Subscribe to Gizbot

ಝೆನ್‌ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ ಬಿಡುಗಡೆ

Posted By: Vijeth

ಝೆನ್‌ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ ಬಿಡುಗಡೆ

ದೆಹಲಿ ಮೂಲದ ಮೊಬೈಲ್‌ ತಯಾರಿಕಾ ಸಂಸ್ಥೆಯಾದ ಝೇನ್‌ ಮೊಬೈಲ್ಸ್‌ ತನ್ನಯ ನೂತನ ಆಂಡ್ರಾಯ್ಡ್‌ ಬಜೆಟ್‌ ಸ್ಮಾರ್ಟ್‌ಫೋನ್‌ ಆದಂತಹ ಝೆನ್‌ ಅಲ್ಟ್ರಾಫೋನ್‌ ಯು1 ಭಾರತೀಯ ಮಾರುಕಟ್ಟೆಗೆ ರೂ 4,999 ದರದಲ್ಲಿ ಬಿಡುಗಡೆ ಮಾಡಿದೆ.

ಅಂದಹಾಗೆ ಇದೀಗತಾನೆ ಮಾರುಕಟ್ಟೆ ಪ್ರವೇಶಿಸಿರುವ ನೂತನ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ ಭಾರತೀಯ ಬಜೆಟ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವಂತ ಸ್ಥಳೀಯ ತಯಾರಿಕಾ ಸಂಸ್ಥೆಯಾದ ಮೈಕ್ರೋ ಮ್ಯಾಕ್ಸ್‌ನ ಎ25 ಸ್ಮಾರ್ಟಿಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗಿದ್ದಲ್ಲಿ ಮಾರುಕಟ್ಟೆಯಲ್ಲಿನ ಇತರೇ ಬಜೆಟ್‌ ಸ್ಮಾರ್ಟ್‌ಪೋನ್‌ಗಳೊಂದಿಗೆ ಪೈಪೋಟಿ ನಡೆಸಲು ನೂತನ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಪೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಎಂಬುದನ್ನು ಒಮ್ಮೆ ನೋಡಿ ಬರೋಣ.

ವಿಶೇಷತೆ

ದರ್ಶಕ: ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ನಲ್ಲಿ 3.5 ಇಂಚಿನ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ನೀಡಲಾಗಿದ್ದು, 480 x 320 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: 1GHz ಪ್ರೊಸೆಸರ್‌ ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ: ಉಳಿದೆಲ್ಲಾ ಬಜೆಟ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಂತೆಯೆ ಅಲ್ಟ್ರಾಫೋನ್‌ ಯು1 ನಲ್ಲಿಯೂ ಕೂಡಾ 2.3 ಜಿಂಜರ್ಬೆಡ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಸ್ಟೋರೇಜ್‌: ಈ ವಿಚಾರದಲ್ಲಿ ಅಲ್ಟ್ರಾಫೋನ್‌ ಯು1 ಸ್ಮಾರ್ಟ್‌ಫೋನ್‌ 512MB RAM ಹೊಂದಿದ್ದು ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕ್ಯಾಮೆರಾ: 3.2MP ಕ್ಯಾಮೆರಾ ದೊಂದಿಗೆ LED ಫ್ಲಾಷ್‌ ಹಾಗೂ ಡಿಜಿಟಲ್‌ ಝೂಮಿಂಗ್‌ ನೀಡಲಾಗಿದೆ. ಅಂದಹಾಗೆ ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾ ಹೊಂದಿಲ್ಲ.

ಕನೆಕ್ಟಿವಿಟಿ: ಡ್ಯುಯೆಲ್‌ ಸಿಮ್‌ ನೊಂದಿಗೆ ಡಾಂಗಲ್‌ ಮೂಲಕ 3ಜಿ, Wi-Fi 802.11 b/g/n, ಬ್ಲೂಟೂತ್‌ ಹಾಗೂ ಮೈಕ್ರೋ ಯುಎಸ್‌ಬಿ ಪೋರ್ಟ್‌ ನೀಡಲಾಗಿದೆ.

ಬ್ಯಾಟರಿ: ನೂತನ ಸ್ಮಾರ್ಟ್‌ಫೋನ್‌ನಲ್ಲಿ 1,200 mAh ಬ್ಯಾಟರಿ ನೀಡಲಾಗಿದ್ದು 5 ಗಂಟೆಗಳ ಟಾಕ್‌ಟೈಮ್‌ ಹಾಗೂ 144 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಪ್ರೀ-ಲೋಡೆಡ್‌ ಅಪ್ಲಿಕೇಷನ್‌

ಸ್ಕೈಪ್‌, ಫೇಸ್‌ಬುಕ್‌, ಜಿ-ಟಾಕ್‌,ವಾಸ್‌ ಆಪ್‌, ಮ್ಯಾಪ್‌ ಮೈ ಇಂಡಿಯಾ, ನೆಕ್ಸ್‌ ಜಿಟಿವಿ ಹಾಗೂ ಸ್ಪೀಕಿಂಗ್‌ ಗಣೇಶ ಅಪ್ಲಿಕೇಷನ್‌ಗಳನ್ನು ನೀಡಲಾಗಿದೆ.

ಬೆಲೆ

ಖರೀದಿಸುವುದಾದರೆ ನೂತನ ಝೇನ್‌ ಅಲ್ಟ್ರಾಫೋನ್‌ ಯು1 ರೂ. 4,999 ದರದಲ್ಲಿ ಲಭ್ಯವಿದೆ.

ಆನ್‌ಲೈನ್‌ ಆಫರ್‌ನಲ್ಲಿನ ಟಾಪ್‌ 5 ಸ್ಮಾರ್ಟ್‌ಫೋನ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot