ಭಾರತದಲ್ಲಿ ವಿಫುಲ ಉದ್ಯೋಗವಕಾಶ: ಸ್ವರ್ಗಕ್ಕೆ ಮೂರೇ ಗೇಣು

Written By:

ಭಾರತದಲ್ಲಿ ಕೈತುಂಬಾ ಸಂಬಳ ಪಡೆಯುವ ಆಸೆ ನಿಮ್ಮಲ್ಲಿದ್ದು ಅದಕ್ಕಾಗಿ ಸೂಕ್ತವಾದ ಕಾರ್ಯಸ್ಥಳವನ್ನು ನೀವು ಹುಡುಕುತ್ತಿದ್ದೀರಿ ಎಂದಾದಲ್ಲಿ ನಿಮಗೆ ಖಂಡಿತ ನಿರಾಸೆಯಾಗುವುದಿಲ್ಲ. ಭಾರತದಲ್ಲಿ ಕಾರ್ಯನಿರ್ವಹಿಸಲು ಸೂಕ್ತ ಎಂಬುದಾಗಿ ಘೋಷಿಸಿರುವ ಉತ್ತಮ ಕಚೇರಿಗಳ ಪರಿಚಯವನ್ನು ನಾವು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

ಓದಿರಿ: ಫೋನ್ ಕ್ಷೇತ್ರದಲ್ಲೇ ನಮ್ಮ ದೇಶದಿಂದ ಹೊಸ ಇತಿಹಾಸ ಸೃಷ್ಟಿ

ಅಧ್ಯಯನದ ಪ್ರಕಾರ ಕೆಲಸ ಮಾಡಲು ಇದು ಉತ್ತಮ ಸ್ಥಳ ಎಂಬ ಹೆಗ್ಗುರುತನ್ನು ಇದು ಪಡೆದುಕೊಂಡಿದ್ದು ಕಾರ್ಮಿಕರ ಸಂಖ್ಯೆ, ಉತ್ಪನ್ನ ವಿವರ ಮೊದಲಾದ ದಾಖಲೆಗಳಿಂದ ಈ ಕಚೇರಿ ನಿಮ್ಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇನ್ನು ತಾಂತ್ರಿಕ ರಂಗವೇ ನಿಮ್ಮ ಉದ್ಯೋಗ ಉದ್ದೇಶ ಎಂದಾದಲ್ಲಿ ಅದಕ್ಕೂ ಇಲ್ಲಿ ನಿಖರವಾದ ಮಾಹಿತಿ ಇದೆ.

ಓದಿರಿ: ಗ್ಯಾಜೆಟ್ಸ್: ಕೇವಲ ಅಂಬಾನಿಗಳಿಗೆ ಮಾತ್ರ!!!

ಹಾಗಿದ್ದರೆ ನಿಮ್ಮ ಭವಿಷ್ಯವನ್ನು ರೂಪಿಸಿ ಕೈತುಂಬಾ ಸಂಬಳವನ್ನು ನೀಡುವ ಟಾಪ್ ಟೆಕ್ ಕಂಪೆನಿಗಳ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ. ಭಾರತದಲ್ಲಿ ಕಾರ್ಯನಿರ್ವಹಿಸಲು ಈ ಸ್ಥಳಗಳು ಹೆಚ್ಚು ಸೂಕ್ತ ಎಂದೆನಿಸಿದೆ ಎಂಬುದೂ ಇಲ್ಲಿ ಹೈಲೈಟೆಡ್ ಅಂಶವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದರ್ಜೆ: 1

ದರ್ಜೆ: 1

RMSI

ಎನ್‌ಸಿಆರ್ ಆಧಾರಿತ ಟೆಕ್ ಸಂಸ್ಥೆಯಾಗಿದೆ RMSI. ಸಿಬ್ಬಂದಿಗಳಿಗೆ ತಮ್ಮ ಸಾಮರ್ಥ್ಯವನ್ನು ವೃದ್ಧಿಪಡಿಸುವ ಮಾರ್ಗವನ್ನು ಇದು ಒದಗಿಸುತ್ತಿದೆ.

ದರ್ಜೆ: 2

ದರ್ಜೆ: 2

ಗೂಗಲ್

ಟೆಕ್ ಕ್ಷೇತ್ರದಲ್ಲಿ ವಿಫುಲ ಅವಕಾಶವನ್ನು ಹೊಂದಿರುವ ಸಂಸ್ಥೆ ಗೂಗಲ್ ಆಗಿದೆ. ಉದ್ಯೋಗಿಗಳ ಸಂಪೂರ್ಣ ಕುಟುಂಬ ಸುರಕ್ಷೆಗೂ ಇದು ಬೆಂಬಲವನ್ನು ಒದಗಿಸುತ್ತಿದ್ದು ವೃತ್ತಿಯೊಂದಿಗೆ ಭವಿಷ್ಯ ನಿರ್ಮಾಣಕ್ಕೂ ಇದು ಭದ್ರ ಅಡಿಪಾಯವನ್ನು ಹಾಕಲಿದೆ.

ದರ್ಜೆ: 5

ದರ್ಜೆ: 5

SAP ಲ್ಯಾಬ್ಸ್

5 ನೇ ಸ್ಥಾನದಲ್ಲಿರುವ ಟೆಕ್ ಕಂಪೆನಿಯಾಗಿದೆ SAP ಲ್ಯಾಬ್ಸ್. ಉದ್ಯೋಗಿಗಳ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿ ಕೆಲಸ ಮಾಡಲು ಅವರಲ್ಲಿ ಸ್ಫೂರ್ತಿಯನ್ನು ಒದಗಿಸುತ್ತದೆ.

ದರ್ಜೆ: 7

ದರ್ಜೆ: 7

ಇನ್‌ಟ್ಯೂಟ್ ಇಂಡಿಯಾ

ಕಚೇರಿಯ ಒತ್ತಡವನ್ನು ಉದ್ಯೋಗಿಗಳ ಮೇಲೆ ಹಾಕದೇ ಅವರು ನಿರಾಯಾಸವಾಗಿ ಕೆಲಸ ಮಾಡುವಂತಹ ವಾತಾವರಣವನ್ನು ಈ ಟೆಕ್ ಸಂಸ್ಥೆ ಒದಗಿಸುತ್ತಿದೆ.

ದರ್ಜೆ: 15

ದರ್ಜೆ: 15

ಟೆಲಿಪರ್ಫಾಮೆನ್ಸ್ ಇಂಡಿಯಾ

ಭಾರತದಲ್ಲಿ ಉದ್ಯೋಗ ನಿರ್ವಹಿಸಲು ಅನುವು ಮಾಡಿಕೊಡುವ ಇನ್ನೊಂದು ಟೆಕ್ ಸಂಸ್ಥೆಯಾಗಿದೆ ಟೆಲಿಪರ್ಫಾಮೆನ್ಸ್ ಇಂಡಿಯಾ. ಇದು 15 ನೇ ಸ್ಥಾನದಲ್ಲಿದೆ. ಕಂಪೆನಿಯು 3943 ಉದ್ಯೋಗಿಗಳನ್ನು ಹೊಂದಿದೆ.

ದರ್ಜೆ: 19

ದರ್ಜೆ: 19

ಪಿಟ್ನಿ ಬೌಸ್ ಸಾಫ್ಟ್‌ವೇರ್ ಇಂಡಿಯಾ

2015 ಕ್ಕಾಗಿ ಭಾರತದಲ್ಲಿ ಕೆಲಸ ಮಾಡಲು ಬೆಸ್ಟ್ ಎಂದೆನಿಸಿರುವ ಸಂಸ್ಥೆ ಇದಾಗಿದೆ. ತಜ್ಞರಿಂದ ಅತ್ಯುತ್ತಮ ಸೆಶನ್‌ಗಳನ್ನು ನಡೆಸುವ ಮೂಲಕ ಕಂಪೆನಿ ಉದ್ಯೋಗಿಗಳಿಗೆ ತರಬೇತಿಯನ್ನು ನೀಡುತ್ತದೆ.

ದರ್ಜೆ: 20

ದರ್ಜೆ: 20

ಮೈಕ್ರೋಸಾಫ್ಟ್ ಇಂಡಿಯಾ

ಭಾರತದ ಅತ್ಯುತ್ತಮ ಕಂಪೆನಿ ಎಂಬ ಪಟ್ಟಿಯಲ್ಲಿ 20 ಸ್ಥಾನದಲ್ಲಿರುವ ಮೈಕ್ರೋಸಾಫ್ಟ್ ಇಂಡಿಯಾ ತನ್ನ ಸಂದರ್ಶನ ವಿಧಾನಕ್ಕಾಗಿ ಹೆಚ್ಚು ಪ್ರಸಿದ್ಧಿಯಲ್ಲಿದೆ.

ದರ್ಜೆ: 21

ದರ್ಜೆ: 21

ಅಡೋಬ್ ಸಿಸ್ಟಮ್ಸ್ ಇಂಡಿಯಾ

21 ನೇ ಸ್ಥಾನದಲ್ಲಿರುವ ಭಾರತದ ಉತ್ತಮ ಕಂಪೆನಿ ಎಂಬ ಹೆಸರನ್ನು ಗಳಿಸಿರುವ ಅಡೋಬ್ ಸಿಸ್ಟಮ್ಸ್ ಟೆಕ್ ಕ್ಷೇತ್ರದಲ್ಲಿ ಅಸಾಧಾರಣ ಕಾರ್ಯನಿರ್ವಹಣೆಯುಳ್ಳ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ದರ್ಜೆ: 22

ದರ್ಜೆ: 22

ನೆಟ್ ಅಪ್ಲಿಕೇಶನ್ ಇಂಡಿಯಾ

ಭಾರತದ ಅತ್ಯುತ್ತಮ ಕಂಪೆನಿ ಎಂಬ ಹೆಸರಿಗೆ ಭಾಜನವಾಗಿರುವ ಸಂಸ್ಥೆ ಇದಾಗಿದ್ದು 22 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಕಂಪೆನಿ ಡೇಟಾ ನಿರ್ವಹಣೆ ಮತ್ತು ಕ್ಲೌಡ್ ಸಲ್ಯುಶನ್ ಕಾರ್ಯನಿರ್ವಹಣೆ ಮಾಡುತ್ತದೆ.

ದರ್ಜೆ: 26

ದರ್ಜೆ: 26

ವೊಡಾಫೋನ್ ಇಂಡಿಯಾ

ಟೆಲಿಕಾಮ್ ದೈತ್ಯ ವೊಡಾಫೋನ್ 26 ನೇ ಸ್ಥಾನದಲ್ಲಿದ್ದು, 15 ಹೊಸ ಮಹಿಳಾ ರೀಟೈಲ್ ಸ್ಟೋರ್‌ಗಳನ್ನು ಆರಂಭಿಸಿದೆ. ಗ್ರಾಹಕರ ತೃಪ್ತಿ, ಹೆಚ್ಚಿನ ಉತ್ಪಾದನೆ, ಉತ್ತಮ ಕಾರ್ಯಕ್ಷಮತೆ ಇದರ ಮೂಲ ಭಾಗವಾಗಿದೆ.

ದರ್ಜೆ: 33

ದರ್ಜೆ: 33

ಮೆಕಾಫೆ ಸೇಲ್ಸ್ ಇಂಡಿಯಾ

ಸಾಫ್ಟ್‌ವೇರ್ ಮತ್ತು ಭದ್ರತಾ ಕಂಪೆನಿಯಾಗಿ ಪ್ರಸಿದ್ಧಿಯಲ್ಲಿರುವ ಮೆಕಾಫೆ ಫೀಲ್ಡ್ ಸೇಲ್ಸ್ ಉದ್ಯೋಗಿಗಳಿಗೆ ಹೆಚ್ಚಿನ ತರಬೇತಿಯನ್ನು ನೀಡುತ್ತದೆ. ಇನ್ನು ಸಿಡ್ನಿಯಲ್ಲಿ ವಾರದಲ್ಲಿ ಆಗಾಗ್ಗೇ ಹೊಸ ನೇಮಕಾತಿ ಕಾರ್ಯಕ್ರಮವನ್ನು ನಡೆಸುತ್ತಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
India's Best Companies to Work for in 2015 list is out. The Economic Times, alongwith Great Place to Work Institute, recently concluded its annual study aimed at identifying the best companies to work for in India in 2015. Over 700 organisations, across 20 industries participated in the survey.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot