿದೆ.

 BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ಓದಿರಿ:  ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಸರಕಾರಿ ಸ್ವಾಮ್ಯದ BSNL 339 ರೂಗಳಿಗೆ ಪ್ರತಿ ನಿತ್ಯ 2GB ಡೇಟಾ ಮತ್ತು ಅನಿಯಮಿತ ಕರೆ ಮಾಡುವ ಆಫರ್‌ ಘೋಷಣೆ ಮಾಡಿದ್ದು, ಇದು BSNL ಇತಿಹಾಸದಲ್ಲೇ ಅತ್ಯತ್ತಮ ಆಫರ್ ಎನ್ನಲಾಗಿದೆ.

ಓದಿರಿ: BSLN ನೀಡಿದ 339 ರೂ. 56 GB ಡೇಟಾ ಆಫರ್‌ನಲ್ಲಿದೆ ಮೂರು ತೊಂದರೆಗಳು..!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ BSNL:

ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ BSNL:

ರಿಲಯನ್ಸ್ ಜಿಯೋ 6 ತಿಂಗಳ ಉಚಿತ ಸೇವೆಯ ನಂತರ ಪ್ರತಿ ತಿಂಗಳು 303 ರೂಗಳಿಗೆ 28 ದಿನಗಳ ಕಾಲ ಪ್ರತಿ ನಿತ್ಯ 1GB 4G ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶ ನೀಡಿತ್ತು. ಇದಕ್ಕೆ ಪ್ರತಿಯಾಗಿ ಏರ್‌ಟೆಲ್ 345ಕ್ಕೆ 28 ದಿನಗಳ ಕಾಲ ಪ್ರತಿ ನಿತ್ಯ 1GB 4G ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಆಫರ್ ನೀಡಿತ್ತು.

 BSNL 339 ರೂ ಪ್ಲಾನ್‌:

BSNL 339 ರೂ ಪ್ಲಾನ್‌:

BSNL 339 ರೂಗಳಿಗೆ ತನ್ನ ಗ್ರಾಹಕರಿಗೆ 28 ದಿನಗಳ ಕಾಲ ಪ್ರತಿ ನಿತ್ಯ ಯಾವುದೇ ನೆಟ್‌ವರ್ಕ್್ಗೆ ಉಚಿತ ಕರೆ ಮಾಡುವ ಅವಕಾಶ ಮಾಡಿಕೊಟ್ಟಿದೆ ಇಲ್ಲದೇ ಬೇರೆ ಕಂಪನಿಗಳು ಪ್ರತಿ ದಿನ 1GB ಡೇಟಾವನ್ನು ನೀಡಿದರೆ, BSNL ಪ್ರತಿ ನಿತ್ಯ ಎರಡು ಜಿಬಿ ಅಂದರೆ ತಿಂಗಳಿಗೆ (28 ದಿನ) 56 GB ಡೇಟಾವನ್ನು ನೀಡಲು ಮುಂದಾಗಿದೆ.

ಇದೇ ಬೆಸ್ಟ್ ಆಫರ್:

ಇದೇ ಬೆಸ್ಟ್ ಆಫರ್:

ಜಿಯೋದಲ್ಲಿ ಆಗಲಿ, ಏರ್‌ಟೆಲ್‌ನಲ್ಲಾಗಲಿ ಗ್ರಾಹಕರಿಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತಿಲ್ಲ. ಏರ್‌ಟೆಲ್ ಬೆಳಿಗ್ಗೆ 500 MB ರಾತ್ರಿ 500 MB ಡೇಟಾ ನೀಡುವುದುದಾಗಿ ಹೇಳಿದೆ. ಜಿಯೋ ಸಹ ಒಂದೇ GB ಡೇಟಾ ನೀಡಲಿದ್ದು, ಹೆಚ್ಚಿಗೆ ಬೇಕಾದರೆ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ. ಆದರೆ BSNLನಲ್ಲಿ ಪ್ರತಿ ನಿತ್ಯ 2GB ಡೇಟಾ ಸಿಗುತ್ತಿದೆ. ಹಾಗಾಗೀ ಇದೇ ಬೆಸ್ಟ್ ಆಫರ್.

ಜಿಯೋ ಎಫೆಕ್ಟ್..ಏರ್‌ಟೆಲ್‌ಗೆ ಬಂದಿರುವ ದುಸ್ಥಿತಿ ಎಂತದ್ದು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Rs 339 plan will also be revamped where previously it used to offer unlimited calls to any network and 2GB of data for 28 days, to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot