ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ ಏನು?

By Shwetha
|

ಏಪ್ರಿಲ್ 24 ರಂದು ಹೆಚ್ಚಿನ ಆಪಲ್ ಅಭಿಮಾನಿಗಳು ಆಪಲ್ ವಾಚ್ ಅನ್ನು ತಮ್ಮ ಕೈಗಳಲ್ಲಿ ಕಟ್ಟಿಕೊಳ್ಳಲಿದ್ದಾರೆ. ಇನ್ನು ಜಗತ್ತಿನ ಅತ್ಯುನ್ನತ ಅಪ್ಲಿಕೇಶನ್‌ಗಳು ಆಪಲ್ ವಾಚ್‌ನಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದು ಮಾರುಕಟ್ಟೆಯಲ್ಲಿ ಟಾಪ್ ಸ್ಥಾನದಲ್ಲಿ ಮಿಂಚುತ್ತಿರುವ ಇತರ ವಾಚ್‌ಗಳನ್ನು ಹಿಂದಿಕ್ಕುವ ಎಲ್ಲಾ ತಯಾರಿಯನ್ನು ಕ್ಯುಪರ್ಟಿನೊ ದೈತ್ಯ ತನ್ನ ವಾಚ್‌ಗೆ ಧಾರೆ ಎರೆಯುತ್ತಿದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ ಏನು?

ಇಂದಿನ ಲೇಖನದಲ್ಲಿ ವಾಚ್‌ನಲ್ಲಿರುವ ಕೆಲವೊಂದು ಭಾರತೀಯ ಅಪ್ಲಿಕೇಶನ್‌ಗಳನ್ನು ಕುರಿತು ನಾವು ಚರ್ಚಿಸೋಣ. ಭಾರತೀಯರಿಗೂ ಉಪಯೋಗಕಾರಿ ಎಂದೆನಿಸಿರುವ ಕೆಲವೊಂದು ಅಪ್ಲಿಕೇಶನ್‌ಗಳನ್ನು ಆಪಲ್ ಇದರಲ್ಲಿ ಅಳವಡಿಸಿದ್ದು ಅದು ಯಾವುದು ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?

ಕ್ಯಾಮೆರಾ ಪ್ಲಸ್

ಕರ್ನಾಟಕ ಕಂಪೆನಿ ಗ್ಲೋಬಲ್ ಡಿಲೈಟ್ ತಯಾರಿಸಿದ ಕ್ಯಾಮೆರಾ ಪ್ಲಸ್ ಅಪ್ಲಿಕೇಶನ್ ನಿಮ್ಮ ವಾಚ್‌ನಿಂದಲೇ ಫೋಟೋ ಅಥವಾ ವೀಡಿಯೊಗಳನ್ನು ಸೆರೆಹಿಡಿಯಬಹುದಾಗಿದೆ. ಅಪ್ಲಿಕೇಶನ್‌ಗಾಗಿ ವ್ಯೂ ಫೈಂಡರ್‌ನಂತೆ ಇದು ಕಾರ್ಯನಿರ್ವಹಿಸುತ್ತಿದ್ದು ಚಿತ್ರವನ್ನು ಸೆರೆ ಹಿಡಿದ ನಂತರ ಚಿತ್ರದ ಪೂರ್ವವೀಕ್ಷಣೆಯನ್ನು ಇದು ನಿಮಗೆ ನೀಡುತ್ತದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ ಏನು?

ಕ್ಲಿಯರ್ ಟ್ರಿಪ್

ಟ್ರಾವೆಲ್ ಪೋರ್ಟಲ್ ಕ್ಲಿಯರ್ ಟ್ರಿಪ್ ಆಪಲ್ ವಾಚ್‌ನಲ್ಲಿ ಅಳವಡಿಸಲಾಗಿರುವ ಪ್ರಥಮ ಭಾರತೀಯ ಅಪ್ಲಿಕೇಶನ್ ಆಗಿದೆ. ಸ್ಮಾರ್ಟ್‌ವಾಚ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ನೀವು ತೆರೆದಾಗ ನಿಮಗೆ ಫ್ಲೈಟ್‌ಗಳ ಮಾಹಿತಿ ಲಭ್ಯವಾಗಲಿದೆ. ನಿಮ್ಮ ನಿರ್ಗಮನದ 24 ತಾಸಿನವರೆಗೆ ಮುಂಬರಲಿರುವ ಪ್ರಯಾಣಗಳ ಮಾಹಿತಿಯನ್ನು ಇದು ಒದಗಿಸುತ್ತದೆ.

ಓದಿರಿ: ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ ಏನು?

ಎಚ್‌ಡಿಎಫ್‌ಸಿ ಬ್ಯಾಂಕ್ ಅಪ್ಲಿಕೇಶನ್

ಆಪಲ್ ವಾಚ್‌ನಲ್ಲಿ ಅಳವಡಿಸಲಾಗಿರುವ ಅಪ್ಲಿಕೇಶನ್ ಇದಾಗಿದ್ದು ವಾಚ್ ಬ್ಯಾಂಕಿಂಗ್ ಎಂಬ ಹೆಸರನ್ನು ಈ ಅಪ್ಲಿಕೇಶನ್ ಪಡೆದುಕೊಂಡಿದೆ. ಬ್ಯಾಲೆನ್ಸ್ ತನಿಖೆ, ಪ್ರಿಪೈಡ್ ಮೊಬೈಲ್ ಫೋನ್‌ಗಳ ರಿಚಾರ್ಜ್, ಚೆಕ್ ಬುಕ್ ವಿನಂತಿ ಮೊದಲಾದ ಮಾಹಿತಿಯನ್ನು ಇನ್ನು ವಾಚ್‌ನಲ್ಲೇ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ ಏನು?

ತಮಿಳು ಅಪ್ಲಿಕೇಶನ್‌ಗಳು

ತಮಿಳು ಸಾಹಿತಿ ಮಧನ್ ಕಾರ್ಕಿ ಆಪಲ್ ವಾಚ್‌ಗಾಗಿ ಎರಡು ಭಾಷಾ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. 'ಅಗರಾದಿ ಅಪ್ಲಿಕೇಶನ್' ಶಬ್ಧಕೋಶ ಆಗಿದ್ದು ಇನ್ನೊಂದು ಅಪ್ಲಿಕೇಶನ್ ಕವಿತೆಗಳ ಸಂಗ್ರಹವನ್ನು ಪಡೆದುಕೊಂಡಿದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ ಏನು?

ಅವಾಮೊ

ಬ್ಯುಸಿನೆಸ್ ಮೆಸೇಜಿಂಗ್ ಅಪ್ಲಿಕೇಶನ್ ಅವಾಮೊ ಬೆಂಗಳೂರಿಗರಿಂದ ಅಭಿವೃದ್ಧಿಯನ್ನು ಕಂಡುಕೊಂಡ ಅಪ್ಲಿಕೇಶನ್ ಆಗಿದ್ದು ಆಪಲ್ ವಾಚ್‌ಗಾಗಿಯೇ ನಿರ್ದಿಷ್ಟವಾಗಿ ತಯಾರಾಗಿದೆ. ಏಪ್ರಿಲ್ 24 ರಿಂದ ಈ ಅಪ್ಲಿಕೇಶನ್ ಅನ್ನು ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಸ್ಮಾರ್ಟ್‌ವಾಚ್ ಅನ್ನು ಈಗಾಗಲೇ ಪ್ರಿ ಆರ್ಡರ್ ಮಾಡಿಕೊಂಡವರಿಗೆ ಕಂಪೆನಿ ಅಪ್ಲಿಕೇಶನ್‌ನ ಸಾಗಾಣೆ ಮಾಡುತ್ತದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ ಏನು?

Most Read Articles
Best Mobiles in India

English summary
The Apple Watch is all set to adorn many wrists on April 24. Predictably, many global apps have already been updated for Apple’s “most personal device, yet” but even though the Watch isn’t launching in India, many Indian apps are looking to cater to early adopters.Here are five Indian apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more