ಶೀಘ್ರವೇ ಭಾರತದಲ್ಲಿ ಶುರುವಾಗಲಿದೆ 1000 mbps ವೇಗದ 5G ಇಂಟರ್ನೆಟ್ ಟೆಕ್ನಾಲಜಿ...!

ಸದ್ಯ 4G ಇಂಟರ್ನೆಟ್ ಸೇವೆಯನ್ನು ಆನಂದಿಸುತ್ತಿದ್ದು, ಇದೇ ಸಂಭ್ರಮದಲ್ಲಿ ಇರುವಾಗಲೇ 2017ರ ಕೊನೆಯ ಭಾಗದಲ್ಲಿ ಭಾರತಕ್ಕೆ 5G ಕಾಲಿಡಲಿದೆಯಂತೆ.

|

ಸದ್ಯ ದೇಶದಲ್ಲಿ ಡಿಜಿಟಲ್ ಕ್ರಾಂತಿ ವೇಗವಾಗಿ ಸಾಗಿದ್ದು, ಸ್ಮಾರ್ಟ್ ಸಿಟಿಗಳ ಕನಸು ಈಡೇರುವ ಸಹನಿಹಕ್ಕೆ ಬಂದಿದೆ. ಈಗಾಗಲೇ ಜನರು 4G ಇಂಟರ್ನೆಟ್ ಸೇವೆಯನ್ನು ಆನಂದಿಸುತ್ತಿದ್ದು, ಇದೇ ಸಂಭ್ರಮದಲ್ಲಿ ಇರುವಾಗಲೇ 2017ರ ಕೊನೆಯ ಭಾಗದಲ್ಲಿ ಭಾರತಕ್ಕೆ 5G ಕಾಲಿಡಲಿದೆಯಂತೆ, 1000 mbps ವೇಗದ ಇಂಟರ್ನೆಟ್ ಬಳಕೆಗೆ ಮುಕ್ತವಾಗಲಿದೆಯಂತೆ.

ಶೀಘ್ರವೇ ಭಾರತದಲ್ಲಿ ಶುರುವಾಗಲಿದೆ 1000 mbps ವೇಗದ 5G

ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ: ಎಲ್ಲೆಲ್ಲಿ ದೊರೆಯಲಿದೆ ಕುರಿತ ಸಂಪೂರ್ಣ ಮಾಹಿತಿ..1!

ಈ ಕುರಿತು ಮಾತನಾಡಿರುವ ಹುವಾವೆ ಇಂಡಿಯಾ ಸಿಇಓ ಜೈಚಾನ್, ಭಾರತೀಯಾ ಟೆಲಿಕಾಂ ಆಪರೇಟರ್‌ಗಳು ಈ ವರ್ಷದಲ್ಲೇ 5G ಟೆಕ್ನಾಲಜಿಯನ್ನು ಬಳಸಲು ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ MIMO (ಮಲ್ಟಿ ಇನ್, ಮಲ್ಟಿ ಔಟ್) ಟೆಕ್ನಾಲಜಿಯ ಸಂಶೋಧನೆಯಲ್ಲಿ ಮುಂಚುಣಿಯಲ್ಲಿದ್ದು, ಶೀಘ್ರವೇ ಇದು ಭಾರತಕ್ಕೆ ಕಾಲಿಡಲಿದೆ. ಎಂದಿದ್ದಾರೆ.

ಈ ಕುರಿತಂತೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಟೆಲಿಕಾಂ ಕಂಪನಿಗಳೂಂದಿಗೆ ಮಾತುಕತೆ ನಡೆದಿದ್ದು, ಹುವಾವೆ ಈ ಹೊಸ ಟೆಕ್ನಾಲಜಿಯನ್ನು ಭಾರತಕ್ಕೆ ಪರಿಚಯಿಸಲು ಮುಂದಾಗಿದೆ. ಇದಕ್ಕಾಗಿ ಟೆಲಿಕಾಂ ಕಂಪನಿಗಳು ಕೈ ಜೋಡಿಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಶೀಘ್ರವೇ ಭಾರತದಲ್ಲಿ ಶುರುವಾಗಲಿದೆ 1000 mbps ವೇಗದ 5G

ಓದಿರಿ: ಕಿಬೋರ್ಡ್ ಜೊತೆ ಟೆಚ್‌ಸ್ಕ್ರಿನ್ ಇರುವ ಬ್ಲಾಕ್‌ಬೆರಿ KEYone ಭಾರತಕ್ಕೆ..!!

ಈಗಾಗಲೇ ಭಾರ್ತಿ ಏರ್‌ಟೆಲ್ ನೊಂದಿಗೆ ಮಾತುಕತೆ ಕೊನೆಯ ಹಂತದಲ್ಲಿದ್ದು, ಶೀಘ್ರವೇ ಈ ಕುರಿತು ಪ್ರಕಟಣೆಯನ್ನು ಹೊರಡಿಸುವುದಾಗಿ ಅವರು ತಿಳಿಸಿದ್ದಾರೆ. ಈ ಹೊಸ ಟೆಕ್ನಾಲಜಿ ಸದ್ಯ ಹುವಾವೆ ಮತ್ತು ZTE ನಲ್ಲಿ ಮಾತ್ರ ಲಭ್ಯವಿದ್ದು, ಹಾಗಾಗಿ ಈ ಮಾತುಕತೆ ಫಲಪ್ರದವಾಗಲಿದೆ.

Best Mobiles in India

Read more about:
English summary
Indian telecom operators will start adopting 5G technology, which in present form can deliver up to 1000 mbps download speed. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X