ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?

Posted By:

ಕ್ಯುಪರ್ಟಿನೋ ಟೆಕ್ ದೈತ್ಯ ಆಪಲ್ ಹೊಸತನದ ಬೆನ್ನೇರಿ ಯಶಸ್ಸನ್ನು ಬುಟ್ಟಿಗೆ ಹಾಕಿಕೊಳ್ಳುವ ಚತುರತೆಯುಳ್ಳವರು. ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಏರಿದ ಎತ್ತರವನ್ನು ಯಾರಿಗೂ ಸಾಧ್ಯವಿಲ್ಲ ಎಂಬುದು ಪ್ರತಿಯೊಬ್ಬರ ಅಭಿಪ್ರಾಯ. ಅದಾಗ್ಯೂ ಆಪಲ್‌ನ ಐಫೋನ್ ಕಬ್ಬಿಣದ ಕಡಲೆ ಎಂಬುದನ್ನು ನೀವು ಗಮನಿಸಿದ್ದೀರಾ?

ಇದನ್ನೂ ಓದಿ: 2015 ರ ಹೊಸ ಫೋನ್‌ಗಳ ನೋಟ ಇದೋ ನಿಮಗಾಗಿ!

ಹೌದು ಮಧ್ಯಮ ವರ್ಗಕ್ಕೆ ಅಂತೆಯೇ ಬಜೆಟ್‌ಗೆ ತಕ್ಕುದಲ್ಲದ ಫೋನ್ ಆಗಿಲ್ಲದೇ ಇದ್ದರೂ ಐಫೋನ್ ಸಫಲತೆಯನ್ನು ಪಡೆದುಕೊಂಡಿದೆ. ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುವ ಗುರಿಯನ್ನು ಹೊಂದಿರುವ ಆಪಲ್ ಐಓಎಸ್ 9 ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿದೆ. ಐಓಎಸ್ 9 ಅನ್ನು ಐಫೋನ್‌ನಲ್ಲಿ ಅಳವಡಿಸುವುದಾದರೆ ಯಾವ ರೀತಿಯ ಮಾರ್ಪಾಡುಗಳನ್ನು ಐಫೋನ್‌ನಲ್ಲಿ ಕಾಣಬಹುದು ಎಂಬುದೇ ಇಂದಿನ ಲೇಖನದಲ್ಲಿರುವ ಗುಟ್ಟಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಳವಾಗಿರುವ ಸೆಟ್ಟಿಂಗ್ ಮೆನು

ಸರಳ ಹುಡುಕಬಹುದಾದ ಸೆಟ್ಟಿಂಗ್ ಮೆನು

ಐಓಎಸ್‌ನಲ್ಲಿ ಸೆಟ್ಟಿಂಗ್ ಅಪ್ಲಿಕೇಶನ್ ಹೆಚ್ಚಾಗಿದೆ, ಅದೂ ಅಲ್ಲದೆ ನೀವು ಹುಡುಕುತ್ತಿರುವುದನ್ನು ಇದರಲ್ಲಿ ಪತ್ತೆಹಚ್ಚುವುದು ಅಷ್ಟೊಂದು ಸುಲಭವಲ್ಲ. ಕೆಲವೊಂದು ಅಪ್ಲಿಕೇಶನ್‌ಗಳು ಮತ್ತು ಅವುಗಳ ಆದ್ಯತೆಗಳು ಸೆಟ್ಟಿಂಗ್ಸ್ ಅಪ್ಲಿಕೇಶನ್‌ನೊಳಗೆಯೇ ಬಹು ಫೋಲ್ಡರ್‌ಗಳಲ್ಲಿ ಹರಡಿಕೊಂಡಿವೆ. ಇದು ಗೋಜಲನ್ನು ಉಂಟುಮಾಡುವುದು ಸಹಜ. ಐಓಎಸ್ 9 ನಲ್ಲಿ ಸರಳವಾಗಿರುವ ಸೆಟ್ಟಿಂಗ್ ಮೆನುವನ್ನು ಕಾಣುವ ಬಯಕೆ ಆಪಲ್ ಬಳಕೆದಾರರದ್ದಾಗಿದೆ.

ಪ್ರಶ್ನೋತ್ತರ ಅಪ್ಲಿಕೇಶನ್

ಸಿರಿ

ಪ್ರಶ್ನೋತ್ತರ ಅಪ್ಲಿಕೇಶನ್ ಆಗಿರುವ ಸಿರಿಗೆ ನೀವು ಹಿಂದೆ ಕೇಳಿರುವ ಪ್ರಶ್ನೆ ನೆನಪಿರುವುದಿಲ್ಲ. ಇದು ಸ್ಮರಣೆ ಶಕ್ತಿಯನ್ನು ಪಡೆದಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ.

ಐಓಎಸ್ 8

ಮೂರನೇ ವ್ಯಕ್ತಿ ಡೆವಲಪರ್‌ಗಳು

ಸಿರಿಯನ್ನು ಮೂರನೇ ವ್ಯಕ್ತಿ ಸೇವೆಗಳಾದ - ಐಓಎಸ್ 8 ನೊಂದಿಗೆ ಸಂಯೋಜಿಸುವ ಪ್ರಯೋಗವನ್ನು ಆಪಲ್ ನಡೆಸುತ್ತಿದ್ದು ಯಾವ ಹಾಡು ಪ್ಲೇಯಾಗುತ್ತಿದೆ ಎಂಬುದನ್ನು ಇದು ಕಂಡುಹಿಡಿಯುತ್ತದೆ.

ಎನ್‌ಎಫ್‌ಸಿ ಚಿಪ್

ಎನ್‌ಎಫ್‌ಸಿ ಚಿಪ್‌ಗಾಗಿ ಮುಕ್ತ ಬೆಂಬಲ

ಐಫೋನ್ 6, ಮತ್ತು ಐಫೋನ್ 6 ಪ್ಲಸ್‌ನಲ್ಲಿರುವ ಎನ್‌ಎಫ್‌ಸಿ ಚಿಪ್ ಅನ್ನು ಆಪಲ್ ತನ್ನ ಮುಂದಿನ ಐಫೋನ್‌ಗಳಲ್ಲಿ ಲಾಂಚ್ ಮಾಡುವ ಸನ್ನಾಹದಲ್ಲಿದೆ. ಎನ್‌ಎಫ್‌ಸಿ ಸಕ್ರಿಯಗೊಂಡಿರುವ ಡಿವೈಸ್‌ಗಳಿಗೆ ಐಓಎಸ್ 9 ಬೆಂಬಲವನ್ನು ಒದಗಿಸುತ್ತಿದೆ.

ಮ್ಯಾಕ್‌

ಉತ್ತಮ ಬ್ಯಾಟರಿ ಸೇವಿಂಗ್

ಓಎಸ್ ಎಕ್ಸ್ ಮೆವ್ರಿಕಿಕ್ಸ್ ಹೇಗೆ ಹೊಸ ಬ್ಯಾಟರಿ ಸೇವಿಂಗ್ ತಂತ್ರಗಳನ್ನು ಮ್ಯಾಕ್‌ಗೆ ಪ್ರಸ್ತುತಪಡಿಸಿದೆಯೋ, ಇದೇ ರೀತಿ ಐಓಎಸ್ 9 ನಲ್ಲಿ ಬ್ಯಾಟರಿ ಉಳಿಸುವ ವಿಧಾನ ಬಂದಲ್ಲಿ ನಿಜಕ್ಕೂ ಅದ್ಭುತ ಎಂದೆನಿಸಲಿದೆ.

ಪರದೆಯ ಗಾಢತೆ

"ನೈಟ್ ಮೋಡ್"

ಪರದೆಯ ಗಾಢತೆಯನ್ನು ಕಡಿಮೆ ಮಾಡುವುದು ಒಳ್ಳೆಯ ವಿಚಾರವೇ. ಆಪಲ್‌ ಮತ್ತು ಇತರ ಥರ್ಡ್ ಪಾರ್ಟಿಗಳು "ನೈಟ್ ಮೋಡ್" ಅನ್ನು ಒದಗಿಸುತ್ತಿದ್ದು ಇದನ್ನು ಆಪಲ್ ಅಳವಡಿಸಿಕೊಂಡಲ್ಲಿ ಅತ್ಯುತ್ತಮ ಎಂದೆನಿಸಲಿದೆ.

 ಕೀಬೋರ್ಡ್ ಐಕಾನ್

ಕೀಬೋರ್ಡ್ ಆಯ್ಕೆಗಳು

ಕೆಳಭಾಗದ ಎಡ ಮೂಲೆಯಲ್ಲಿ ಐಫೋನ್ ಕೀಬೋರ್ಡ್ ಐಕಾನ್ ಅನ್ನು ಹೊಂದಿದೆ. ನೀವು ಅದನ್ನು ಕ್ಲಿಕ್ ಮಾಡಿದಾಗ, ಭಾಷೆಯಲ್ಲಿ ಪಠ್ಯ ಟೈಪ್ ಮಾಡುವ ಆಯ್ಕೆಗಳನ್ನು ನಿಮಗೆ ಕಾಣಬಹುದಾಗಿದೆ.

ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವ ಆಯ್ಕೆ

ಆಪಲ್ ಬ್ರ್ಯಾಂಡ್ ಉಳ್ಳ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವ ಆಯ್ಕೆ

ಆಪಲ್ ಬ್ಯಾಕಪ್ ಮಾಡಿರುವ ಫಸ್ಟ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ನಿಮಗೆ ಅಳಿಸಲಾಗುವುದಿಲ್ಲ. ಆದರೆ ನಿಮಗಿದನ್ನು ಅಳಿಸುವ ಆಯ್ಕೆ ಕೂಡ ಇರುತ್ತದೆ.

ಐಟ್ಯೂನ್ಸ್ ಮ್ಯಾಚ್

ಐಟ್ಯೂನ್ ಹೊಂದಿಕೆಗಳನ್ನು ಫಿಕ್ಸ್ ಮಾಡುವುದು

ಐಟ್ಯೂನ್ಸ್ ಮ್ಯಾಚ್ ಎಂಬುದು ಉತ್ತಮ ವಿಚಾರವಾಗಿದೆ. ನೀವು $25/ವರ್ಷಕ್ಕೆ ಚಂದಾದಾರಿಕೆಯನ್ನು ಖರೀದಿಸಿದರೆ ಮತ್ತು ಆಪಲ್ ನಿಮ್ಮ ಮೆಚ್ಚಿನ ಹಾಡುಗಳನ್ನು ಕ್ಲೌಡ್‌ನಲ್ಲಿ ಸಂಗ್ರಹಿಸುತ್ತದೆ ಇದರಿಂದ ನಿಮ್ಮ ಡಿವೈಸ್‌ಗೆ ಹಾಡುಗಳನ್ನು ಸ್ಟ್ರೀಮ್ ಮಾಡಿಕೊಳ್ಳಬಹುದಾಗಿದೆ.

ಅನಿಮೇಟೆಡ್ ವಾಲ್‌ಪೇಪರ್

ಹೆಚ್ಚು ಅನಿಮೇಟೆಡ್ ವಾಲ್‌ಪೇಪರ್

ಐಫೋನ್‌ನಲ್ಲಿ ವಾಲ್‌ಪೇಪರ್ ಸೊಗಸೇ ಬೇರೆ. ಆದರೆ ಆಪಲ್ ಕೆಲವೊಂದು ಬಿಲ್ಟ್ ಇನ್, ಅನಿಮೇಟೆಡ್ ಆಯ್ಕೆಗಳನ್ನು ಹೊಂದಿದೆ. ಇನ್ನಷ್ಟು ಅನಿಮೇಟೆಡ್ ವಾಲ್‌ಪೇಪರ್‌ಗಳನ್ನು ಐಓಎಸ್ 9 ನಲ್ಲಿ ಕಾಣುವ ಬಯಕೆ ನಮ್ಮದಾಗಿದೆ.

ಲ್ಯಾಂಡ್‌ಸ್ಕೇಪ್ ವೀಕ್ಷಣೆ

ಐಫೋನ್ 6 ಗಾಗಿ ಲ್ಯಾಂಡ್‌ಸ್ಕೇಪ್ ವೀಕ್ಷಣೆ

ಐಫೋನ್ 6 ಪ್ಲಸ್‌ನ ಮಾಲೀಕರು ತಮ್ಮ ಫೋನ್‌ ಅನ್ನು ಪಾರ್ಶ್ವಕ್ಕೆ ಸರಿಸಿದಾಗ ಸಂಪೂರ್ಣ ಇಂಟರ್ಫೇಸ್ ಪಾರ್ಶ್ವಕ್ಕೆ ತಿರುಗುತ್ತದೆ. ಕೆಲವೊಂದು ಅಪ್ಲಿಕೇಶನ್‌ಗಳು ಲ್ಯಾಂಡ್‌ಸ್ಕೇಪ್‌ನಲ್ಲೂ ಕಾರ್ಯನಿರ್ವಹಿಸುತ್ತವೆ ಇದರಿಂದಾಗಿ ನಿಮ್ಮ ಫೋನ್ ಅನ್ನು ಬಳಸುವುದು ಸರಳವಾಗುತ್ತದೆ. ಲ್ಯಾಂಡ್‌ಸ್ಕೇಪ್ ಐಫೋನ್ 6 ಗೂ ಬರಬೇಕು.

ಆಪಲ್ ಮ್ಯಾಪ್ಸ್‌

ಉತ್ತಮ ಆಪಲ್ ಮ್ಯಾಪ್ಸ್

ಆಪಲ್ ಮ್ಯಾಪ್ಸ್‌ನಲ್ಲಿರುವ ಡೇಟಾ ಉತ್ತಮಗೊಳ್ಳುತ್ತಿದೆ, ಆದರೆ ಆಪಲ್ ಇದನ್ನೂ ಇನ್ನೂ ಅತ್ಯುತ್ತಮಗೊಳಿಸಬೇಕಾಗಿದೆ. ಇನ್ನು ವದಂತಿಗಳ ಪ್ರಕಾರ ಆಪಲ್ ಇದರಲ್ಲಿ ದಿಕ್ಕುಗಳ ಆಯ್ಕೆಗಳನ್ನು ಸೇರಿಸಲಿದೆ.

ಕಂಟ್ರೋಲ್ ಸೆಂಟರ್

ಕಂಟ್ರೋಲ್ ಸೆಂಟರ್ ಬಟನ್ಸ್ ಕಸ್ಟಮೈಸ್ ಸಾಮರ್ಥ್ಯ

ಐಓಎಸ್ 7 ನಲ್ಲಿ ಕಂಟ್ರೋಲ್ ಸೆಂಟರ್ ಹೆಚ್ಚು ಪ್ರಯೋಜನಕಾರಿ ಆಯ್ಕೆಯಾಗಿದೆ. ಇದರಿಂದ ನಿಮ್ಮ ಫೋನ್‌ನ ಗಾಢತೆ ಮತ್ತು ಮ್ಯೂಸಿಕ್ ಅನ್ನು ಹೊಂದಿಸಬಹುದಾಗಿದೆ. ಪರದೆಯ ಕೆಳಭಾಗದಲ್ಲಿ ಸ್ವೈಪ್ ಮಾಡುವ ಮೂಲಕ ಫೋನ್‌ನ ಫ್ಲ್ಯಾಶ್‌ಲೈಟ್ ಅನ್ನು ಆನ್ ಮಾಡಬಹುದಾಗಿದೆ.

ಐಓಎಸ್ 9

ಫೀಚರ್ ವಿಶೇಷತೆ

ಇನ್ನು ಐಓಎಸ್ 9 ನಲ್ಲಿ ಯಾವೆಲ್ಲಾ ಫೀಚರ್‌ಗಳು ಇದ್ದರೆ ಉತ್ತಮ ಎಂಬ ಕಲ್ಪನೆಯನ್ನು ನಾವು ನಿಮ್ಮ ಮುಂದೆ ಇರಿಸಿದ್ದೇವೆ. ಯಾವುದು ಅಗತ್ಯ ಯಾವುದು ಅನುಪಯುಕ್ತ ಎಂಬ ತೀರ್ಮಾನವನ್ನು ಆಪಲ್ ನಿರ್ಧರಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Cupertino giant apple making all its products in a exclusive way. Day by day it is improving its technological way by brining new features. Here also we can see ios 9 magic in upcoming days.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot