Subscribe to Gizbot

ಫೋನ್ ಕ್ಷೇತ್ರದಲ್ಲೇ ನಮ್ಮ ದೇಶದಿಂದ ಹೊಸ ಇತಿಹಾಸ ಸೃಷ್ಟಿ

Written By:

ಭಾರತ ದೇಶಕ್ಕೆ ಇನ್ನು ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಖಾತ್ರಿಯಾಗಲಿದೆ. ಹೌದು ಮೊದಲ ಸ್ಥಾನವನ್ನು ಚೀನಾ ಪಡೆದುಕೊಂಡಿದ್ದರೂ, ಎರಡನೇ ಸ್ಥಾನದಲ್ಲಿದ್ದ ಯುಎಸ್ ಅನ್ನು ಹಿಂದಿಕ್ಕಿ ದೇಶ ಮುನ್ನಡೆಯುತ್ತಿದೆ.

ಓದಿರಿ: ಸಂದೇಹವೇ ಬೇಡ!!! ಈ ಫೋನ್‌ಗಳೇ ನಿಮ್ಮ ಆಯ್ಕೆಯಾಗಲಿ

ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಭಾರತೀಯರು ಮುಂದಿರುವ ಅಂಶ ಇದೀಗ ನಿಚ್ಚಳವಾಗುತ್ತಿದ್ದು ಟೆಕ್ ರಂಗಕ್ಕೆ ನಾವು ಆದಷ್ಟು ಸಮೀಪತೆಯನ್ನು ಪಡೆದುಕೊಳ್ಳುತ್ತಿದ್ದೇವೆ.

ಓದಿರಿ: ಗ್ಯಾಜೆಟ್ಸ್: ಕೇವಲ ಅಂಬಾನಿಗಳಿಗೆ ಮಾತ್ರ!!!

ಇಂದಿನ ಲೇಖನದಲ್ಲಿ ಈ ಅಂಕಿ ಅಂಶಗಳ ಕುರಿತು ವಿವರ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದು ಏಕೆ? ಏನು ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವದಲ್ಲೇ ಎರಡನೇ ಸ್ಥಾನ

7 ನೇ ಅತಿ ದೊಡ್ಡ ದೇಶ

7 ನೇ ಅತಿ ದೊಡ್ಡ ದೇಶ ಮತ್ತು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಭಾರತಕ್ಕೆ ಇನ್ನಷ್ಟು ಕೀರಿಟಗಳು ಅಲಂಕರಿಸಲಿವೆ. 2017 ರಲ್ಲಿ ವಿಶ್ವದಲ್ಲೇ ಇದು ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಂಬ ಬಿರುದನ್ನು ಪಡೆದುಕೊಳ್ಳಲಿದೆ.

ಪ್ರಥಮ ಸ್ಥಾನ

ಚೀನಾ

ಪ್ರಥಮ ಸ್ಥಾನವನ್ನು ಚೀನಾ ಪಡೆದುಕೊಂಡಿದ್ದು, ಭಾರತವು ಯುಎಸ್‌ಎಯನ್ನು ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿಸಿದೆ ಎಂದು ಸ್ಟ್ರೇಟಜಿ ವಿಶ್ಲೇಷಕರಾದ ಲಿಂಡಾ ಸುಯಿ ತಿಳಿಸಿದ್ದಾರೆ.

ಚೀನಾ ಕುಸಿತ

ಚೀನಾ ಪ್ರಮುಖ ಅಂಗ

ಜಾಗತಿಕ ಸ್ಮಾರ್ಟ್‌ಫೋನ್ ಬೆಳವಣಿಗೆಯಲ್ಲಿ ಚೀನಾ ಪ್ರಮುಖ ಅಂಗ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು ಈಗ ಈ ಸ್ಥಾನದಿಂದ ಚೀನಾ ಕುಸಿತವನ್ನು ಕಾಣುತ್ತಿದೆ. ಇನ್ನು ಭಾರತ ಮೊಬೈಲ್ ಕ್ಷೇತ್ರದಲ್ಲಿ ಹೆಚ್ಚು ಏರಿಕೆಯನ್ನು ಕಂಡುಕೊಳ್ಳುತ್ತಿದೆ.

174 ಮಿಲಿಯ

118 ಮಿಲಿಯನ್ ಸ್ಮಾರ್ಟ್‌ಫೋನ್‌

2015 ರಲ್ಲಿ ಭಾರತದಲ್ಲಿ 118 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವನ್ನು ಕಂಡಿವೆ, ಅಂದರೆ ಇದೇ ಏರಿಕೆಯಾದಲ್ಲಿ 2017 ರಲ್ಲಿ ಈ ಸಂಖ್ಯೆ 174 ಮಿಲಿಯಾಗೆ ಏರಿಕೆಯಾಗಲಿದೆ.

ಯುಎಸ್ 279.8 ಮಿಲಿಯನ್

ಭಾರತ 243 ಮಿಲಿಯನ್

2014 ರಲ್ಲಿ, ಇಂಟರ್ನೆಟ್ ಕ್ಷೇತ್ರದಲ್ಲಿ ಭಾರತ 243 ಮಿಲಿಯನ್ ಜನರನ್ನು ಹೊಂದಿದ್ದರೆ ಯುಎಸ್ 279.8 ಮಿಲಿಯನ್ ಅನ್ನು ಆನ್‌ಲೈನ್ ಕ್ಷೇತ್ರದಲ್ಲಿ ಪಡೆದುಕೊಂಡಿತ್ತು.

ಮಾರಾಟ

118 ಮಿಲಿಯನ್ ಸ್ಮಾರ್ಟ್‌ಫೋನ್‌

ವರದಿಯ ಪ್ರಕಾರ ಕಳೆದ ವರ್ಷ 118 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವನ್ನು ಕಂಡಿವೆ.

ಚೀನಾ

458 ಮಿಲಿಯನ್ ಸ್ಮಾರ್ಟ್‌ಫೋನ್‌

2015 ರಲ್ಲಿ ಚೀನಾದಲ್ಲಿ 458 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ.

164 ಮಿಲಿಯನ್

ಯುಎಸ್‌

ಯುಎಸ್‌ನಲ್ಲಿ 164 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದರೆ, 2017 ರಲ್ಲಿ 169 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ.

ಮಧ್ಯಮ ಸ್ಥಾನ

ಯುಎಸ್‌

ಇನ್ನು ಈ ಎಲ್ಲಾ ಅಂಶಗಳನ್ನು ನೋಡಿದಾಗ ಟೆಕ್ ಕ್ಷೇತ್ರದಲ್ಲಿ ಯುಎಸ್‌ ಮಧ್ಯಮ ಸ್ಥಾನದಲ್ಲಿದೆ.

ವಿಶ್ವದಲ್ಲೇ ಎರಡನೇ ಸ್ಥಾನ

ಭಾರತ ದೇಶ

ಈ ಎಲ್ಲಾ ಅಂಶಗಳನ್ನು ನೋಡಿದಾಗ ಭಾರತ ದೇಶ 2017 ರಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಳ್ಳುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see INDIA TO BECOME THE SECOND LARGEST SMARTPHONE MARKET BY 2017.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot