ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ 5 ಪವರ್‌ಫುಲ್ ಬ್ಯಾಟರಿ ಸ್ಮಾರ್ಟ್‌ಫೋನ್‌ಗಳು.!

|

ಸ್ಮಾರ್ಟ್‌ಫೋನ್‌ಗೆ ಬ್ಯಾಟರಿಯೇ ಜೀವಾಳವಾಗಿದ್ದು, ಸ್ಮಾರ್ಟ್‌ಫೋನ್‌ಗೆ ದೀರ್ಘಕಾಲ ಬಾಳಿಕೆ ಒದಗಿಸುವ ಪವರ್‌ಫುಲ್‌ ಬ್ಯಾಟರಿಯ ಅವಶ್ಯಕತೆ ಇದೆ. ಕಡಿಮೆಯೆಂದರು ಒಂದು ದಿನದ ಮಟ್ಟಗೆ ಬಾಳಿಕೆ ಬರುವ ಸಾಮರ್ಥ್ಯದ ಬ್ಯಾಟರಿ ಇರುವ ಸ್ಮಾರ್ಟ್‌ಫೋನ್‌ ಖರೀದಿಸಲು ಗ್ರಾಹಕ ಮುಂದಾಗುತ್ತಾನೆ. ಹೀಗಾಗಿ ಪ್ರಸ್ತುತ ಮಾರುಕಟ್ಟೆಗೆ ಬರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಬ್ಯಾಟರಿ ಬಾಳಿಕೆಯ ಸಾಮರ್ಥ್ಯ ಒದಗಿಸಲಾಗುತ್ತಿದೆ.

ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ 5 ಪವರ್‌ಫುಲ್ ಬ್ಯಾಟರಿ ಸ್ಮಾರ್ಟ್‌ಫೋನ್‌ಗಳು.!

ಸ್ಮಾರ್ಟ್‌ಫೋನ್‌ಗಳಲ್ಲಿ ಇದ್ದ ಮೇಲೆ ಬಳಸಲೆಬೇಕು ಅಲ್ಲವೇ. ಆದರೆ ಶಾರ್ಪ್‌ ಡಿಸ್‌ಪ್ಲೇ, ಸತತ ಇಂಟರ್ನೆಟ್‌ ಬಳಕೆ, ಗೇಮ್ಸ್‌, ಬ್ಯಾಟರಿ ಹಿರುವ ಕೆಲವು ಆಪ್‌ಗಳು ಇವುಗಳ ಬಳಕೆಯಿಂದ ಸ್ಮಾರ್ಟ್‌ಫೋನ್‌ಗಳಲ್ಲಿ ನಿರೀಕ್ಷಿಸಿದಷ್ಟು ಬ್ಯಾಟರಿಯ ಬಾಳಿಕೆ ಬರುವುದಿಲ್ಲ. ಈಗಾಗಲೇ ಸ್ಯಾಮ್‌ಸಂಗ್‌ ಸೇರಿದಂತೆ ಕೆಲವು ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ 5000mAh ಸಾಮರ್ಥ್ಯದವರೆಗೂ ಬ್ಯಾಟರಿ ಶಕ್ತಿಯನ್ನು ನೀಡಿವೆ.

ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ 5 ಪವರ್‌ಫುಲ್ ಬ್ಯಾಟರಿ ಸ್ಮಾರ್ಟ್‌ಫೋನ್‌ಗಳು.!

ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳು ದೀರ್ಘಕಾಲ ಬಾಳಿಕೆ ಒದಗಿಸುವ ಬ್ಯಾಟರಿಗಳತ್ತ ಹೆಚ್ಚಿನ ಗಮನ ನೀಡುತ್ತಿದ್ದು, ಬಜೆಟ್‌ ದರದಲ್ಲಿ ಅಧಿಕ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸ್ಮಾರ್ಟ್‌ಫೋನಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಹಾಗಾದರೇ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಟಾಪ್‌ ಐದು ಬಿಗ್‌ ಬ್ಯಾಟರಿ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ20

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ20

6.3 ಇಂಚಿನ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರುವ ಗ್ಯಾಲ್ಯಾಕ್ಸಿ ಎಂ20 ಸ್ಮಾರ್ಟ್‌ಪೋನಿನಲ್ಲಿ Exynos 7904 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. 5,000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒದಗಿಸಲಾಗಿದ್ದು, ಸ್ಮಾರ್ಟ್‌ಫೋನಿಗೆ ದೀರ್ಘಕಾಲ ಬೆಂಬಲ ನೀಡುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಇದರ ಬೆಲೆಯು 10,990ರೂ.ಗಳು.

ಮೊಟೊರೊಲಾ ಒನ್‌ ಪವರ್

ಮೊಟೊರೊಲಾ ಒನ್‌ ಪವರ್

6.2 ಇಂಚಿನ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಲ್ಕಮ್ ಚಿಪ್‌ಸೆಟ್‌ನೊಂದಿಗೆ ಸ್ವ್ಯಾಪ್‌ಡ್ರಾಗನ್ 636 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಸಹ 5,000mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿಯನ್ನು ಒಳಗೊಂಡಿದ್ದು, ಅತ್ಯುತ್ತಮ ಚಾರ್ಜರ್ ಸೌಲಭ್ಯವನ್ನು ಪಡೆದಿದೆ. 4GB RAM ಮತ್ತು 64GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಹೊಂದಿದೆ. ಇದರ ಬೆಲೆಯು 12,999ರೂ.ಗಳು ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ30

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ30

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್ 6.4 ಇಂಚಿನ್‌ ಹೆಚ್‌ಡಿ ಪ್ಲಸ್‌ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿರುವ ಜೊತೆಗೆ Exynos 7904 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಹೊಂದಿದೆ. 5,000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ದೀರ್ಘಕಾಲ ಬಾಳಿಕೆ ಬರಲು ಸ್ಮಾರ್ಟ್‌ಫೋನಿಗೆ ಶಕ್ತಿಯನ್ನು ತುಂಬಲಿದೆ. ವೇಗದ ಚಾರ್ಜಿಂಗ್‌ಗೆ, 15W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಇದರ ಬೆಲೆಯು 14,990ರೂ.ಗಳು.

ಆಸೂಸ್‌ ಝೆನ್‌ಫೋನ್‌ ಮ್ಯಾಕ್ಸ್‌ ಪ್ರೋ ಎಂ2

ಆಸೂಸ್‌ ಝೆನ್‌ಫೋನ್‌ ಮ್ಯಾಕ್ಸ್‌ ಪ್ರೋ ಎಂ2

ಆಸೂಸ್‌ನ ಈ ಸ್ಮಾರ್ಟ್‌ಫೋನ್‌ 6.26 ಇಂಚಿನ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್‌ ಗೊರಿಲ್ಲಾ ಗ್ಲಾಸ್‌ 6 ನಿಂದ ರಕ್ಷಣೆ ಪಡೆದಿದೆ. ಕ್ವಾಲ್ಕಮ್ ಚಿಪ್‌ಸೆಟ್‌ನೊಂದಿಗೆ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ ಇದರಲ್ಲಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದೆ. ಇದರೊಂದಿಗೆ 10wನ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದ್ದು, ವೇಗದ ಚಾರ್ಜಿಂಗ್‌ಗೆ ಸಹಕಾರ ನೀಡುತ್ತದೆ. ಇದರ ಬೆಲೆಯು 9,999ರೂ.ಗಳು.

ರಿಯಲ್‌ ಮಿ 3

ರಿಯಲ್‌ ಮಿ 3

6.2 ಇಂಚಿನ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರುವ ರಿಯಲ್‌ ಮಿ 3 ಸ್ಮಾರ್ಟ್‌ಫೋನ್ ಗ್ರೇಡಿಯಂಟ್ ಕಲರ್‌ನಲ್ಲಿ ಕಂಗೊಳಿಸುತ್ತದೆ. ಹಾಗೂ ಇದರಲ್ಲಿ ಮೀಡಿಯಾಟೆಕ್ P70 ಪ್ರೊಸೆಸರ್‌ ಕಾರ್ಯನಿರ್ವಹಿಸುತ್ತದೆ. 3GB/4GB RAM ಮತ್ತು 32GB/64GB ಆಂತರಿಕ ಸಂಗ್ರಹದ ಆಯ್ಕೆಗಳನ್ನು ಹೊಂದಿದೆ. 4,230mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿಯನ್ನು ಒಳಗೊಂಡಿರುವ ಜೊತೆಗೆ ಉತ್ತಮ ಚಾರ್ಜರ್‌ ಹೊಂದಿದೆ. ಇದರ ಬೆಲೆಯು 8,999ರೂ.ಗಳು.

ಓದಿರಿ : ಸ್ಮಾರ್ಟ್‌ಫೋನಿನಲ್ಲಿ ಫೋಟೋ ಎಡಿಟ್‌ಗೆ ಈ ಆಪ್‌ಗಳು ಅತ್ಯುತ್ತಮ.! ಓದಿರಿ : ಸ್ಮಾರ್ಟ್‌ಫೋನಿನಲ್ಲಿ ಫೋಟೋ ಎಡಿಟ್‌ಗೆ ಈ ಆಪ್‌ಗಳು ಅತ್ಯುತ್ತಮ.!

Most Read Articles
Best Mobiles in India

English summary
Top 5 affordable smartphones with excellent battery backup.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X