ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲಿದೆ 6GB RAMನ 'ಕ್ಸೊಲೊ ZR' ಸ್ಮಾರ್ಟ್‌ಫೋನ್‌!

|

ಸ್ಮಾರ್ಟ್‌ಫೋನ್‌ ಕ್ಷೇತ್ರ ವಿಶಾಲವಾಗಿ ಬೆಳೆಯುತ್ತಿದ್ದು, ಹಲವು ಕಂಪನಿಗಳು ಸ್ಮಾರ್ಟ್‌ಪೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತವೆ. ಅವುಗಳಲ್ಲಿ ಕ್ಸೊಲೊ ಕಂಪನಿಯ ಸ್ಮಾರ್ಟ್‌ಪೋನ್‌ಗಳು ಕಡಿಮೆ ಬೆಲೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರುವ ಕಂಪನಿ ಇದೀಗ 6GB RAM ಸ್ಮಾರ್ಟ್‌ಫೋನ್‌ ರಿಲೀಸ್‌ ಮಾಡಲು ಮುಂದಾಗಿದೆ.

ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲಿದೆ 6GB RAMನ 'ಕ್ಸೊಲೊ ZR' ಸ್ಮಾರ್ಟ್‌ಫೋನ್‌!

ಹೌದು, ಕ್ಸೊಲೊ ಸ್ಮಾರ್ಟ್‌ಫೋನ್‌ ಕಂಪನಿ 'ಕ್ಸೊಲೊ ZR' ಹೆಸರಿನ ಹೊಸ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲು ಉತ್ಸುಕವಾಗಿದೆ. ಇದೇ ಏಪ್ರಿಲ್ 25ರಂದು ರಿಲೀಸ್‌ ಮಾಡಲಿದ್ದು, ಈ ಸ್ಮಾರ್ಟ್‌ಫೋನ್‌ ಜನಪ್ರಿಯ ಇ ಕಾಮರ್ಸ್ ಜಾಲತಾಣ ಅಮೆಜಾನ್ ನಲ್ಲಿ ಲಭ್ಯವಾಗಲಿದೆ. ಡ್ಯುಯಲ್‌ ಕ್ಯಾಮೆರಾ ಆಯ್ಕೆಯೊಂದಿಗೆ ಇತರೆ ಅತ್ಯುತ್ತಮ ಫೀಚರ್ಸ್‌ಗಳನ್ನು ಸಹ ಒಳಗೊಂಡಿದ್ದು, ಕೈಗೆಟುವ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲಿದೆ 6GB RAMನ 'ಕ್ಸೊಲೊ ZR' ಸ್ಮಾರ್ಟ್‌ಫೋನ್‌!

ತನ್ನ ವರ್ಗದಲ್ಲಿಯೇ ಉತ್ತಮ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, 'AI ಸ್ಟುಡಿಯೊ ಮೋಡ್' ಆಯ್ಕೆಯನ್ನು ನೀಡಿರುವುದರಿಂದ ಸೆಲ್ಫಿ ಫೋಟೊಗಳು ಉತ್ತಮವಾಗಿ ಮೂಡಿಬರಲಿವೆ. ರೇರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಫೇಸ್‌ ಅನ್‌ಲಾಕ್ ಸೆಕ್ಯುರಿಟಿ ಆಯ್ಕೆಯನ್ನು ಇದು ಒಳಗೊಂಡಿರಲಿದೆ. ಹಾಗಾದರೇ ಕ್ಸೊಲೊ ZR' ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಕ್ಸೊಲೊ ZR' ಸ್ಮಾರ್ಟ್‌ಫೋನ್ 1520 X 720 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.22 ಇಂಚಿನ ಸಂಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಹಾಗೂ ಡಿಸ್‌ಪ್ಲೇಯು ನಾಚ್‌ ರಚನೆಯಲ್ಲಿರಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಮೀಡಿಯಾ ಟೆಕ್‌ ಆಕ್ಟಾಕೋರ್‌ ಹಿಲಿಯೊ P22 (MT6762) ಪ್ರೊಸೆಸರ್‌ 'ಕ್ಸೊಲೊ ZR' ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 650MHz IMG PowerVR GE8320 GPU ಸಹ ಇರಲಿದೆ. ತನ್ನ ವರ್ಗದಲ್ಲಿಯೇ ಇದು ಉತ್ತಮ ಪ್ರೊಸೆಸರ್‌ ಆಗಿದ್ದು, ಮಲ್ಟಿಟಾಸ್ಕ್ ಕೆಲಸಗಳನ್ನು ನಿರ್ವಹಿಸಲಿದೆ.

ಮೆಮೊರಿ

ಮೆಮೊರಿ

ಕ್ಸೊಲೊ ZR ಸ್ಮಾರ್ಟ್‌ಫೋನ್ 6GB RAM ಹೊಂದಿರುವ ಜೊತೆಗೆ 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು, ಸ್ಮಾರ್ಟ್‌ಪೋನ್‌ ವೇಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. 6GB RAM ವೇರಿಯಂಟ್‌ ಮಾದರಿಯಲ್ಲಿ ದೊರೆಯಲಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಮಾರ್ಟ್‌ಪೋನ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾಗಳನ್ನು ನೀಡಲಾಗಿದೆ. ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 5 ಮೆಗಾಪಿಕ್ಸಲ್‌ನಲ್ಲಿದೆ. ಹಾಗೇ ಸೆಲ್ಫಿಗಾಗಿ 16 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ

ಬ್ಯಾಟರಿ

ಕ್ಸೊಲೊ ZR ಸ್ಮಾರ್ಟ್‌ಫೋನ್‌ 3,260mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಒಂದು ದಿನ ಬಾಳಿಕೆ ಬರುವ ಶಕ್ತಿಯನ್ನು ಹೊಂದಿದೆ. ಫಾಸ್ಟ್‌ ಚಾರ್ಜರ್‌ ಸೌಲಭ್ಯವನ್ನು ಒದಗಿಸಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ಯುಎಸ್‌ಬಿ ಚಾರ್ಜಿಂಗ್ ಕೇಬಲ್ ನೀಡಲಾಗಿರುತ್ತದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಕ್ಸೊಲೊ ZR ಸ್ಮಾರ್ಟ್‌ಫೋನಿನಲ್ಲಿ ವೈ-ಫೈ 802.11 ಇರಲಿದ್ದು, ಬ್ಲೂಟೂತ್ 5.0 ಸಹ ಹೊಂದಿರಲಿದೆ. ಹಾಗೇ ಜಿಪಿಎಸ್‌ ಆಯ್ಕೆಯೊಂದಿಗೆ 3.5mm ಹೆಡ್‌ಫೋನ್‌ ಜಾಕ್‌ ಆಯ್ಕೆಗಳು ಇರಲಿವೆ. 4G VoLTE ನೆಟ್‌ವರ್ಕ್‌ ಇರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಕ್ಸೊಲೊ ZR ಭಾರತೀಯ ಮಾರುಕಟ್ಟೆಯಲ್ಲಿ ಇದೇ 25ರಂದು ಲಾಂಚ್‌ ಆಗಲಿದ್ದು, ಅಮೆಜಾನ್ ನಲ್ಲಿ ಗ್ರಾಹಕರ ಖರೀದಿದೆ ಲಭ್ಯವಾಗಲಿದೆ. ಇದರ ಬೆಲೆಯನ್ನು ಕಂಪನಿಯು ಬಹಿರಂಗ ಪಡಿಸಿಲ್ಲ. ಆದರೆ ಮಿಡ್‌ರೇಂಜ್‌ನಲ್ಲಿಯೇ ದೊರೆಯಲಿದೆ ಎನ್ನಲಾಗುತ್ತಿದೆ.

Best Mobiles in India

English summary
Xolo ZX with 6GB RAM set to launch on April 25; will be available via Amazon India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X