Subscribe to Gizbot

'ಜೊಪೊ ಕಲರ್ ಸಿ3' ಸ್ಮಾರ್ಟ್‌ಫೋನ್‌ ಭಾರತದಲ್ಲಿ 9,599 ರೂಗೆ ಲಾಂಚ್: ಏನಿದರ ವಿಶೇಷತೆಗಳು?

Written By:

ದಿಪಾವಳಿ ಹಬ್ಬದ ಸೀಸನ್ ಈಗಾಗಲೇ ರಂಗೇರಿದೆ. ಹಬ್ಬದ ಸೀಸನ್‌ನಲ್ಲಿ ಬಜೆಟ್ ಬೆಲೆಗೆ ಉತ್ತಮ ಫೀಚರ್‌ನ ಸ್ಮಾರ್ಟ್‌ಫೋನ್‌ ಖರೀದಿಸಲು ಹಲವರು ಪ್ಲಾನ್ ಸಹ ಮಾಡಿದ್ದಾರೆ. ಬಹುಶಃ ನಿಮ್ಮ ಬಜೆಟ್‌ ಬೆಲೆಗೆ ಈದೀಗ ಭಾರತದಲ್ಲಿ 9,599 ರೂಗೆ ಲಾಂಚ್ ಆಗಿರುವ 'ಜೊಪೊ ಕಲರ್ ಸಿ3' ಸ್ಮಾರ್ಟ್‌ಫೋನ್‌ ಉತ್ತಮ ಫೀಚರ್‌ಗಳಿಂದ ಇಷ್ಟವಾಗಬಹುದು. ಇದರ ವಿಶೇಷತೆಗಳು ಏನು ಎಂದು ತಿಳಿಯಲು ಮುಂದೆ ಓದಿರಿ.

'ಜೊಪೊ ಕಲರ್ ಸಿ3' ಸ್ಮಾರ್ಟ್‌ಫೋನ್‌ ಭಾರತದಲ್ಲಿ 9,599 ರೂಗೆ ಲಾಂಚ್

'ಜೊಪೊ ಕಲರ್ ಸಿ3'(Zopo Color C3) ಸ್ಮಾರ್ಟ್‌ಫೋನ್‌ 5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 2.5 ಕರ್ವುಡ್‌ ಗ್ಲಾಸ್ ಅನ್ನು ಮುಂಭಾಗದಲ್ಲಿ ಹೊಂದಿದೆ. ಮಿಡಿಯಾ ಟೆಕ್‌ MT6737 ಕ್ವಾಡ್‌ಕೋರ್ ಪ್ರೊಸೆಸರ್ ಚಾಲಿತವಾಗಿದ್ದು, 2GB RAM ಮತ್ತು 16GB ಆಂತರಿಕ ಸ್ಟೋರೇಜ್‌ ಹೊಂದಿದೆ. ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

'ಸೋನಿ ಎಕ್ಸ್‌ಪೇರಿಯಾ ‍‍‍‍‍XZ' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಖರೀದಿಗೆ ಆರಂಭ: ವಿಶೇಷತೆಗಳು!

ಕ್ಯಾಮೆರಾ ವಿಶೇಷತೆಯಲ್ಲಿ 5MP ಸೆಲ್ಫಿ ಕ್ಯಾಮೆರಾ ಮತ್ತು 8MP ಹಿಂಭಾಗ ಕ್ಯಾಮೆರಾ ಹೊಂದಿದೆ. ಪ್ರಮುಖವಾಗಿ ಜೊಪೊ ಸ್ಮಾರ್ಟ್‌ಫೋನ್‌ ಫ್ಲೋಟಿಂಗ್ ವೀಡಿಯೊ (Pip Video) ಗುಣವನ್ನು ಹೊಂದಿದೆ. ಈ ಫೀಚರ್‌ನಿಂದ ಇತರೆ ಆಪ್‌ಗಳನ್ನು ಬಳಸುವಾಗ ವೀಡಿಯೊ ಪ್ಲೇ ಆಗುತ್ತಿರುವುದನ್ನು ಬಳಕೆದಾರರು ನೋಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

'ಜೊಪೊ ಕಲರ್ ಸಿ3' ಸ್ಮಾರ್ಟ್‌ಫೋನ್‌ ಭಾರತದಲ್ಲಿ 9,599 ರೂಗೆ ಲಾಂಚ್

'ಜೊಪೊ ಕಲರ್ ಸಿ3' ಸ್ಮಾರ್ಟ್‌ಫೋನ್‌ ಪ್ರಮುಖ ಆನ್‌ಲೈನ್‌ ರೀಟೇಲ್ ಸ್ಟೋರ್‌ಗಳಲ್ಲಿ, ಗುಲಾಬಿ ಚಿನ್ನ, ಶಾಂಪೇನ್, ಸಮುದ್ರ ನೀಲಿ, ಕ್ಲಾಸಿಕ್ ಕಪ್ಪು ಮತ್ತು ಬೆಳ್ಳಿ ಬಣ್ಣಗಳಲ್ಲಿ ಆರಂಭಿಕ ಬೆಲೆ 9,599 ರೂಗೆ ಖರೀದಿಗೆ ಲಭ್ಯವಿದೆ.

'ಅಸೂಸ್ ಜೆನ್‌ಫೋನ್ 3 ಲೇಸರ್' ಭಾರತದಲ್ಲಿ ರೂ 18,999 ಕ್ಕೆ ಲಭ್ಯ

Read more about:
English summary
Zopo Color C3 launched in India for Rs 9,599. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot