ರಿಲಾಯನ್ಸ್ ಜಿಯೋ 4G ನೆಟ್‌ವರ್ಕ್‌ಗೆ ಆಕರ್ಷಿಸುವ 7 ಬೆನಿಫಿಟ್‌ಗಳು

By Suneel
|

ದೀರ್ಘಕಾಲದ ನಂತರ ರಿಲಾಯನ್ಸ್ ತನ್ನ ಬಹು ನಿರೀಕ್ಷಿತ ಜಿಯೋ 4G ನೆಟ್‌ವರ್ಕ್‌ ಅನ್ನು ಬಿಡುಗಡೆ ಮಾಡಿ ಈಗಾಗಲೇ ಒಂದು ವಾರ ಕಳೆದಿದೆ. ಭಾರತೀಯ ಬಳಕೆದಾರರಿಗೆ ರಿಲಾಯನ್ಸ್ ಜಿಯೋ ಇತರೆ ದೇಶಗಳ ಟೆಲಿಕಾಂಗಳು ನೀಡುವ ದರಕ್ಕಿಂತ ಕಡಿಮೆ ದರದಲ್ಲಿ 4G ಸೇವೆ ನೀಡುತ್ತಿರುವುದು, ಅದರ ಬಗ್ಗೆ ಹೆಚ್ಚಿನ ಜನ ಮಾತನಾಡಲು ಕಾರಣವಾಗಿದೆ.

ಬಜೆಟ್‌ ಬೆಲೆಯಲ್ಲಿ ಡಾಟಾ ಸೇವೆ ನೀಡುವುದರ ಜೊತೆಗೆ, ಜಿಯೋ(jio) ಉಚಿತ ವಾಯ್ಸ್ ಕರೆ, ಪ್ರಾಥಮಿಕ ಮಲ್ಟಿಮೀಡಿಯಾ ಕಂಟೆಂಟ್ ಮತ್ತು ಇತರೆ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳನ್ನು ಯಾವುದೇ ಚಾರ್ಜ್‌ ಮಾಡದೇ ನೀಡುತ್ತಿದೆ.

ರಿಲಾಯನ್ಸ್ ಜಿಯೋಗೆ ನಿಮ್ಮ ನಂಬರ್ ಪೋರ್ಟ್‌ ಮಾಡದಿರಿ: 6 ಕಾರಣಗಳು

ಅಂದಹಾಗೆ ಸ್ಮಾರ್ಟ್‌ಫೋನ್ ಬಳಕೆದಾರರು ಆದಷ್ಟು ಶೀಘ್ರವಾಗಿ ರಿಲಾಯನ್ಸ್(Reliance) ಜಿಯೋ 4G ಸಿಮ್ ಬಳಸಲು ಆಕರ್ಷಿಸುವ 7 ಉಪಯೋಗಗಳನ್ನು ಜಿಯೋ 4G ಸೇವೆಯಲ್ಲಿ ನೀಡುತ್ತಿದ್ದು, ಅವುಗಳು ಯಾವುದು ಎಂದು ಸ್ಲೈಡರ್‌ನಲ್ಲಿ ಓದಿರಿ.

ಲೈಫ್‌ಟೈಮ್‌ ಉಚಿತ ವಾಯ್ಸ್ ಕರೆಗಳು

ಲೈಫ್‌ಟೈಮ್‌ ಉಚಿತ ವಾಯ್ಸ್ ಕರೆಗಳು

ರಿಲಾಯನ್ಸ್ ಇಂಡಸ್ಟ್ರಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ 'ಮುಕೇಶ್‌ ಅಂಬಾನಿ'ಯವರು ರಿಯಾಲನ್ಸ್ ಜಿಯೋ 4G ಸೇವೆ ಲಾಂಚ್‌ ವೇಳೆ ತನ್ನ ಜಿಯೋ ಬಳಕೆದಾರರ ವಾಯ್ಸ್ ಕರೆಗಳಿಗೆ ಲೈಫ್‌ಟೈಮ್‌ ಚಾರ್ಜ್‌ ಮಾಡುವುದಿಲ್ಲ ಎಂದು ಪ್ರಕಟಣೆ ಮಾಡಿದ್ದಾರೆ. ಅವರು ಕೇವಲ ಒಂದು ಸೇವೆಗೆ ಹಣ ಪಾವತಿಸುವ ಯೋಜನೆ ಆರಂಭಿಸಿದ್ದಾರೆ. ಅಂದರೆ ಬಳಕೆದಾರರು ವಾಯ್ಸ್ ಕರೆಗಳಿಗೆ ಹಣ ಪಾವತಿಸಿ ಅಥವಾ ಡಾಟಾ ಬಳಕೆಗೆ ಹಣ ಪಾವತಿಸಿ ಎಂಬುದಾಗಿದ್ದು, ಇವುಗಳೆರಡರಲ್ಲಿ ಯಾವುದಾದರೂ ಒಂದು ಸೇವೆಗೆ ಹಣ ಪಾವತಿಸಬೇಕಿದೆ. ರೋಮಿಂಗ್ ಸಮಯದಲ್ಲೂ ಸಹ ವಾಯ್ಸ್ ಕರೆಗೆ ಹಣ ಪಾವತಿಸುವ ಅಗತ್ಯವಿಲ್ಲ.

ಉಚಿತ 4G ಡಾಟಾ ಮತ್ತು ಇತರೆ ಸೇವೆಗಳ ಆಕ್ಸೆಸ್‌

ಉಚಿತ 4G ಡಾಟಾ ಮತ್ತು ಇತರೆ ಸೇವೆಗಳ ಆಕ್ಸೆಸ್‌

ಡಿಸೆಂಬರ್‌ ಅಂತ್ಯದವರೆಗೆ ಉಚಿತ 4G ಡಾಟಾ ಸೇವೆಯನ್ನು ರಿಲಾಯನ್ಸ್ ಜಿಯೋ ಗ್ರಾಹಕರು ಪಡೆಯಬಹುದಾಗಿದೆ. ಈ ಸೇವೆಯಲ್ಲಿ ಜಿಯೋ ವೈಫೈ ಹಾಟ್‌ಸ್ಪಾಟ್‌ಗೆ ಉಚಿತ ಆಕ್ಸೆಸ್, ಉಚಿತ ವಾಯ್ಸ್ ಕರೆ, ಅನ್‌ಲಿಮಿಟೆಡ್‌ 4G ಮತ್ತು ಮೆಸೇಜ್‌ ಸೇವೆ ಸೇರಿದೆ. ಅಲ್ಲದೇ ಜಿಯೋ ಮೊಬೈಲ್ ಆಪ್‌ಗಳ ಉಚಿತ ಆಕ್ಸೆಸ್‌ ಆಂಡ್ರಾಯ್ಡ್ ಮತ್ತು ಐಓಏಸ್‌ಗಳೆರಡನ್ನು ಒಳಗೊಂಡಿದೆ.

ಕೈಗೆಟುಕುವ 4G ಫೋನ್‌ಗಳು

ಕೈಗೆಟುಕುವ 4G ಫೋನ್‌ಗಳು

ರಿಲಾಯನ್ಸ್ ಈಗಾಗಲೇ ಲೈಫ್ ಬ್ರಾಂಡ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ರೂ.2.999 ರಿಂದ ಆರಂಭದಿಂದ ಲಭ್ಯವಿವೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಉಪಯೋಗವೆಂದರೆ 4G ಸಪೋರ್ಟ್. ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್‌ ಬೇಕಾದಲ್ಲಿ ರಿಲಾಯನ್ಸ್ ನಿಮಗೆ ಸೇವೆ ನೀಡುತ್ತದೆ.

ಕಡಿಮೆ ಬೆಲೆಯ ತಿಂಗಳ ಪ್ಲಾನ್‌ಗಳು

ಕಡಿಮೆ ಬೆಲೆಯ ತಿಂಗಳ ಪ್ಲಾನ್‌ಗಳು

ಭಾರತದಲ್ಲಿಯ ಇತರೆ ಟೆಲಿಕಾಂಗಳಿಗೆ ಹೋಲಿಸಿದರೆ, ರಿಲಾಯನ್ಸ್ ಜಿಯೋ ಕಡಿಮೆ ಬೆಲೆಯ ತಿಂಗಳ ಪ್ಲಾನ್‌ಗಳನ್ನು ನೀಡುತ್ತಿದೆ. ರೂ.499 ಕ್ಕೆ 4GB 4G ಡಾಟಾ ನೀಡುತ್ತಿದ್ದು, ಮನೆ ಅಥವಾ ಕಛೇರಿಗಳಲ್ಲಿ ಎಲ್ಇಲ ಬೇಕಾದರೂ ಸಂಪರ್ಕ ಪಡೆಯಬಹುದಾಗಿದೆ. ಅಲ್ಲದೇ ಸೂಚನೆ ಎಂದರೆ, ಕಂಪನಿಯು ಅನ್‌ಲಿಮಿಟೆಡ್‌ ಡೌನ್‌ಲೋಡ್‌ ಮತ್ತು ವಾಯ್ಸ್ ಕರೆಯನ್ನು ಉಚಿತವಾಗಿ ರಾತ್ರಿ ವೇಳೆ ನೀಡುತ್ತಿದೆ.

ಪ್ರೀಮಿಯಂ ಮಲ್ಟಿಮೀಡಿಯಾ ವಿಷಯಗಳ ಉಚಿತ ಆಕ್ಸೆಸ್

ಪ್ರೀಮಿಯಂ ಮಲ್ಟಿಮೀಡಿಯಾ ವಿಷಯಗಳ ಉಚಿತ ಆಕ್ಸೆಸ್

ಜಿಯೋ, 'ಜಿಯೋಬೀಟ್ಸ್, ಜಿಯೋಆನ್‌ಡಿಮ್ಯಾಂಡ್, ಜಿಯೋಪ್ಲೇ, ಜಿಯೋಮ್ಯಾಗ್ಸ್, ಜಿಯೋಎಕ್ಸ್‌ಪ್ರೆಸ್‌ನ್ಯೂಸ್‌ ಫಾರ್‌ ಮ್ಯೂಸಿಕ್‌ ಸ್ಟ್ರೀಮಿಂಗ್ ಮತ್ತು ಡೌನ್‌ಲೋಡ್‌, ಮೂವೀಸ್, ಲೈವ್‌ ಟಿವಿ, ಮ್ಯಾಗಜೀನ್ಸ್ ಮತ್ತು ನ್ಯೂಸ್‌ ಸೇವೆಗೆ ಒಟ್ಟಾರೆ ರೂ. 15,000 ಆಗುತ್ತದೆ. ಆದರೆ ಜಿಯೋ ಉಚಿತ ಆಕ್ಸೆಸ್‌ ಅನ್ನು ಒಂದು ವರ್ಷದವರೆಗೆ ನೀಡುತ್ತಿದೆ. ಆದರೆ ನಂತರದಲ್ಲಿ ಸೇವೆಗಳ ದರವನ್ನು ಕಾದುನೋಡಬೇಕಿದೆ.

ವಿಶೇಷ ದಿನಗಳಲ್ಲಿ ಯಾವುದೇ ಹೆಚ್ಚಿನ ಚಾರ್ಜ್‌ ಇಲ್ಲ

ವಿಶೇಷ ದಿನಗಳಲ್ಲಿ ಯಾವುದೇ ಹೆಚ್ಚಿನ ಚಾರ್ಜ್‌ ಇಲ್ಲ

ಭಾರತದ ಹಲವು ಟೆಲಿಕಾಂಗಳು ವಿಶೇಷ ರಜೆ ದಿನಗಳು, ಹಬ್ಬದ ದಿನಗಳು, ಹೊಸ ವರ್ಷಗಳಲ್ಲಿ ಹೆಚ್ಚುವರಿ ಚಾರ್ಜ್‌ ಮಾಡುತ್ತದೆ. ಆದರೆ ರಿಲಾಯನ್ಸ್ ಈ ರೀತಿಯ ಹೆಚ್ಚುವರಿ ಚಾರ್ಜ್‌ ಯಾವುದೇ ವಿಶೇಷ ದಿನಗಳಲ್ಲಿ ಇರುವುದಿಲ್ಲ ಎಂದು ಖಚಿತ ಪಡಿಸಿದೆ.

ಕಡಿಮೆ ಬೆಲೆಯ ಟ್ಯಾರಿಫ್ ಪ್ಲಾನ್‌ಗಳು

ಕಡಿಮೆ ಬೆಲೆಯ ಟ್ಯಾರಿಫ್ ಪ್ಲಾನ್‌ಗಳು

4G ಸಂಪರ್ಕದ ವಿಷಯದಲ್ಲಿ ಭಾರತದಲ್ಲಿ ಉತ್ತಮ ಟ್ಯಾರಿಫ್ ಪ್ಲಾನ್‌ಗಳನ್ನು ಜಿಯೋ ನೀಡುತ್ತಿದೆ. ಇತರೆ ಟೆಲಿಕಾಂಗಳಿಗಿಂತ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿದೆ. ಮೇಲಿನ ಇಮೇಜ್‌ ಅನ್ನು ಚೆಕ್‌ ಮಾಡಿ.

Best Mobiles in India

English summary
7 most attract Benefits of Reliance Jio 4G Network. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X