ಝೆನ್‌ ಅಲ್ಟ್ರಾಫೋನ್‌ ಯು1 Vs ಮೈಕ್ರೋಮ್ಯಾಕ್ಸ್‌ ನಿಂಜಾ 3 A57

By Vijeth Kumar Dn
|

ಝೆನ್‌ ಅಲ್ಟ್ರಾಫೋನ್‌ ಯು1 Vs ಮೈಕ್ರೋಮ್ಯಾಕ್ಸ್‌ ನಿಂಜಾ 3 A57
ಭಾರತೀಯ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದಿನ ನಿತ್ಯಾ ಒಂದಲ್ಲಾ ಒಂದು ನೂತನ ಆಂಡ್ರಾಯ್ಡ್‌ ಬಜೆಟ್‌ ಸ್ಮಾರ್ಟ್‌ಪೋನ್‌ಗಳು ಬಿಡುಗಡೆ ಯಾಗುತ್ತಲೆ ಇರುತ್ತವೆ. ಅಂದಹಾಗೆ ಈ ಸಾಲಿಗೆ ಸ್ಥಳೀಯ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾದ ಝೇನ್‌ ಮೊಬೈಲ್ಸ್‌ ತನ್ನಯ ನೂತನ ಬಜೆಟ್‌ ಸ್ನೇಹಿ ಆದಂತಹ ಝೆನ್‌ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ ಅನ್ನು ಕೈಗೆಟಕುವದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದೀಗ ತಾನೆ ಮಾರುಕಟ್ಟೆ ಪ್ರವೇಶಿಸಿರುವ ನೂತನ ಝೆನ್‌ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಬಜೆಟ್‌ ಸ್ಮಾರ್ಟ್‌ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿಯೂ ಮೈಕ್ರೋಮ್ಯಾಕ್ಸ್‌ ಸಂಸ್ಥೆಯ ನಿಂಜಾ 3 ಎ57 ಸ್ಮಾರ್ಟ್‌ಫೋನ್‌ನ ಪ್ರಬಲ ಪ್ರತಿಸ್ಫರ್ಧಿ ಎಂದೇ ಝೆನ್‌ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ ಅನ್ನು ಗುರ್ತಿಸಲಾಗಿದೆ. ಹಾಗಿದ್ದಲ್ಲಿ ಬಲ್ಲಿ ಈ ಎರಡೂ ಸ್ಮಾರ್ಟ್‌ಫೋನ್‌ಗಳ ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ಬರೋಣ.

ತೂಕ ಹಾಗೂ ಸುತ್ತಳತೆ: ಝೆನ್‌ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ 110 x 56 x 8 ಸುತ್ತಳತೆ ಹೊಂದಿದ್ದು ತೂಕದ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ. ಹಾಗೂ ಮೈಕ್ರೋಮ್ಯಾಕ್ಸ್‌ ಎ57 ನಿಂಜಾ ಸ್ಮಾರ್ಟ್‌ಫೋನ್‌ 116 x 62 x 11.5 mm ಸುತ್ತಳತೆಯೊಂದಿಗೆ 94 ಗ್ರಾಂ ತೂಕವಿದೆ.

ದರ್ಶಕ: ಝೆನ್‌ ಅಲ್ಟ್ರಾಫೋನ್‌ ಯು1 ಹಾಗೂ ಮೈಕ್ರೋಮ್ಯಾಕ್ಸ್‌ ಎ57 ಎರಡೂ ಸ್ಮಾರ್ಟ್‌ಫೋನ್‌ ಗಳಲ್ಲಿ 3.5 ಇಂಚಿನ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ಹೊಂದಿದ್ದು 480 x 320 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿವೆ.

ಪ್ರೊಸೆಸರ್‌: ಝೆನ್‌ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ನಲ್ಲಿ 1GHz ಸಿಂಗಲ್‌ ಪ್ರೊಸೆಸರ್‌ ಹೊಂದಿದೆ, ಆದರೆ ನಿಂಜಾ 3 A57 ನಲ್ಲಿ ಕೊಂಚ ಉತ್ತಮವಾದ 1GHz ಕ್ವಾಲ್‌ಕಾಮ್‌ ಪ್ರೊಸೆಸರ್‌ ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಕೂಡಾ ಬಜೆಟ್‌ ಸ್ಮಾರ್ಟ್‌ಫೋನ್‌ಗಳಾದ್ದರಿಂದ ಆಂಡ್ರಾಯ್ಡ್‌ 2.3 ಜಿಂಜರ್ಬ್ರೆಡ್‌ ಆಪರೇಟಿಮಗ್‌ ಸಿಸ್ಟಂ ನೀಡಲಾಗಿದೆ.

ಸ್ಟೋರೇಜ್‌: ಈ ವಿಚಾರದಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ಸ್ಲಾಟ್‌ ನೀಡಲಾಗಿದ್ದು 32ಜಿಬಿ ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ. ಅಂದಹಾಗೆ ಝೆನ್‌ ಅಲ್ಟ್ರಾಫೋನ್‌ ಯು1 ನಲ್ಲಿ 512MB RAM ನೀಡಲಾಗಿದ್ದು ಮತ್ತೊಂದೆಡೆ ನಿಂಜಾ 3 A57 ಸ್ಮಾರ್ಟ್‌ಫೋನ್‌ನಲ್ಲಿ ಕೇವಲ 256MB RAM ನೀಡಲಾಗಿದೆ.

ಕ್ಯಾಮೆರಾ: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಹಿಂಬದಿಯ 3MP ಕ್ಯಾಮೆರಾ ನೀಡಲಾಗಿದ್ದು ವಿಡಿಯೋ ಕರೆಗಾಗಿ ಮುಂಬದಿಯ ವಿಜಿಎ ಕ್ಯಾಮೆರಾ ನೀಡಿಲ್ಲ.

ಕನೆಕ್ಟಿವಿಟಿ: ಡ್ಯುಯೆಲ್‌ ಸಿಮ್‌ ಫೀಚರ್‌ ಹೊಂದಿರುವ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಡಾಂಗಲ್‌ ಮೂಲಕ 3ಜಿ, Wi-Fi 802.11 b/g/n, ಬ್ಲೂಟೂತ್‌ ಹಾಗೂ ಮೈಕ್ರೋ ಯುಎಸ್‌ಬಿ ಪೋರ್ಟ್‌ ನೀಡಲಾಗಿದೆ.

ಬ್ಯಾಟರಿ: ಝೆನ್‌ ಅಲ್ಟ್ರಾಫೋನ್‌ ಯು1ನಲ್ಲಿ 1,200 mAh ಬ್ಯಾಟರಿ ನೀಡಲಾಗಿದ್ದು 5 ಗಂಟೆಗಳ ಟಾಕ್‌ ಟೈಮ್‌ ಹಾಗೂ 144 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ. ಆದರೆ ನಿಂಜಾ A57 ಸ್ಮಾರ್ಟ್‌ಫೋನ್‌ನಲ್ಲಿ 1,400 mAh Li-ion ಬ್ಯಾಟರಿ ನೀಡಲಾಗಿದ್ದು 8.5 ಗಂಟೆಗಳ ಟಾಕ್‌ ಟೈಮ್‌ 177 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ: ಖರೀದಿಸುವುದಾದರೆ ಝೆನ್‌ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ ರೂ. 4,999 ದರದಲ್ಲಿ ಲಭ್ಯವಿದ್ದರೆ, ನಿಂಜಾ 3 ಎ57 ರೂ. 4,750 ದರದಲ್ಲಿ ಲಭ್ಯವಿದೆ. ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಬೆಲೆಗಾಗಿ ಗೋಪ್ರೋಬೋ ಕ್ಲಿಕ್‌ ಮಾಡಿ ನೋಡಿ.

Read In English...

ಟಾಪ್‌ 5 ಮೈಕ್ರೋಮ್ಯಾಕ್ಸ್‌ ಬಜೆಟ್‌ ಸ್ಮಾರ್ಟ್‌ಫೋನ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X