ಗೂಗಲ್‌ ವರ್ಸಸ್‌ ಆಪಲ್‌. ಯಾರು ಉತ್ತಮ?

By Ashwath
|

ವಿಶ್ವದ ನಂಬರ್‌ ಒನ್‌ ಬ್ಯ್ರಾಂಡ್‌ ಕಂಪೆನಿಯಾಗಿ ಆಪಲ್‌ ಮೊನ್ನೆಯಷ್ಟೇ ಹೊರ ಹೊಮ್ಮಿದೆ. ಇಂಟರ್‌ಬ್ಯ್ರಾಂಡ್‌ ವರದಿ ಪ್ರಕಾರ ಕಳೆದ 13 ವರ್ಷಗಳಿಂದ ನಿರಂತರ ನಂಬರ್‌ ಒನ್‌ ಸ್ಥಾನದಲ್ಲಿದ್ದ ಕೋಕಾಕೋಲಾ ಕಂಪೆನಿಯನ್ನು ಆಪಲ್‌ ತನ್ನ ಆದಾಯ,ಮಾರುಕಟ್ಟೆಯಲ್ಲಿ ಹಿಂದಿಕ್ಕಿದೆ. ಇಂಟರ್‌ನೆಟ್‌ ದೈತ್ಯ ಗೂಗಲ್‌ ನಂಬರ್‌ 2 ಸ್ಥಾನಗಳಿಸಿದರೆ, ಕೋಕಾಕೋಲಾ ಮೂರನೇ ಸ್ಥಾನಗಳಿಸಿದೆ.

ಈ ಹಿಂದಿನಿಂದಲೂ ಆಪಲ್‌ಗೂ ಮತ್ತು ಗೂಗಲ್‌ ಕಂಪೆನಿಗಳ ಮಧ್ಯೆ ಸ್ಪರ್ಧೆ‌ ನಡೆದುಕೊಂಡು ಬಂದಿದೆ. ಈಗ ಈ ರ್‍ಯಾಂಕಿಂಗ್‌ನಿಂದಾಗಿ ಸೇವೆಗಳ ವಿಚಾರವಾಗಿ ಮತ್ತಷ್ಟು ಸ್ಪರ್ಧೆ ಆರಂಭಗೊಂಡಿದೆ.ಸ್ಮಾರ್ಟ್‌ಫೋನ್‌ ಆಪರೇಟಿಂಗ್‌ ಸಿಸ್ಟಂ, ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್‌, ಕ್ಲೌಡ್ ಸ್ಟೋರೆಜ್‌ನಲ್ಲಿ ಸೇರಿದಂತೆ ವಿವಿಧ ಪ್ರೊಡಕ್ಟ್‌ಗಳ ವಿಚಾರದಲ್ಲಿ ಗುಣಮಟ್ಟ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧೆ‌ ನಡೆಯುತ್ತಿದೆ. ಈ ಸ್ಪರ್ಧೆ‌ಯಲ್ಲಿ ಗೂಗಲ್‌ ಆಪಲ್‌ನ್ನು ಹಿಂದಿಕ್ಕಿದೆ. ಗೂಗಲ್‌ ಸೇವೆ ಮುಂದೆ ಆಪಲ್‌ ಈ ಸೇವೆಗಳು ಸ್ವಲ್ಪ ಮಂಕಾಗಿವೆ. ಹಾಗಾದ್ರೆ ಯಾವೆಲ್ಲ ಸೇವೆಗಳಲ್ಲಿ ಗೂಗಲ್‌ ಮುಂದಿದೆ ಎನ್ನುವುದಕ್ಕೆ ಇಲ್ಲಿ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಮುಪ್ಪು ತಡೆಯಲು ಗೂಗಲ್‌ ಆಪಲ್‌ನಿಂದ ಹೊಸ ಕಂಪೆನಿ!

#1

#1

ಗೂಗಲ್‌ ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್‌ ಗೂಗಲ್‌‌ ನೌ ಆಪಲ್‌ನ ಸಿರಿಗಿಂತ ಚೆನ್ನಾಗಿ ಬಳಕೆದಾರರ ಧ್ವನಿಯನ್ನು ಗ್ರಹಿಸಿ ಕೆಲಸ ಮಾಡಬಲ್ಲುದು.

#2

#2

ಗೂಗಲ್‌ ನೆಕ್ಸಸ್‌4 ಸ್ಮಾರ್ಟ್‌ಫೋನ್‌ಗೆ ಕಾಂಟ್ರಾಕ್ಟ್‌ ಹೊರತಾದ ಬೆಲೆ 199 ಡಾಲರ್‌. ಕಾಂಟ್ರಾಕ್ಟ್‌ ಹೊರತಾದ ಐಫೋನ್‌ 5ಎಸ್‌ಗೆ 649 ಡಾಲರ್‌.

#3

#3


ಇನ್ನೂ ತನ್ನ ಬಳಕೆದಾರರಿಗೆ ಗೂಗಲ್‌‌ ಆನ್‌ಲೈನ್‌ ಸ್ಟೋರೆಜ್‌ ಮಾಡಲು ಗೂಗಲ್‌ ಡ್ರೈವ್‌ನಲ್ಲಿ 15 GB ಡೇಟಾವನ್ನು ಉಚಿತವಾಗಿ ನೀಡಿದ್ದರೆ ಆಪಲ್‌ ಐಕ್ಲೌಡ್‌ನಲ್ಲಿ 5 GB ಡೇಟಾ ಮಾತ್ರ ಸಂಗ್ರಹಮಾಡಬಹುದು.

#4

#4


ಗೂಗಲ್‌ ಸೇವೆಗಳಾದ ಜಿಮೇಲ್‌‌,ಗೂಗಲ್‌ ಕ್ಯಾಲೆಂಡರ್‌, ಗೂಗಲ್‌ ಟಾಕ್‌‌..ಬಳಸಲು ಆಪಲ್‌ನ ಸಫಾರಿ ಬ್ರೌಸರ್‌‌ಗಿಂತ ಕ್ರೋಮ್‌ ಬ್ರೌಸರ್‌ ಹೆಚ್ಚು ಸಹಕಾರಿ. ಕ್ರೋಮ್‌ ಬ್ರೌಸರ್‌‌ನಲ್ಲಿ ಲಾಗಿನ್‌ ಆಗುವ ಮೂಲಕ ಈ ಎಲ್ಲಾ ಸೇವೆಗಳನ್ನು ಸುಲಭವಾಗಿ ಬಳಸಬಹುದು.

#5

#5


ಗೂಗಲ್‌ ನೆಕ್ಸಸ್‌ 7 ಆಪಲ್‌ ಐಪ್ಯಾಡ್‌ ಮಿನಿಗಿಂತ ಉತ್ತಮ ಮತ್ತು ಬೆಲೆ ಕಡಿಮೆ.

#6

#6


ಗೂಗಲ್‌ ಆಂಡ್ರಾಯ್ಡ್‌ ಓಎಸ್‌‌ ಬಳಕೆದಾರರ ಸಂಖ್ಯೆ ಆಪಲ್‌ ಐಓಎಸ್‌ಗಿಂತ ಹೆಚ್ಚಿದ್ದಾರೆ.ಐಡಿಸಿ ವರದಿಯ ಪ್ರಕಾರ ವಿಶ್ವದ ಶೇ.75.ರಷ್ಟು ಬಳಕೆದಾರರು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದರೆ,ಶೇ.16.ರಷ್ಟು ಬಳಕೆದಾರರು ಐಓಎಸ್‌ನ್ನು ಬಳಸುತ್ತಿದ್ದಾರೆ.

#7

#7


ಇನ್ನು ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲೂ ಗೂಗಲ್‌ ಆಪಲನ್ನು ಮೀರಿಸಿದೆ. ಐಡಿಸಿ ವರದಿಯಂತೆ ಶೇ.32 ರಷ್ಟು ಐಪ್ಯಾಡ್‌ಗಳಲ್ಲಿ ಐಓಎಸ್‌ ಇದ್ದರೆ ,ವಿಶ್ವದ ಶೇ.62 ಟ್ಯಾಬ್ಲೆಟ್‌ನಲ್ಲಿ ಆಂಡ್ರಾಯ್ಡ್‌ ಓಎಸ್‌ ಬಳಕೆಯಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X